fbpx
ಸಮಾಚಾರ

193 ರನ್ ಗಳಿಸಿದ್ದ ಪಾಕ್‌ನ ಫಖರ್ ರನ್ಔಟ್, ಡಿ ಕಾಕ್ ಮೋಸದಾಟಕೆ ನೆಟ್ಟಿಗರು ಕಿಡಿ: ವಿಡಿಯೋ ವೈರಲ್

ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನ ನಡುವಿನ ಏಕದಿನ ಸರಣಿಯಲ್ಲಿ ಪಾಕ್ ಕ್ರಿಕೆಟಿಗ ಫಖರ್ ಜಮಾನ್ ಕೇವಲ 7 ರನ್‌ನಿಂಧ ದ್ವಿಶತಕ ಬಾರಿಸುವ ಅವಕಾಶವನ್ನು ಕಳೆದುಕೊಂಡಿದ್ದರು. ಆದರೆ ಫಖರ್ ರನ್‌ಔಟ್ ಆರ ರೀತಿಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದು ಕ್ವಿಂಟನ್ ಡಿ ಕಾಕ್ ಕ್ರೀಡಾಸ್ಪೂರ್ತಿ ಹಾಗೂ ಆಟದ ನಿಯಮಗಳಿಗೆ ವಿರುದ್ಧವಾಗಿ ರನ್‌ಔಟ್ ಮಾಡಿದರಾ ಎಂಬ ಚರ್ಚೆಗಳು ನಡೆಯುತ್ತಿದೆ.

 

 

ದಕ್ಷಿಣ ಆಫ್ರಿಕಾ ನೀಡಿದ 342 ರನ್ ಗಳ ಬೃಹತ್ ಮೊತ್ತ ಬೆನ್ನಟ್ಟಿದ ಪಾಕಿಸ್ತಾನ 324 ರನ್ ಬಾರಿಸಿ 17 ರನ್ ಗಳಿಂದ ವಿರೋಚಿತ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ಫಖರ್ ಝಮಾನ್ 155 ಎಸೆತಗಳಲ್ಲಿ 193 ರನ್ ಬಾರಿಸಿದ್ದರು. 49.1 ಓವರ್ ನಲ್ಲಿ ರನೌಟ್ ಆಗಿ ಫಖರ್ ಪೆವಿಲಿನಯ್ ಸೇರಿದ್ದರು. ಆದರೆ ಫಖರ್ ರನೌಟ್ ಇದೀಗ ವಿವಾದಕ್ಕೆ ಕಾರಣವಾಗಿದೆ.

 

 

ಆಫ್ರಿಕಾದ ಲುಂಗಿ ಎನ್‌ಜಿಡಿ ಬೌಲಿಂಗ್ ನಲ್ಲಿ ಫಖರ್ ನೇರವಾಗಿ ಬಾರಿಸಿದರು. ಎರಡು ರನ್ ತೆಗೆದುಕೊಳ್ಳುತ್ತಿದ್ದಾಗ ಫೀಲ್ಡಿಂಗ್ ಮಾಡುತ್ತಿದ್ದ ಐಡೆನ್ ಮಾರ್ಕ್ರಮ್ ಥ್ರೋ ಮಾಡಿದರು. ಈ ವೇಳೆ ಡಿ ಕಾಕ್ ಚೆಂಡು ನಾನ್ ಸ್ಟ್ರೈಕ್ ನತ್ತ ಎಸೆಯುವಂತೆ ಸನ್ಹೆ ಮಾಡಿದರು. ಇದನ್ನು ಗಮನಿಸಿದ ಫಖರ್ ಸ್ಟ್ರೈಕ್ ನತ್ತ ಓಡುವುದನ್ನು ನಿಧಾನ ಮಾಡಿದರು. ಈ ವೇಳೆ ನೇರವಾಗಿ ತಮ್ಮ ಕೈಗೆ ಬಂದ ಚೆಂಡನ್ನು ಹಿಡಿದ ಡಿಕಾಕ್ ರನೌಟ್ ಮಾಡಿದರು. ಆ ಮೂಲಕ ಫಖಾರ್‌‌ ಝಮಾನ್‌ ಕೇವಲ 7 ರನ್‌ಗಳ ಅಂತರದಲ್ಲಿ ದ್ವಿಶತಕ ವಂಚಿತರಾದರು.

ಬ್ಯಾಟ್ಸ್‌ಮನ್‌ ಚಿತ್ತವನ್ನು ನಾನ್‌ಸ್ಟ್ರೈಕ್‌ ಕಡೆ ಸೆಳೆಯುವಂತೆ ಮಾಡಿದ ಕ್ವಿಂಟನ್‌ ಡಿ ಕಾಕ್‌ ಅವರ ನಡೆಯನ್ನು ಸೋಶಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ಟೀಕಿಸಿದ್ದಾರೆ. ಎಂಸಿಸಿ 41.5.1 ನಿಯಮದ ಪ್ರಕಾರ ‘ಬ್ಯಾಟ್ಸ್‌ಮನ್ ಚೆಂಡನ್ನು ಹೊಡೆದ ನಂತರ ರನ್‌ ಓಡುವ ಸಂದರ್ಭದಲ್ಲಿ ಯಾವುದೇ ಫೀಲ್ಡರ್‌ಗಳು ರನ್‌ ಓಡುವ ಆಟಗಾರನ ಮನಸ್ಸನ್ನು ಬೇರೆಡೆ ಸೆಳೆಯುವುದು, ದೈಹಿಕವಾಗಿ ತಡೆಯೊಡ್ಡುವುದು ಅಪರಾಧ.”

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top