ನಟ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಡುವೆ ವೈಮನಸ್ಸು ಉಂಟಾಗಿತ್ತು. ಆದರೆ ಎಲ್ಲಾ ಕಹಿ ಘಟನೆಗಳನ್ನು ಮರೆತಿರುವ ರಕ್ಷಿತ್ ಶೆಟ್ಟಿ ಅವರು ಕಳೆದ ವರ್ಷದಿಂದ ಮತ್ತೆ ರಶ್ಮಿಕಾ ಬಗ್ಗೆ ಪ್ರೋತ್ಸಾಹ ಭರಿತ ಮಾತುಗಳನ್ನು ಆಡುತ್ತಿದ್ದಾರೆ. ಈಗ ತಮ್ಮ ಮಾಜಿ ಪ್ರೇಯಸಿ ಜನ್ಮದಿನದ ಸಲುವಾಗಿ ಒಂದು ವಿಶೇಷ ವಿಡಿಯೋವನ್ನು ರಕ್ಷಿತ್ ಹಂಚಿಕೊಂಡಿದ್ದಾರೆ.
Sharing this beautiful memory of yours from the @KirikParty audition. You have travelled so far since then, chasing you'r dreams like a real worrier. Proud of you girl and Happy Birthday to you. May you see more success 😀🤗 @iamRashmika pic.twitter.com/6M1rBCQnee
— Rakshit Shetty (@rakshitshetty) April 5, 2021
ರಕ್ಷಿತ್ ಶೆಟ್ಟಿ ಅವರು ನಟಿ ರಶ್ಮಿಕಾ ಮಂದಣ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಇಂದು ತಮ್ಮ ಟ್ವಿಟರ್ ನಲ್ಲಿ ಶುಭಾಶಯ ತಿಳಿಸಿರುವ ರಕ್ಷಿತ್ ‘ಕಿರಿಕ್ ಪಾರ್ಟಿ ಬಳಿಕ, ಬಹುದೂರ ಕ್ರಮಿಸಿರುವೆ. ಕನಸನ್ನು ನಿಜವಾದ ಯೋಧನಂತೆ ಬೆನ್ನಟ್ಟುತ್ತಿರುವೆ. ಪ್ರೌಡ್ ಆಫ್ ಯು ಗರ್ಲ್, ಜನ್ಮದಿನದ ಶುಭಾಶಯಗಳು. ಮತ್ತಷ್ಟು ಯಶಸ್ಸು ನಿನಗೆ ದೊರೆಯಲಿ’ ಎಂದು ಟ್ವೀಟ್ ಮೂಲಕ ಹಾರೈಸಿದ್ದಾರೆ.
ಇದರ ಜೊತೆಗೆ ಕಿರಿಕ್ ಪಾರ್ಟಿಯ ಸಾನ್ವಿ ಜೋಸೆಫ್ ಪಾತ್ರಕ್ಕೆ ನಡೆದ ಅಡಿಷನ್ನ ವಿಡಿಯೊವೊಂದನ್ನು ರಕ್ಷಿತ್ ಅಪ್ಲೋಡ್ ಮಾಡಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದಲ್ಲಿ ಕಾಲೇಜಿನಲ್ಲಿ ನಡೆಯುವ ಸನ್ನಿವೇಶ ಇದಾಗಿದ್ದು, ರಕ್ಷಿತ್ ಶೆಟ್ಟಿ ಅವರೇ ರಶ್ಮಿಕಾ ಮುಂದೆ ಕುಳಿತುಕೊಂಡು ದೃಶ್ಯವೊಂದರ ಸಂಭಾಷಣೆ ನಡೆಸುತ್ತಿರುವುದು ಇದರಲ್ಲಿದೆ. ರಶ್ಮಿಕಾ ಅವರ ಮೊದಲ ಚಿತ್ರ ಇದಾಗಿದ್ದ ಕಾರಣ, ಸಂಭಾಷಣೆ ವೇಳೆ ತಪ್ಪು ಮಾಡಿದಾಗ, ಸ್ವತಃ ರಕ್ಷಿತ್ ಶೆಟ್ಟಿ ಅವರೇ ರಶ್ಮಿಕಾ ಅವರಿಗೆ ಮುಖಭಾವನೆ, ಸಂಭಾಷಣೆ ಹೇಳಿಕೊಡುತ್ತಿದ್ದ ದೃಶ್ಯವೂ ಇದರಲ್ಲಿದೆ. ಜೊತೆಗೆ ಬಬ್ಲಿ ಬಬ್ಲಿಯಾಗಿ ರಶ್ಮಿಕಾ ನಟಿಸುತ್ತಾ, ಡೈಲಾಗ್ ಹೇಳುತ್ತಾ ಖುಷಿಪಡುತ್ತಿರುವುದು ಸೆರೆಯಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
