fbpx
ಸಮಾಚಾರ

ಪ್ರೀತಿಸಿ ಮದುವೆ ಮಾಡಿಕೊಂಡಿದ್ದ ನಿಧಿ ಸುಬ್ಬಯ್ಯ ಸಂಸಾರ ಮುರಿದು ಬಿತ್ತಾ?ಪತಿಯಿಂದ ನಿಧಿ ವಿಚ್ಛೇದನ?

ನಟಿ ನಿಧಿ ಸುಬ್ಬಯ್ಯ ಬಿಗ್​ ಬಾಸ್​ ಮನೆ ಪ್ರವೇಶಿಸಿ ಆರು ವಾರಗಳು ಕಳೆದಿವೆ. ಎಲ್ಲಾ ಸ್ಪರ್ಧಿಗಳು ತಮ್ಮ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ನಿಧಿ ಕೂಡ ಇದಕ್ಕೆ ಹೊರತಾಗಿಲ್ಲ. ತಮ್ಮ ತಂದೆಗೆ ಕ್ಯಾನ್ಸರ್​ ಆಗಿತ್ತು ಎಂಬಿತ್ಯಾದಿ ವಿಚಾರಗಳನ್ನು ಹಂಚಿಕೊಂಡಿದ್ದರು. ಆದರೆ, ಅವರು ಎಲ್ಲಿಯೂ ಮದುವೆ ಆಗಿದೆ ಎನ್ನುವ ವಿಚಾರದ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಇದು ಏಕೆ? ಎನ್ನುವ ಪ್ರಶ್ನೆ ಅನೇಕರಲ್ಲಿ ಕಾಡುತ್ತಿದೆ.

ಫೆಬ್ರವರಿ 11,2017ರಲ್ಲಿ ವಿರಾಜಪೇಟೆ ಖಾಸಗಿ ರೆಸಾರ್ಟ್‌ವೊಂದರಲ್ಲಿ ಗೆಳೆಯ ಲವೇಶ್‌ ಜೊತೆ ನಿಧಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮುಂಬೈ ಮೂಲದ ಲವೇಶ್‌ ಉದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದವರು. ಕೆಲವು ಮೂಲಗಳ ಮಾಹಿತಿ ಪ್ರಕಾರ ನಿಧಿ ಮದುವೆ ಆದ ನಂತರ ವಿದೇಶದಲ್ಲಿ ನೆಲೆಸಿದ್ದರು, ಎನ್ನಲಾಗಿದೆ. ಈ ಅವಧಿಯಲ್ಲಿ ನಿಧಿ ಸೋಷಿಯಲ್ ಮೀಡಿಯಾದಿಂದಲೂ ದೂರವಿದ್ದರು.

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್‌ವೊಂದರಲ್ಲಿ ವೈಷ್ಣವಿ ತಮ್ಮ ಬಾಯ್‌ಫ್ರೆಂಡ್ ಬೇಕು, ಬೇಗ ಮದುವೆ ಆಗಬೇಕು ಎಂದು ಹೇಳಿಕೊಂಡಿದ್ದರು. ವೈಷ್ಣವಿ ಮುಖದಲ್ಲಿ ಮಂದಹಾಸ ಕಂಡು ನಿಧಿ ನಗು ನಗುತ್ತಲೇ ‘ನನಗೂ ಲವರ್ ಬೇಕು,’ ಎಂದು ಹೇಳಿದ್ದಾರೆ. ಈ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸಿದ ನೆಟ್ಟಿಗರು ನಿಧಿ ಮದುವೆ ಆಗಿದ್ದರೂ ಹೇಗೆ ಯಾಕೆ ಹೇಳಿದ್ದಾರೆ ಎಂದು ಚಿಂತಿಸಿದ್ದಾರೆ.

ನಿಧಿ ಬಿಬಿ ಮನೆಯಲ್ಲಿದ್ದರೂ ತಮ್ಮ ಆಪ್ತರ ಮೂಲಕ ಸೋಷಿಯಲ್ ಮೀಡಿಯಾ ಮೂಲಕ ವೋಟ್‌ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಅದೇ ಖಾತೆಯನ್ನು ಸಂಪೂರ್ಣವಾಗಿ ನೋಡಿದವರು ನಿಧಿ ಪತಿ ಲವೇಶ್ ಜೊತೆಗಿರುವ ಪೋಟೋ ಎಲ್ಲಿಯೂ ಇಲ್ಲ. ಇಬ್ಬರೂ ಮದುವೆಯಾದ ಒಂದು ವರ್ಷದಲ್ಲಿ ವಿಚ್ಛೇದನ ಪಡೆದಿದ್ದಾರೆ ಎಂಬ ಮಾತುಗಳನ್ನುಆಡುತ್ತಿದ್ದಾರೆ. ಯಾವುದು ಸತ್ಯ, ಯಾವುದು ಸುಳ್ಳು ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲ. ಸದ್ಯ, ಈ ವಿಚಾರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಇದೆ. ಈ ಬಗ್ಗೆ ಅವರು ಬಿಗ್​ ಬಾಸ್​ ಮನೆಯಲ್ಲಿ ಎಲ್ಲಾದರೂ ಹೇಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top