fbpx
ಸಮಾಚಾರ

ಶರತ್ ಕುಮಾರ್-ರಾಧಿಕಾ ದಂಪತಿಗೆ 1ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

ತಮಿಳಿನ ತಾರಾ ದಂಪತಿ ನಟ, ರಾಜಕಾರಣಿ ಶರತ್ ಕುಮಾರ್ ಮತ್ತು ರಾಧಿಕಾ ಶರತ್ ಕುಮಾರ್ ಅವರಿಗೆ ಕೋರ್ಟ್ ಒಂದು ವರ್ಷದ ಜೈಲು ಶಿಕ್ಷೆ ಪ್ರಕಟಿಸಿದೆ. ಸಾಲ ಮರುಪಾವತಿ ಮಾಡಿಲ್ಲ ಎಂದು ಶರತ್ ಕುಮಾರ್ ವಿರುದ್ಧ 7 ಪ್ರಕರಣಗಳು ಮತ್ತು ರಾಧಿಕಾ ವಿರುದ್ಧ 2 ಪ್ರಕರಣಗಳು ದಾಖಲಾಗಿತ್ತು. ಈ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಲಯ ದಂಪತಿಗೆ ಜೈಲು ಶಿಕ್ಷೆ ವಿಧಿಸಿದೆ.

ಇವರ ಜತೆ ಮಲಯಾಳದ ಚಿತ್ರನಿರ್ಮಾಪಕ ಲಿಸ್ಟನ್​ ಸ್ಟೆಫನ್​ ಅವರಿಗೂ ಶಿಕ್ಷೆ ವಿಧಿಸಲಾಗಿದೆ. 2014ರಲ್ಲಿ ಇವರೆಲ್ಲರೂ ಸೇರಿ ಚಿತ್ರನಿರ್ಮಾಣಕ್ಕೆ ಸಂಬಂಧಿಸಿದಂತೆ ಹಣಕಾಸು ಕಂಪೆನಿಯೊಂದರಿಂದ ಎರಡು ಕೋಟಿ ರೂಪಾಯಿ ಸಾಲ ಪಡೆದುಕೊಂಡಿದ್ದರು. ಈ ಸಾಲದಲ್ಲಿ ಎರಡು ಚಲನಚಿತ್ರಗಳನ್ನು ನಿರ್ಮಿಸುವುದಾಗಿ ಹೇಳಿದ್ದರು..

ಸಹನಟನಾಗಿರುವ ಮ್ಯಾಜಿಕ್ ಫ್ರೇಮ್ಸ್, ವಿಕ್ರಮ್ ಪ್ರಭು ಮತ್ತು ಕೀರ್ತಿ ಸುರೇಶ್ ಅವರೊಂದಿಗೆ 2014 ರಲ್ಲಿ ಚಿತ್ರ ಮಾಡಲು ಯೋಜಿಸಿದ್ದು ಅವರು ರೇಡಿಯನ್ಸ್‌ನಿಂದ 1.5 ಕೋಟಿ ರೂ ಹಣ ಪಡೆದುಕೊಂಡಿದ್ದರು, ಮಾರ್ಚ್ 2015 ರೊಳಗೆ ಹಣವನ್ನು ಹಿಂದಿರುಗಿಸುವುದಾಗಿ ಅವರು ಹೇಳಿದರು. ಆದರೆ ಹಣವನ್ನು ಹಿಂದಿರುಗಿಸಲಿಲ್ಲ. ಅವರು ಕೊಟ್ಟಿದ್ದ ಚೆಕ್​ ಬೌನ್ಸ್​ ಆಗಿತ್ತು.

ಶರತ್ ಕುಮಾರ್, ರಾಧಿಕಾ ಮತ್ತು ಇತರ ಇಬ್ಬರು ವ್ಯಕ್ತಿಗಳ ವಿರುದ್ಧವಿದ್ದ ಎರಡು ಚೆಕ್ ಬೌನ್ಸ್ ಹಿನ್ನೆಲೆಯಲ್ಲಿ ದಂಪತಿ ವಿರುದ್ಧ ಕ್ರಿಮಿನಲ್​ ಕೇಸ್​ ದಾಖಲಾಗಿತ್ತು. ಮದ್ರಾಸ್ ಹೈಕೋರ್ಟ್​ ಇವರ ವಿರುದ್ಧ ಇದ್ದ ಕ್ರಿಮಿನಲ್​ ಕೇಸ್​ ಅನ್ನು ರದ್ದು ಮಾಡಿತ್ತು. ಆದರೆ ಈ ಪ್ರಕರಣದ ವಿಚಾರಣೆಯನ್ನು ನಡೆಸುವಂತೆ ವಿಶೇಷ ಕೋರ್ಟ್​ಗೆ ಆದೇಶಿಸಿತ್ತು. ಇದೀಗ ವಿಚಾರಣೆ ಸಂಪೂರ್ಣಗೊಂಡಿದ್ದು, ಒಂದು ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ. ಬುಧವಾರ ಈ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎನ್.ಅಲಿಸಿಯಾ ಶರತ್ ಕುಮಾರ್-ರಾಧಿಕಾ ದಂಪತಿಗಳಿಗೆ ಶಿಕ್ಷೆ ಪ್ರಕಟಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top