ಸಿನಿಮಾ ನಟಿಯರ ಹಾವಭಾವ ಮತ್ತು ಅವರು ಮಾಡೋ ಕಮೆಂಟುಗಳನ್ನಿಟ್ಟುಕೊಂಡು ಟ್ರೋಲ್ ಮಾಡುವವರ ಹಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತಕ್ಕಿಟ್ಟುಕೊಂಡಿದೆ. ಅದರಲ್ಲಿಯೂ ಕೆಲ ಮಂದಿ ಎಗ್ಗುಸಿಗ್ಗಿಲ್ಲದೆ ಹೆಣ್ಣುಮಕ್ಕಳ ಅಂಗಾಂಗಗಳ ಬಗ್ಗೆ ಅಷ್ಲೀಲವಾಗಿ ಕೊಳಕು ಟ್ರಾಲ್ ಮಾಡೋ ಮೂಲಕ ನಟಿಯರನ್ನು ಮಾನಸಿಕ ಹಿಂಸೆಗೀಡು ಮಾಡೋದೂ ಇದೆ.. ಇದರಿಂದ ಹಲವು ಸಂದರ್ಭಗಳಲ್ಲಿ ನಟ ನಟಿಯರು ಸಂಕಟಕ್ಕೀಡಾಗಬೇಕಾಗಿ ಬಂದ ಪ್ರಸಂಗಗಳೂ ಹೆಚ್ಚಾಗಿಯೇ ಇವೆ. ಇಂಥಾ ಕೆಟ್ಟ ಟ್ರಾಲಿಗರ ವಿರುದ್ಧ ನಟಿ ಶೀತಲ್ ಶೆಟ್ಟಿ ಕಿಡಿಕಾರಿದ್ದಾರೆ.
ಅಶ್ಲೀಲ ಫೋಟೋಗಳನ್ನು ಇಟ್ಟುಕೊಂಡು ಮನರಂಜನೆ ನೀಡುತ್ತವೆ ಎಂದು ಅಶ್ಲೀಲತೆಯನ್ನು ಸಮಾಜಕ್ಕೆ ಸಾರುತ್ತಿರುವವ ವಿರುದ್ಧವಾಗಿ ಶೀತಲ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ. ‘ನನ್ನ ಕನ್ನಡತಾಯಿ ನನಗೆ ಬೇರೆಯವರನ್ನು ದ್ವೇಷಿಸಲು ಕಲಿಸಿಲ್ಲ. ನನ್ನ ಕನ್ನಡನಾಡಲ್ಲಿ ಹೆಣ್ಣನ್ನು ಅಸಹ್ಯವಾಗಿ ಬಿಂಬಿಸುವ ಪರಿಪಾಠ ಇಲ್ಲ. ದಯವಿಟ್ಟು ಇವುಗಳಿಗೆ ಕನ್ನಡಮ್ಮನ ಅಭಿಮಾನದ ಹೆಸರು ತರಬೇಡಿ. ಇದು ಒಬ್ಬರ ಬಗ್ಗೆ ನಾನು ಮಾತಾಡ್ತಿರೋದಲ್ಲ. ನಮ್ಮೆಲ್ಲರ ಪರವಾಗಿ ಮಾತಾಡ್ತಿರೋದು. ಟ್ರೋಲ್ ಪೇಜ್ಗಳನ್ನು ನಾನು ಫಾಲೋ ಮಾಡ್ತೀನಿ. ಕ್ರಿಯೇಟಿವ್ ಆಗಿರೋ, ಮಜವಾಗಿರೋ ಮೀಮ್ಗಳನ್ನು ಎಂಜಾಯ್ ಮಾಡ್ತೀನಿ. ಆದರೆ ಇದು ಕ್ರಿಯೇಟಿವಿಟಿ ಅಲ್ಲ. ಇದನ್ನು ನೋಡಿ ಸುಮ್ಮನಿರೋಕೆ ಸಾಧ್ಯವೇ ಇಲ್ಲ. ದಯವಿಟ್ಟು ಇವುಗಳನ್ನು ನೋಡಿ ಎಂಜಾಯ್ ಮಾಡ್ಬೇಡಿ. ಇದು ಸಮಾಜಕ್ಕೆ ಮಾರಕ. ಇಂಥವುಗಳನ್ನು ಕಂಡಾಗ ಖಂಡಿಸಿ. ನಮ್ಮ ನಾಡಿನ ಸ್ವಾಸ್ಥ್ಯ ಕಾಪಾಡಿ. ನನ್ನ ಬೇಸರ ಟ್ರೋಲ್ ಪೇಜ್ಗಳ ವಿರುದ್ಧ ಅಲ್ಲ’ ಎಂದು ಶೀತಲ್ ಪೋಸ್ಟ್ ಮಾಡಿದ್ದಾರೆ.
‘ಇದು ನನಗೆ ಸಂಬಂಧಿಸಿದ ವಿಷಯ ಅಲ್ಲ. ಇದರಿಂದ ನನಗೆ ವೈಯಕ್ತಿಕವಾಗಿ ಏನೂ ಆಗಬೇಕಾಗಿದ್ದಿಲ್ಲ. ಆದ್ರೆ ಇದು ನನ್ನ ಜಾತಿಗೆ ಸಂಬಂಧಿಸಿದ್ದು. ಹೆಣ್ಣಾಗಿ ನನಗೆ ಸಹಿಸಲು ಆಗದೇ ಇರುವಂಥದ್ದು. ನನ್ನಂತೆ ಇದನ್ನು ಓದಿದ, ಇಲ್ಲಿಯವರೆಗೆ ನೋಡಿಕೊಂಡು ಬಂದಿರೋ ಎಲ್ಲ ಹೆಣ್ಣುಮಕ್ಕಳಿಗೂ ಸಹಿಸೋಕೆ ಸಾಧ್ಯವಾಗಿರೋದಿಲ್ಲ. ಅದಕ್ಕೇ ಮಾತಾಡೋ ಧೈರ್ಯ ಮಾಡಿದೀನಿ’ ಎಂದು ಶೀತಲ್ ಬರೆದುಕೊಂಡಿದ್ದಾರೆ.
“ನನ್ನ ಆಯ್ಕೆಗಳನ್ನು ದಿಟ್ಟವಾಗಿ ಮಾಡಿಕೊಂಡು ಮುಂದೆ ಹೋಗುತ್ತಿರುವ ಯಾರೋ ಹೆತ್ತ ಹೆಣ್ಣು ಮಕ್ಕಳಿಗೆ, ಬಟಾ ಬಹಿರಂಗವಾಗಿ ಡಗಾರ್, ಸೂ** ಎನ್ನುತ್ತ, ದೈಹಿಕವಾಗಿ ಅವರನ್ನು ಅವಮಾನ ಮಾಡುತ್ತಿರುವ ಕೆಟ್ಟ ಹುಂಬ ಮನಸ್ಥಿತಿಗಳಿಗೆ, ಹಾಗೇ ಅದನ್ನು ಎಂಜಾಯ್ ಮಾಡುತ್ತಿರುವ ಮನಸ್ಥಿತಿಗಳಿಗೂ ನನ್ನದೊಂದು ಧಿಕ್ಕಾರ. ನಾಳೆಯಿಂದ ಈ ಮನಸ್ಥಿತಿಗಳು ನನ್ನನ್ನು ಹೇಗೆ ಕಾಡಬಹುದು ಅನ್ನೋ ಅರಿವಿದ್ದರೂ ನಂಗ್ಯಾಕೋ ಸುಮ್ಮನಿರೋ ಮನಸ್ತಾಗ್ತಿಲ್ಲ. ಬನ್ನಿ ನೋಡ್ಕೊಳ್ಳೋಣ. ಇಂಥ ಮನಸ್ಥಿತಿಗಳ ಮನೆಯಲ್ಲಿರುವ ಹೆಣ್ಣುಮಕ್ಕಳ ಮೇಲೆ ನನಗೆ ಅನುಕಂಪವಿದೆ’ ಎಂದು ಶೀತಲ್ ಪೋಸ್ಟ್ ಮಾಡಿದ್ದಾರೆ.
🙂🙏 #stopshaming #stopbodyshaming #respectwomen #respecthuman
Posted by Sheethal Shetty on Monday, 5 April 2021
Live and let others live🙂🙏 #stopshaming #stopbodyshaming #RespectWomen #respecthuman
Posted by Sheethal Shetty on Tuesday, 6 April 2021
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
