fbpx
ಸಮಾಚಾರ

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟ ಇಬ್ಬರು ಹುಡುಗಿಯರು! ಯಾರು ಗೊತ್ತಾ? ಇಲ್ಲಿದೆ ಮಾಹಿತಿ

ಬಿಗ್​ ಬಾಸ್​ ಸೀಸನ್ 8ರ ಮನೆಯಲ್ಲಿ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಸ್ಪರ್ಧಿಗಳ ನಡುವೆ ನಿಜವಾದ ಆಟ ಈಗಾಗಲೇ ಆರಂಭವಾಗಿದೆ. ದಿನದಿಂದ ದಿನಕ್ಕೆ ಆಸಕ್ತಿಕರ ತಿರುವುಗಳನ್ನು ಪಡೆಯುತ್ತಿದೆ ಈ ಆಟ. ಕಳೆದ ವಾರ ತಾನೇ ವೈಲ್ಡ್ ಕಾರ್ಡ್ ಎಂಟ್ರಿ ರೂಪದಲ್ಲಿ ಚಕ್ರವರ್ತಿ ಚಂದ್ರಚೂಡ್ ದೊಡ್ಮನೆ ಸೇರಿದ್ದರು. ಈ ಮದ್ಯೆ ಬಿಗ್​ ಬಾಸ್​ ಮನೆಗೆ ಮತ್ತೆರೆಡು ವೈಲ್ಡ್​ ಕಾರ್ಡ್​ ಎಂಟ್ರಿ ಆಗಿದೆ.

 

 

ಹೌದು, ‘ಬಿಗ್ ಬಾಸ್’ ಮನೆಗೆ ಇನ್ನಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂಟ್ರಿಕೊಟ್ಟಿದ್ದಾರೆ. ಇದಕ್ಕೆ ವಾಹಿನಿ ಬಿಡುಗಡೆ ಮಾಡಿರುವ ಇಂದಿನ ಸಂಚಿಕೆಯ ಪ್ರೋಮೋನೇ ಸಾಕ್ಷಿ. ಪ್ರೋಮೋದಲ್ಲಿ ತೋರಿಸಿರುವಂತೆ ‘ಬಿಗ್ ಬಾಸ್’ ಮನೆಗೆ ಇಬ್ಬರು ಹುಡುಗಿಯರು ‘ವೈಲ್ಡ್ ಕಾರ್ಡ್’ ಮೂಲಕ ಎಂಟ್ರಿಕೊಟ್ಟಿದ್ದಾರೆ. ಒಬ್ಬರು ‘ಬಿಗ್ ಬಾಸ್’ ಮನೆಯ ಮುಖ್ಯ ದ್ವಾರದಿಂದ ಎಂಟ್ರಿಕೊಟ್ಟರೆ, ಇನ್ನೊಬ್ಬರು ಕನ್ಫೆಶನ್ ರೂಮ್‌ನಿಂದ ಮನೆಯೊಳಗೆ ಕಾಲಿಟ್ಟಿದ್ದಾರೆ. ಆದರೆ, ಆ ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಯಾರು ಎಂಬ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.

ಈ ಇಬ್ಬರು ಹುಡುಗಿಯರಲ್ಲಿ ಒಬ್ಬರು ಭೀಮಸೇನ ನಳಮಹಾರಾಜ ಚಿತ್ರದ ನಾಯಕಿ ಎಂದು ಹೇಳಲಾಗುತ್ತಿದೆ. 2015ರಲ್ಲಿ ಗಣಪ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಪ್ರಿಯಾಂಕಾ ತಿಮ್ಮೇಶ್ ಕೆಲ ಅನ್ಯ ಭಾಷೆ ಸಿನಿಮಾಗಳಲ್ಲೂ ನಟಿಸಿದ್ದಾರೆ. ಮತ್ತೊಬ್ಬ ಸ್ಪರ್ದಿ ಯಾರು ಎಂಬ ವಿಚಾರ ಇಂದಿನ ಎಪಿಸೋಡ್ ಮುಗಿದ ಮೇಲೆ ಗೊತ್ತಾಗಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top