fbpx
ಸಮಾಚಾರ

ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್‌ಗೆ ಉಸೇನ್ ಬೋಲ್ಟ್ ಸವಾಲು: ಏನದು?

ನಾಳೆಯಿಂದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ ಪಂದ್ಯಾವಳಿ ಆರಂಭವಾಗಲಿದೆ. ಆರಂಭದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.. ಈ ಮ್ನದ್ಯೆ ಜಮೈಕಾದ ಖ್ಯಾತ ಅಥ್ಲೀಟ್ ಉಸೇನ್ ಬೋಲ್ಟ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್‌ಗೆ ಒಂದು ಸವಾಲಿನ ಸಂದೇಶ ರವಾನಿಸಿದ್ದಾರೆ.

 

 

ಇನ್ನು ಎಬಿಡಿ ಮತ್ತು ಕೊಹ್ಲಿ ಮೈದಾನದಲ್ಲಿ ಅತಿ ವೇಗವಾಗಿ ಓಡುವ ಜೋಡಿ ಎಂದು ಹೆಸರುವಾಸಿಯಾಗಿದೆ. ಈ ಇಬ್ಬರು ಆಟಗಾರರು ಜೊತೆಯಾಗಿ ಬ್ಯಾಟಿಂಗ್ ಮಾಡುವಾಗ ಜೋರಾಗಿ ಓಡಿ ರನ್ ಕಡಿಯುವ ಬಗ್ಗೆ ಆಗಾಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ.. ಈ ಹಿನ್ನಲೆಯಲ್ಲಿ ಓಟದ ವಿಚಾರವಾಗಿ ಉಸೇನ್ ಬೋಲ್ಟ್ ಬ್ಯಾಟಿಂಗ್ ದಿಗ್ಗಜರಿಗೆ ಚಾಲೆಂಜ್ ಹಾಕಿದ್ದಾರೆ.

ಆರ್‌ಸಿಬಿ ಜೆರ್ಸಿ ಧರಿಸಿ ಪೋಸ್ ನೀಡಿರುವ ಉಸೇನ್ ಬೋಲ್ಟ್, ಆ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್ ಮೂಲಕ ವಿರಾಟ್ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್ ಕಾಲೆಳೆದಿದ್ದಾರೆ. ಮೈದಾನದಲ್ಲಿ ಯಾರು ಹೆಚ್ಚು ವೇಗಿ ಅನ್ನೋದನ್ನು ನೋಡೋಣ ಎಂದು ಬೋಲ್ಟ್ ಬರೆದುಕೊಂಡಿದ್ದಾರೆ.

‘ಚಾಲೆಂಜರ್‌ಗಳೆ, ನಾನೀಗಲೂ ವಿಶ್ವದಲ್ಲಿ ಅತಿ ವೇಗದ ಚಿರತೆ ಅನ್ನೋದನ್ನು ನಾನು ನಿಮಗೆ ತಿಳಿಸಬಯಸುತ್ತೇನೆ,’ ಎಂದು ಉಸೇನ್ ಬೋಲ್ಟ್ ಬರೆದುಕೊಂಡಿದ್ದಾರೆ. ಟ್ವೀಟ್ ನಲ್ಲಿ ಎಬಿಡಿ, ಕೊಹ್ಲಿ ಮತ್ತು ಆರ್ಸಿಬಿಯನ್ನು ಬೋಲ್ಟ್ ಟ್ಯಾಗ್ ಮಾಡಿದ್ದಾರೆ. ಈ ಟ್ವೀಟ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಆರ್ಸಿಬಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಅಂದಹಾಗೆ ಹಿಂದೊಮ್ಮೆ ಬೋಲ್ಟ್ ತನಗೆ ಐಪಿಎಲ್‌ನಲ್ಲಿ ಆಡುವ ಅವಕಾಶ ಲಭಿಸಿದ್ದರೆ ಆರ್‌ಸಿಬಿ ಪರ ಆಡಬಯಸುತ್ತೇನೆ ಎಂದಿದ್ದ ಮಾತನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top