fbpx
ಸಮಾಚಾರ

ನಾಳೆಯಿಂದ ಐಪಿಎಲ್ ಜ್ವರ ಶುರು: ಐಪಿಎಲ್ ಟ್ರೋಫಿ ಮೇಲೆ ಬರೆದಿರೋದು ಏನು ಗೊತ್ತಾ? ಈ ಸಂಸ್ಕೃತ ವಾಕ್ಯದ ಅರ್ಥವೇನು ಗೊತ್ತಾ?

ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಇದೇ ತಿಂಗಳ 9ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಲಿವೆ. ಕೊರೊನಾ ವೈರಸ್ ಹಾವಳಿಯಿಂದ ಕಳೆದ ಬಾರಿಯ ಐಪಿಎಲ್ ಯುಎಇಯಲ್ಲಿ ನಡೆದಿತ್ತು. ಆದರೆ ಈ ಬಾರಿ ಭಾರತದಲ್ಲಿಯೇ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯುವುದರಿಂದ ಕುತೂಹಲ ಹೆಚ್ಚಾಗಿದೆ.

 

 

 

ಪ್ರತಿವರ್ಷ, ಚಿನ್ನ ಲೇಪಿತ ಟ್ರೋಫಿಯನ್ನು ಚಾಂಪಿಯನ್‌ಗಳಿಗೆ ವಿಜೇತ ತಂಡಗಳಿಗೆ ನೀಡಲಾಗುತ್ತದೆ. ಚಿನ್ನ ಲೇಪಿತ ಐಪಿಎಲ್ ಟ್ರೋಫಿಯ ಮೇಲೆ ಸಂಸ್ಕೃತದ ಸಂದೇಶವೊಂದು ಕತ್ತಲಾಗಿದೆ. ಟ್ರೋಫಿ ಮೇಲಿನ ವಾಕ್ಯ ಸಾಕಷ್ಟು ಜನರು ತಿಳಿದಿಲ್ಲ. ಕೆಲವರು ಅದನ್ನ ಕಂಡಿದ್ದರು ಆ ವಾಕ್ಯದ ಅರ್ಥ ಏನೆಂದು ಅನೇಕರಿಗೆ ತಿಳಿದಿಲ್ಲ. ಐಪಿಎಲ್ ಟ್ರೋಫಿ ಮೇಲೆ ಬರೆದಿರುವ ಸಂಸ್ಕೃತದ ಸಾಲುಗಳು ಐಪಿಎಲ್‌ನ ಧ್ಯೇಯವಾಕ್ಯವಾಗಿದೆ.

ಟ್ರೋಫಿ ಮೇಲೆ ಬರೆದಿರುವುದೇನು?
ಟೂರ್ನಿಯಲ್ಲಿ ಯಶಸ್ವಿ ಪ್ರದರ್ಶನ ನೀಡುವ ತಂಡಕ್ಕೆ ನೀಡುವ ಟ್ರೋಫಿಯು ವಿಶೇಷ ಆಕರ್ಷಣೆಯನ್ನು ಹೊಂದಿದೆ. ಇದರ ಮೇಲೆ ಸಂಸ್ಕೃತದಲ್ಲಿ “ಯಾತ್ರ ಪ್ರತಿಭಾ ಅವಸರ ಪ್ರಾಪ್ನೋತಿಹಿ” ಎಂದು ಬರೆಯಲಾಗಿದ್ದು, ಪ್ರತಿಭೆಗಳ ಅವಕಾಶಕ್ಕೆ ತಕ್ಕ ವೇದಿಕೆ ಎಂಬರ್ಥವನ್ನು ನೀಡುತ್ತದೆ. ಸ್ವರ್ಣ ಲೇಪಿತ ದಿಂದ ನಿರ್ಮಾಣವಾಗಿರುವ ಕಪ್ ಮೇಲಿನ ಅಕ್ಷರಗಳು ಬರಿಗಣ್ಣಿಗೆ ಗೋಚರಿಸುವುದಿಲ್ಲ ಎಂಬುದು ಇದರ ಮತ್ತೊಂದು ವಿಶೇಷವಾಗಿದೆ.

ಈ ಒಂದು ವಾಕ್ಯದಲ್ಲಿ ಐಪಿಎಲ್ ಟೂರ್ನಿಯ ಮಹತ್ವವನ್ನು ಸಾರಲಾಗುತ್ತಿದೆ. ಯಾಕೆಂದರೆ ಐಪಿಎಲ್ ಟೂರ್ನಿ ಈಗ ದೇಶದ ಪ್ರತಿಭಾನ್ವಿತ ಕ್ರಿಕೆಟಿಗರಿಗೊಂದು ಉತ್ತಮ ವೇದಿಕೆಯಾಗಿದ್ದು, ಐಪಿಎಲ್ ಟೂರ್ನಿಯಲ್ಲಿ ಮಿಂಚಿದರೆ ರಾಷ್ಟ್ರೀಯ ತಂಡದ ಬಾಗಿಲು ಕೂಡ ತೆರೆಯುತ್ತದೆ ಎಂಬುದು ಈಗಾಗಲೆ ಸಾಬೀತಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top