fbpx
ಸಮಾಚಾರ

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಇಬ್ಬರು ಹುಡುಗೀರು ಯಾರು ಗೊತ್ತಾ? ಇಲ್ಲಿದೆ ಪರಿಚಯ

ಬಿಗ್​ ಬಾಸ್​ ಸೀಸನ್ 8ರ ಮನೆಯಲ್ಲಿ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಸ್ಪರ್ಧಿಗಳ ನಡುವೆ ನಿಜವಾದ ಆಟ ಈಗಾಗಲೇ ಆರಂಭವಾಗಿದೆ. ದಿನದಿಂದ ದಿನಕ್ಕೆ ಆಸಕ್ತಿಕರ ತಿರುವುಗಳನ್ನು ಪಡೆಯುತ್ತಿದೆ ಈ ಆಟ. ಕಳೆದ ವಾರ ತಾನೇ ವೈಲ್ಡ್ ಕಾರ್ಡ್ ಎಂಟ್ರಿ ರೂಪದಲ್ಲಿ ಚಕ್ರವರ್ತಿ ಚಂದ್ರಚೂಡ್ ದೊಡ್ಮನೆ ಸೇರಿದ್ದರು. ಈ ಮದ್ಯೆ ಬಿಗ್​ ಬಾಸ್​ ಮನೆಗೆ ಮತ್ತೆರೆಡು ವೈಲ್ಡ್​ ಕಾರ್ಡ್​ ಎಂಟ್ರಿ ಆಗಿದೆ.

ಹೌದು, ‘ಬಿಗ್ ಬಾಸ್’ ಮನೆಗೆ ಇನ್ನಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂಟ್ರಿಕೊಟ್ಟಿದ್ದಾರೆ. ನಟಿ ಪ್ರಿಯಾಂಕಾ ತಿಮ್ಮೇಶ್​ ಹಾಗೂ ವೈಜಯಂತಿ ಅಡಿಗ ಬಿಗ್​ ಬಾಸ್​ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ರೂಪದಲ್ಲಿ ಹೊಸ ಸ್ಪರ್ಧಿಗಳಾಗಿ ಬಂದಿದ್ದಾರೆ.

ಮೊದಲು ವೈಜಯಂತಿ ಅಡಿಗ ಬಿಗ್​ ಬಾಸ್​ ಮನೆ ಪ್ರವೇಶಿಸಿದ್ದಾರೆ. ಕನ್​ಫೆಷನ್​ ರೂಂನಿಂದ ಅವರು ನೇರವಾಗಿ ಬಿಗ್​ ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ವಾಸುದೇವ ಅಡಿಗ ಅವರ ಮಗಳು ವೈಜಯಂತಿ ಅಡಿಗ. ಹೋಟೆಲ್​ ಉದ್ಯಮ ಇವರ ಮುಖ್ಯ ವೃತ್ತಿ. ಅಮ್ಮಚ್ಚಿಯೆಂಬ ನೆನಪು ಸಿನಿಮಾದಲ್ಲೂ ವೈಜಯಂತಿ ಬಣ್ಣ ಹಚ್ಚಿದ್ದಾರೆ. ಇವರನ್ನು ನೋಡಿ ಮಂಜು ತುಂಬಾನೇ ಖುಷಿ ಆಗಿದ್ದಾರೆ.

ನಂತರ ಪ್ರಿಯಾಂಕಾ ತಿಮ್ಮೇಶ್ ಕೂಡ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಭೀಮಸೇನ ನಳಮಹಾರಾಜ ಚಿತ್ರದ ನಾಯಕಿ ಇದೀಗ ಬಿಗ್​ಬಾಸ್​ ಮನೆಗೆ ಕಾಲಿಟ್ಟಿರುವುದು ಭಾರೀ ಕುತೂಹಲ ಮೂಡಿಸಿದೆ. 2015ರಲ್ಲಿ ಗಣಪ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಪ್ರಿಯಾಂಕಾ ತಿಮ್ಮೇಶ್ ಕೆಲ ಅನ್ಯ ಭಾಷೆ ಸಿನಿಮಾಗಳಲ್ಲೂ ನಟಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top