fbpx
ಸಮಾಚಾರ

“ಅತ್ಯಾಚಾರಕ್ಕೆ ಮಹಿಳೆಯರ ಉಡುಪು ಕಾರಣ” ಇಮ್ರಾನ್ ಖಾನ್ ವಿವಾದ: ಮಾಜಿ ಪತ್ನಿ ತಿರುಗೇಟು

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿವಾದ ಸೃಷ್ಟಿಸಿದ್ದಾರೆ. ತಮ್ಮ ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಸರ್ಕಾರವು ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ಹಿಂಸಾಚಾರದ ಕುರಿತು ಯಾವ ಕ್ರಮ ತೆಗೆದುಕೊಳ್ಳುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಸಿದ್ದ ಇಮ್ರಾನ್ ಖಾನ್, ಇದರಲ್ಲಿ ಕೆಲವು ಸಮಸ್ಯೆಗಳಿವೆ. ಇವುಗಳನ್ನು ಕಾನೂನು ಮಾತ್ರವೇ ಪರಿಹರಿಸಲಾರದು ಎಂದಿದ್ದಾರೆ.

ದೇಶದಲ್ಲಿನ ಲೈಂಗಿಕ ಶೋಷಣೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಖಾನ್‌, ‘ಪುರುಷರು ಆಕರ್ಷಣೆಗೆ ಒಳಗಾಗದಂತೆ ಮಹಿಳೆಯರು ದುಪ್ಪಟಾದಿಂದ ತಮ್ಮ ಮೈಯನ್ನು ಪೂರ್ತಿ ಮುಚ್ಚಿಕೊಳ್ಳಬೇಕು. ಮುಸ್ಲಿಂ ಧರ್ಮದಲ್ಲಿರುವ ‘ಪರ್ಧಾ’ ಪರಿಕಲ್ಪನೆಯ ಉದ್ದೇಶವೇ ಅದಾಗಿದೆ’ ಎಂದಿದ್ದಾರೆ.

ಖಾನ್‌ ಅವರ ಈ ಹೇಳಿಕೆಗೆ ಮಾಜಿ ಪತ್ನಿ ಜೆಮಿಯಾ ಗೋಲ್ಡ್‌ಸ್ಮಿತ್‌ ಸೇರಿದಂತೆ ವಿಶ್ವಾದ್ಯಂತ ಅನೇಕರು ಖಂಡನೆ ವ್ಯಕ್ತಪಡಿಸಿದ್ದಾರೆ. ‘ಪುರುಷರು ತಮ್ಮ ಕಣ್ಣನ್ನು ಅಂಕೆಯಲ್ಲಿಟ್ಟು, ಖಾಸಗಿ ಭಾಗಗಳನ್ನು ರಕ್ಷಿಸಿಕೊಳ್ಳಬೇಕು. ಆ ಹೊಣೆಗಾರಿಕೆ ಪುರುಷರ ಮೇಲಿದೆ’ ಎಂದು ಜೆಮಿಯಾ ಗೋಲ್ಡ್‌ಸ್ಮಿತ್‌ ತಿರುಗೇಟು ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top