fbpx
ಸಮಾಚಾರ

ರಕ್ಷಿತ್, ರಿಷಬ್ ಶೆಟ್ಟಿಗೆ ಬಂಧನದ ಭೀತಿ: ಜಾಮೀನು ರಹಿತ ವಾರೆಂಟ್ ಜಾರಿ

ಕಿರಿಕ್ ಪಾರ್ಟಿ ಚಿತ್ರ ತಂಡಕ್ಕೆ ಇದೀಗ ಸಂಕಷ್ಟ ಬಂದಿದೆ. ಸಂಪೂರ್ಣ ಚಿತ್ರ ತಂಡದ ವಿರುದ್ದ ನಾನ್ ಬೆಲಬಲ್ ವಾರೆಂಟ್ ಜಾರಿಯಾಗಿದೆ. 9 ನೇ ಎಸಿಎಂಎಂ ಕೋರ್ಟ್ ನಿಂದ ನಾನ್ ಬೆಲಬಲ್ ವಾರೆಂಟ್ ಜಾರಿಯಾಗಿದೆ. ಪ್ರತಿವಾದಿಗಳ ಬಂಧಿಸಿ ಕರೆ ತರಲು ಕೋರ್ಟ್ ನಿಂದ ಸೂಚನೆ ಸಿಕ್ಕಿದೆ. ನಿರ್ದೇಶಕ ರಿಷಬ್ ಶೆಟ್ಟಿ, ಚಿತ್ರ ನಟ ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮತ್ತು ಪರಮ್ವಾ ಸ್ಟುಡೀಯೋಸ್ ಆರೋಪಿ ಪಟ್ಟಿಯಲ್ಲಿ ಇದ್ದಾರೆ.

ಕಿರಿಕ್ ಪಾರ್ಟಿ ಚಿತ್ರದಲ್ಲಿ ತಮ್ಮ ಅನುಮತಿ ಇಲ್ಲದೇ ಲಹರಿ ಸಂಸ್ಥೆಯ ಹಾಡುಗಳನ್ನು ಅಕ್ರಮವಾಗಿ ಬಳಸಿಕೊಳ್ಳಲಾಗಿದೆ ಎಂದು ಲಹರಿ ಸಂಸ್ಥೆ ಕೋರ್ಟ್​ ಮೆಟ್ಟಲೇರಿತ್ತು. ಇನ್ನು ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಚಿತ್ರತಂಡ ಸ್ಪಷ್ಟೀಕರಣವನ್ನೂ ನೀಡಿತ್ತು. ಅನುಮತಿ ಇಲ್ಲದೇ ಹಾಡುಗಳನ್ನು ಬಳಸಿಕೊಂಡಿರುವುದಕ್ಕೆ ಚಿತ್ರತಂಡದ ವಿರುದ್ಧ ಕೋರ್ಟ್​ ಜಾಮೀನುರಹಿತ ವಾರಂಟ್​ ಹೊರಡಿಸಿದೆ. ಲಹರಿ ಸಂಸ್ಥೆ ದಾಖಲಿಸಿರುವ ದೂರಿನನ್ವಯ ಪ್ರತಿವಾದಿಗಳನ್ನು ಬಂಧಿಸಿ ಕರೆತಂದು ಮೇ 27ರಂದು ಕೋರ್ಟ್​ ಮುಂದೆ ಹಾಜರುಪಡಿಸಬೇಕು ಎಂದು 9ನೇ ಎಸಿಎಂಎಂ ನ್ಯಾಯಾಲಯ ವಾರಂಟ್​ ಜಾರಿಯಾಗಿದೆ. ಒಟ್ಟಿನಲ್ಲಿ ಕಿರಿಕ್ ಪಾರ್ಟಿ ಚಿತ್ರತಂಡದ ಬಂಧನವಾಗುತ್ತೋ ಕಾದು ನೋಡಬೇಕಿದೆ.!

ಕಿರಿಕ್ ಪಾರ್ಟಿ ಚಿತ್ರದಲ್ಲಿ ಬರುವ ‘ಹೇ ಹೂ ಆರ್ ಯೂ..’ ಹಾಡಿನಲ್ಲಿ ರವಿಚಂದ್ರನ್ ಅಭಿನಯದ ‘ಶಾಂತಿ ಕ್ರಾಂತಿ’ ಚಿತ್ರದಲ್ಲಿ ಬರುವ ಹಾಡಿನ ಸಂಗೀತವನ್ನು ಬಳಕೆ ಮಾಡಿಕೊಂಡಿರುವುದಕ್ಕೆ ಸಂಬಂಧಿಸಿದಂತೆ, ಈ ಹಾಡಿನ ಮಾಲಕತ್ವವನ್ನು ಹೊಂದಿರುವ ಲಹರಿ ಆಡಿಯೋ ಸಂಸ್ಥೆ ರಕ್ಷಿತ್ ಶೆಟ್ಟಿ ಒಡೆತನದ ಪರಮ್ವಾಹ್ ಸ್ಟುಡಿಯೋಸ್ ಮತ್ತು ಸಂಗೀತ ನಿರ್ದೇಶಕರ ವಿರುದ್ಧ ದೂರು ದಾಖಲಿಸಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top