fbpx
ಸಮಾಚಾರ

ಮೊದಲನೇ ಪಂದ್ಯದಲ್ಲಿ ಇತಿಹಾಸ ಸೃಷ್ಟಿಸಿದ ಹರ್ಷಲ್ ಪಟೇಲ್

2021ರ ಐಪಿಎಲ್ ಆವೃತ್ತಿಯ ಮೊದಲ ಪಂದ್ಯದಲ್ಲೇ ಆರ್‌ಸಿಬಿಯ ವೇಗಿ ಹರ್ಷಲ್ ಪಟೇಲ್ ಮುಂಬೈ ವಿರುದ್ಧ ಇತಿಹಾಸ ನಿರ್ಮಿಸಿದ್ದಾರೆ. 5 ಬಾರಿಯ ಐಪಿಎಲ್ ಚಾಂಪಿಯನ್ ಆಗಿರುವ ಮುಂಬೈ ತಂಡದ ವಿರುದ್ಧ ಇಲ್ಲಿಯಯವರೆಗೆ ಯಾರೂ 5 ವಿಕೆಟ್ ಪಡೆದಿರಲಿಲ್ಲ. ಆದರೆ ಈ ಬಾರಿ ಹರ್ಷಲ್ ಪಟೇಲ್ 5 ವಿಕೆಟ್ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

ಹರ್ಯಾಣದ ಮಧ್ಯಮ ವೇಗಿ ಬೌಲರ್ ಹರ್ಷಲ್ ಪಟೇಲ್ ಅವರನ್ನು ಕೊಹ್ಲಿ 5ನೇಯವರಾಗಿ ಬೌಲಿಂಗ್ ಇಳಿಸಿದ್ದರು. ಹರ್ಷಲ್ ಪಟೇಲ್ ಬೌಲಿಂಗ್‍ಗೆ ಇಳಿದದ್ದೇ ತಡ 105 ರನ್‍ಗಳಿಗೆ 3 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಮುಂಬೈ ತಂಡದ ವಿಕೆಟ್ ದಿಢೀರ್ ಪತನಗೊಳ್ಳಲು ಆರಂಭವಾಯಿತು.

ಒಂದು ಹಂತದಲ್ಲಿ 10 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಮುಂಬೈ ಹರ್ಷಲ್ ದಾಳಿಗೆ ಕುಸಿದು ಒಂಬತ್ತು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಪ್ರಭಾವಿ ದಾಳಿ ಸಂಘಟಿಸಿದ ಹರ್ಷಲ್, ಮುಂಬೈ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿದರು. ಇಶಾನ್ ಕಿಶನ್ (28), ಹಾರ್ದಿಕ್ ಪಾಂಡ್ಯ (13) ಸೇರಿದಂತೆ ಐದು ವಿಕೆಟ್‌ಗಳನ್ನು ಪಡೆದು ಮುಂಬೈ ಓಟಕ್ಕೆ ಕಡಿವಾಣ ಹಾಕಿದರು. ಈ ನುಡವೆ ಸ್ವಲ್ಪದರಲ್ಲೇ ಹ್ಯಾಟ್ರಿಕ್ ಪಡೆಯುವ ಅವಕಾಶದಿಂದ ವಂಚಿತರಾದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top