fbpx
ಸಮಾಚಾರ

“ನನ್ನ ಸಾವಿಗೆ ಯಡಿಯೂರಪ್ಪ, ಸುಧಾಕರ್, ವಿಜಯೇಂದ್ರ ಅವರೇ ನೇರ ಕಾರಣ” ಮಠ ಗುರುಪ್ರಸಾದ ಬಹಿರಂಗ ಡೆತ್ ನೋಟ್

ಇಡೀ ಜಗತ್ತು ಕರೋನಾ ಅನ್ನೋ ಕೊಂದು ಬಿಸಾಡುವ ವೈರಸ್ಸಿನ ಭಯಕ್ಕೆ ಬಿದ್ದಿದೆ. ಅದರ ಎಫೆಕ್ಟು ನೇರವಾಗಿ ಜನಸಾಮಾನ್ಯರ ಜೀವನದ ಮೇಲೆ ಪರಿಣಾಮ ಭೀರುತ್ತಿದೆ. ದಿನಕಳೆದಂತೆ ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿದೆ. ಅದರಲ್ಲೂ ರಾಜಧಾನಿ ಬೆಂಗಳೂರು ಕೊರೊನಾ ಪಾಲಿಗೆ ಹಾಟ್‌ಸ್ಪಾಟ್ ಆಗಿದೆ. ಜನಸಾಮಾನ್ಯರು ಮಾತ್ರವಲ್ಲದೆ, ರಾಜಕಾರಣಿಗಳು, ಸಿನಿಮಾ ತಾರೆಯರಿಗೂ ಕೊರೊನಾ ತಗುಲುತ್ತಿದೆ. ಇದೀಗ ನಟ, ನಿರ್ದೇಶಕ ಗುರುಪ್ರಸಾದ್​​​​ಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಹೀಗಾಗಿ ಗುರುಪ್ರಸಾದ್​ ಫೇಸ್​ ಬುಕ್ ಲೈವ್​ನಲ್ಲಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

 

 

ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ, ಅವರ ಪುತ್ರ ಬಿ.ವೈ.ವಿಜಯೇಂದ್ರ, ಆರೋಗ್ಯ ಸಚಿವ ಸುಧಾಕರ್​, ಡಿ.ಕೆ. ಶಿವಕುಮಾರ್​ ಸೇರಿದಂತೆ ಅನೇಕರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್​ ಆಗುತ್ತಿದೆ. ಒಂದು ವೇಳೆ ತಾವು ನಿಧನರಾದರೆ ಅದಕ್ಕೆ ಯಡಿಯೂರಪ್ಪ, ರಾಘವೇಂದ್ರ, ಸುಧಾಕರ್​ ಮುಂತಾದ ರಾಜಕಾರಣಿಗಳೇ ಕಾರಣ ಎಂದು ಗುರು ಪ್ರಸಾದ್​ ಹೇಳಿದ್ದಾರೆ.

ಕೊರೊನಾ ನಿರ್ವಹಣೆ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲಿ ಕೊರೊನಾದಿಂದ ಮೃತಪಟ್ಟಿರುವ ಪ್ರತಿಯೊಬ್ಬರ ಸಾವಿಗೂ ಸಿಎಂ ಯಡಿಯೂರಪ್ಪ, ಆರೋಗ್ಯ ಸಚಿವ ಸುಧಾಕರ್ ಹಾಗೂ ವಿಜಯೇಂದ್ರ ಅವರೇ ನೇರ ಕಾರಣ. ಅಷ್ಟೇ ಅಲ್ಲ ಆಕಸ್ಮಾತ್ ನಾನು ಕೊರೊನಾದಿಂದ ಸತ್ತೋದ್ರೆ ಅದಕ್ಕೆ ನೇರ ಕಾರಣ ನೀವೇ. ಹೀಗಾಗಿ ಇದು ನನ್ನ ಡೆತ್ ನೋಟ್ ಕೊರೊನಾ ಕಂಟ್ರೋಲ್ ಮಾಡೋಕೆ ನಿಮ್ಗೆ ಒಂದೂವರೆ ವರ್ಷ ಬೇಕಾ..? ನಿಯತ್ತಾಗಿ ಕೆಲಸ ಮಾಡಿ, ಜನರ ಪ್ರಾಣ ಉಳಿಸಿ ಅಂತ ಗುರುಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಚಿತ್ರರಂಗದ ಅನೇಕ ಜನರನ್ನು ಸಾಯಿಸಿದ್ದೀರಿ. ನಾನು ಕೂಡ ಹಾರ್ಟ್​ ಅಟ್ಯಾಕ್​ ಆಗಿ ಸಾಯಬಹುದು. ಮನೆಮನೆಗೂ ವೈರಸ್​ ಬಂದಿದೆ. ಸಿನಿಮಾ ಪ್ರಚಾರಕ್ಕಾಗಿ ಇದನ್ನೆಲ್ಲ ನಾನು ಮಾಡುತ್ತಿಲ್ಲ. ನಾನು ಬದುಕಿದ್ದರೆ ತಾನೇ ಅದೆಲ್ಲ. ಪ್ರತಿಯೊಬ್ಬರು ಬದುಕುವುದು ಕೂಡ ಮುಖ್ಯ. ಕರ್ನಾಟಕದಲ್ಲಿ ಕೊರೊನಾದಿಂದಾದ ಪ್ರತಿ ಸಾವಿಗೆ ಡಾ. ಸುಧಾಕರ್​ ಕಾರಣ. ಡಿ.ಕೆ. ಶಿವಕುಮಾರ್​. ಎಚ್​.ಡಿ. ಕುಮಾರಸ್ವಾಮಿ ಸಾಚಾ ಎಂದು ನಾನು ಹೇಳುತ್ತಿಲ್ಲ. ಎಲ್ಲರೂ ನಮ್ಮನ್ನು ಕೊಲ್ಲುತ್ತಿದ್ದೀರಿ. ಇದು ನನ್ನ ಡೆತ್​ ನೋಟ್​. ನನ್ನ ಸಾವಿಗೆ ನೀವೆಲ್ಲರೂ ಕಾರಣ’ ಎಂದು ಗುರುಪ್ರಸಾದ್​ ಹೇಳಿರುವ ವಿಡಿಯೋ ವೈರಲ್​ ಆಗುತ್ತಿದೆ.

ವಿಡಿಯೋ ನೋಡಿ:

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top