fbpx
ಸಮಾಚಾರ

ವಾಟ್ಸ್ಆ್ಯಪ್ ಬಳಕೆದಾರರನ್ನು ವಂಚಿಸುತ್ತಿದೆ Pink WhatsApp ಸಂದೇಶ: ಸತ್ಯಾಸತ್ಯತೆ ತಿಳಿಯಿರಿ

ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ಗುಲಾಬಿ ಬಣ್ಣದಲ್ಲಿ ಬರಲಿದೆ ಎಂಬ ಸಂದೇಶ ಸಾಕಷ್ಟು ವೈರಲ್ ಆಗುತ್ತಿದೆ. ವಾಸ್ತವವಾಗಿ ವೈರಸ್ ಅನ್ನು ಲಿಂಕ್ ಮೂಲಕ ಫೋನ್‌ನಲ್ಲಿ ಕಳುಹಿಸುವ ಬಗ್ಗೆ ಸೈಬರ್ ತಜ್ಞರು ಎಚ್ಚರಿಸಿದ್ದಾರೆ.. ವಾಟ್ಸ್​ಆ್ಯಪ್ ಬಳಕೆದಾರರಿಗೆ ಲಿಂಕ್​ವೊಂದು ಬರುತ್ತಿದ್ದು, ಅದನ್ನು ಕ್ಲಿಕ್ ಮಾಡಿದವರ ಫೋನ್​ಗೆ ವೈರಸ್ ಅಟ್ಯಾಕ್ ಆಗಿ, ಹ್ಯಾಕ್ ಆಗುತ್ತಿದೆ…!

ಇದು ವಾಟ್ಸ್​ಆ್ಯಪ್​ನ ಹೊಸ ವರ್ಶನ್​. ಪಿಂಕ್​ ಟ್ರೇಡ್​ಮಾರ್ಕ್ ಹೊಂದಿದೆ. ಇದರಲ್ಲೂ ಸಹ ಮೆಸೇಜ್​, ಚಾಟ್​ ಮಾಡಬಹುದು. ಇನ್ನು ಪಿಂಕ್ ವಾಟ್ಸ್​ಆ್ಯಪ್​ನಲ್ಲಿ ಹಲವು ರೀತಿಯ ವೈಶಿಷ್ಟ್ಯಗಳಿವೆ ಎಂಬ ಸಂದೇಶಗಳೊಂದಿಗೆ ಲಿಂಕ್​ವೊಂದು ವಾಟ್ಸ್​ಆ್ಯಪ್​ಗೆ ಬರುತ್ತಿದೆ. ಇದು ಹೆಚ್ಚಾಗಿ ಗ್ರೂಪ್​ಗಳಲ್ಲಿ ಬರುತ್ತಿದ್ದು, ಸಹಜವೆಂಬಂತೇ ಜನರು ಕ್ಲಿಕ್​ ಮಾಡಿ ಪೇಚಿಗೆ ಸಿಲುಕುತ್ತಿದ್ದಾರೆ.

ಇದು ವಾಟ್ಸಾಪ್‌ ಕಂಪನಿಯ ಅಧಿಕೃತ ಲಿಂಕ್‌ ಅಲ್ಲ. ವಾಟ್ಸಾಪ್‌ ಬಳಕೆದಾರರ ಮಾಹಿತಿ ಕದಿಯಲು ಹ್ಯಾಕರ್‌ಗಳು ಹರಿಯಬಿಟ್ಟಿರುವ ವೈರಸ್‌. ಹೀಗಾಗಿ ಇಂಥ ಲಿಂಕ್‌ ಅನ್ನು ಒತ್ತಬೇಡಿ ಎಂದು ಸೈಬರ್‌ ತಜ್ಞರು ಎಚ್ಚರಿಸಿದ್ದಾರೆ.

ಬಹುತೇಕ ಬಳಕೆದಾರರು ಈ ಲಿಂಕ್‌ ಕೊಂಡಿಯನ್ನು ಒತ್ತುತ್ತಲೇ, ಅವರ ವಾಟ್ಸಾಪ್‌ನಲ್ಲಿರುವ ಎಲ್ಲಾ ನಂಬರ್‌ಗಳಿಗೂ ತಂತಾನೇ ಆ ಲಿಂಕ್‌ ರವಾನೆಯಾಗಿದೆ. ಹೀಗಾಗಿ ಕೆಲವೇ ಹೊತ್ತಿನಲ್ಲೇ ಈ ಲಿಂಕ್‌ ಕೋಟ್ಯಂತರ ಸಂಖ್ಯೆಯಲ್ಲಿ ಫಾರ್ವಾಡ್‌ ಆಗಿದೆ. ಕೆಲವರು ಇದು ನಕಲಿ ಎಂಬುದನ್ನು ಅರಿತು ಅದನ್ನು ಡಿಲೀಟ್‌ ಮಾಡಲು ಅದರ ಮೇಲೆ ಕ್ಲಿಕ್ಕಿಸಿದ್ದವರಿಂದಲೂ ಹಲವರಿಗೆ ಈ ಸಂದೇಶ ರವಾನೆಯಾಗಿದೆಯಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top