fbpx
ಸಮಾಚಾರ

ಕೊರೊನಾದಿಂದ ಸ್ಯಾಂಡಲ್‌ವುಡ್‌ನ ಹಿರಿಯ ಪೋಸ್ಟರ್ ಡಿಸೈನರ್, ನಿರ್ದೇಶಕ ಮಸ್ತಾನ್ ಸಾವು‌!

ಕೊರೊನಾ ಎರಡನೇ ಅಲೆಯಿಂದಾಗಿ ಅನೇಕರು ಸೋಂಕಿತರಾಗುತ್ತಿದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಿ ಅತ್ಯಂತ ವೇಗವಾಗಿ ಕೊರೊನಾ ಹರುಡುತ್ತಿದೆ. ಸಾವಿನ ಸಂಖ್ಯೆಯೂ ಕೂಡ ಜಾಸ್ತಿ ಆಗುತ್ತಿದೆ. ಇದೀಗ ಕನ್ನಡ ಚಿತ್ರರಂಗದ ಹಿರಿಯ ಪೋಸ್ಟರ್ ವಿನ್ಯಾಸಕರಾದ ಮಸ್ತಾನ್ ಅವರು ಕೂಡ ಕೋವಿಡ್‌-19ಗೆ ಬಲಿಯಾಗಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು.

ನಿರ್ದೇಶಕ ಮಸ್ತಾನ್ ಇತ್ತೀಚಿಗೆ ಕೊರೊನಾ ಪಾಸಿಟಿವ್‌ನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಹೆಸರು ಘಟ್ಟ ಬಳಿ ಇರುವ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನ ರಾತ್ರಿ (ಏಪ್ರಿಲ್ 21) ನಿಧನರಾಗಿದ್ದಾರೆ.

ಸುಮಾರು 4 ದಶಕಗಳಿಂದ ಚಿತ್ರರಂಗದಲ್ಲಿ ಪೋಸ್ಟರ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದ ಮಸ್ತಾನ್ 2000ಕ್ಕೂ ಅಧಿಕ ಚಿತ್ರಗಳಿಗೆ ಡಿಸೈನರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಡಿಸೈನರ್ ಮಾತ್ರವಲ್ಲದೇ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ. ಮೋಹನ್ ನಟನೆಯ ಶುಕ್ಲಂಬರಧರಂ, ಕಲ್ಲೇಶಿ ಮಲ್ಲಿಶಿ, ಮತ್ತು ನೀತು ಶೆಟ್ಟಿ, ನೇಹಾ ಪಾಟಿಲ್ ನಟನೆಯ ಸಿತಾರ ಸಿನಿಮಾಗಳಿಗೆ ಮಸ್ತಾನ್ ಆಕ್ಷನ್ ಕಟ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top