fbpx
ಸಮಾಚಾರ

ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದ ನಟ ಅಮಿತ್ ಹಠಾತ್ ಸಾವು

ಹಿಂದಿ ಚಿತ್ರರಂಗಕ್ಕೆ ಮೇಲಿಂದ ಮೇಲೆ ಕಹಿ ಸುದ್ದಿ ಕೇಳಿಬರುತ್ತಲೇ ಇವೆ. ಹಿರಿಯ ಸಂಗೀತ ನಿರ್ದೇಶಕ ಶ್ರವಣ್​ ರಾಥೋಡ್​ ನಿಧನರಾದ ಬೆನ್ನಲೇ ನಟ ಅಮಿತ್​ ಮಿಸ್ತ್ರೀ ಮೃತರಾಗಿದ್ದಾರೆ. ಅಮಿತ್​ ಅವರಿಗೆ ಶುಕ್ರವಾರ (ಏ.23) ಹೃದಯಾಘಾತ ಆಗಿದ್ದು, ಮುಂಬೈನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಶುಕ್ರವಾರ ಬೆಳಗ್ಗೆಯೇ ಅಮಿತ್​ ಮಿಸ್ತ್ರೀಗೆ ತೀವ್ರ ಹೃದಯಾಘಾತ ಆಗಿದೆ. ಕೂಡಲೇ ಅವರ ಪ್ರಾಣಪಕ್ಷಿ ಹಾರಿಹೋಯಿತು. ಆಸ್ಪತ್ರೆಗೆ ಕರೆತರುವಷ್ಟು ಸಮಯವೂ ಉಳಿದಿರಲಿಲ್ಲ ಎಂದು ಕುಟುಂಬದ ಮೂಲಗಳು ಮಾಧ್ಯಮಗಳಿಗೆ ಮಾಹಿತಿ ನೀಡಿವೆ. ಅಮಿತ್​ ಮಿಸ್ತ್ರೀ ನಿಧನಕ್ಕೆ ಅನೇಕ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.

ಅಮಿತ್ ಅವರ ಮ್ಯಾನೇಜರ್ ಮಹರ್ಷಿ ದೇಸಾಯಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, “ನಾನು ಶಾಕ್‌ನಲ್ಲಿದ್ದೇನೆ, ಅವರು ಚೆನ್ನಾಗಿದ್ದರು, ಮನೆಯಲ್ಲಿಯೇ ಇದ್ದರು. ಅವರಿಗೆ ಯಾವ ಆರೋಗ್ಯ ಸಮಸ್ಯೆಯೂ ಇರಲಿಲ್ಲ. ಅವರಿಗೆ ಬೆಳಗ್ಗೆ ತಿಂಡಿ ಆದನಂತರದಲ್ಲಿ ಎದೆ ಹಿಡಿದುಕೊಂಡಂತಾಯ್ತು. ಆಮೇಲೆ ಹೃದಯಾಘಾತ ಅಂತ ತಿಳಿಯಿತು. ಚಿತ್ರರಂಗಕ್ಕೆ ದೊಡ್ಡ ನಷ್ಟ. ನಾನು ಅವರ ಜೊತೆ ಕೆಲಸ ಮಾಡೋದನ್ನು ಮಿಸ್ ಮಾಡಿಕೊಳ್ತೀನಿ” ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top