fbpx
ಸಮಾಚಾರ

ಯುವ ಕಾಂಗ್ರೆಸ್ ಉಪಾಧ್ಯಕ್ಷೆಗೆ ನಲಪಾಡ್ ಕಿರುಕುಳ; ದೂರು ದಾಖಲು

ಕಾಂಗ್ರೆಸ್​ ಯುವ ನಾಯಕ ಮೊಹಮದ್ ನಲಪಾಡ್ ಹ್ಯಾರಿಸ್ ಮತ್ತೆ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ​ ಮೊಹಮದ್ ನಲಪಾಡ್ ವಿರುದ್ದ ಹೈಗ್ರೌಂಡ್ಸ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಭವ್ಯ ಅವರಿಂದ ದೂರು ನೀಡಲಾಗಿದೆ. ಬುಧವಾರ ಮಧ್ಯಾಹ್ನ ನಲಪಾಡ್ ಮತ್ತವರ ಬೆಂಬಲಿಗರು ತಮ್ಮ ಮೇಲೆ ಬೆದರಿಕೆ ಹಾಕಿಹೋಗಿದ್ದಾರೆ ಎಂದು ಭವ್ಯಾ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ನೀಡಿದ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಕೋವಿಡ್‌ನಿಂದ ಬಳಲುತ್ತಿರುವ ಜನರಿಗೆ ಔಷಧ, ಬೆಡ್‌, ಪ್ಲಾಸ್ಮಾಗೆ ನೆರವಾಗಲು ರಾಜ್ಯ ಯುವ ಕಾಂಗ್ರೆಸ್‌ ವತಿಯಿಂದ ರಕ್ಷಾ ರಾಮಯ್ಯ ನೇತೃತ್ವದಲ್ಲಿ ಏ.21ರಂದು ಕಚೇರಿಯಲ್ಲಿ ವಾರ್‌ರೂಮ್‌ ಸ್ಥಾಪಿಸುತ್ತಿದ್ದಾಗ ನುಗ್ಗಿದ ಮೊಹಮ್ಮದ್‌ ನಲಪಾಡ್‌, ಭಾಸ್ಕರ್‌, ಗೋವರ್ಧನ್‌ ಸೇರಿದಂತೆ ಇನ್ನಿತರ ಸುಮಾರು 15 ಜನರು ಬೈದು ಹಲ್ಲೆ ಮಾಡುವವರಂತೆ ಕೈ ತೋರಿಸಿ ಬೆದರಿಕೆ ಹಾಕಿದ್ದಾರೆ. ‘ಇದೆಲ್ಲಾ ನೀವು ಹೇಗೆ ಮಾಡುತ್ತೀರಿ, ನಾನೂ ನೋಡುತ್ತೇನೆ’ ಎಂದು ಏಕವಚನದಲ್ಲಿ ಮಾತನಾಡಿ ನಿಂದಿಸಿದ್ದಾರೆ ಎಂದು ಭವ್ಯಾ ಆರೋಪಿಸಿದ್ದಾರೆ.

ನಲಪಾಡ್ ಹಾಗೂ ಬೆಂಬಲಿಗರ ಬೆದರಿಕೆ, ಧಮ್ಕಿ ಹಾಗೂ ಗಲಾಟೆ ಹಿನ್ನಲೆಯಲ್ಲಿ ಭವ್ಯ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ನೀಡಿ ಬೆದರಿಕೆ ಬಗ್ಗೆ ಸಂಪೂರ್ಣ ವಿವರವನ್ನು ಉಲ್ಲೇಖಿಸಿದ್ದಾರೆ.

ಶಾಸಕರಾದ ಹಾರಿಸ್ ರವರ ಮಗ ಮೊಹಮ್ಮದ್ ನಲಪಾಡ್, ಭಾಸ್ಕರ್, ಗೋವರ್ಧನ್, ಆಗಸ್ಟಿನ್ ಹಾಗೂ ಇತರೆ 15ಕ್ಕೂ ಹೆಚ್ಚು ಜನರ ವಿರುದ್ಧ ಭವ್ಯ ದೂರು ನೀಡಿದ್ದಾರೆ. ಯುವ ಕಾಂಗ್ರೆಸ್ ಕಚೇರಿಗೆ ಏಕಾಏಕಿಯಾಗಿ ಬಂದು ನನ್ನನ್ನು ಗುರಿಯಾಗಿಸಿಕೊಂಡು ಬೈಯ್ದು, ಹೊಡೆಯುವ ಹಾಗೆ ಕೈ ತೋರಿಸಿದ್ದಾರೆ. ನನಗೆ ಹಾಗೂ ನನ್ನ ಸಹೋದ್ಯೋಗಿಗಳಿಗೆ ಏಕವಚನದಲ್ಲಿ ನಿಂದಿಸಿದ್ದಾರೆ ಎಂದು ಭವ್ಯ ಆರೋಪ ಮಾಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top