fbpx
ಸಮಾಚಾರ

ಅನಾರೋಗ್ಯ: ಈ ವಾರವೂ ಬಿಗ್​ ಬಾಸ್​ಗೆ ಕಿಚ್ಚ ಸುದೀಪ್ ಗೈರು

ನಟ ಕಿಚ್ಚ ಸುದೀಪ್​ ಅವರು ಹಲವು ದಿನಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದು ರಾಜ್ಯಾದ್ಯಂತ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ವಿವಿಧ ಬಗೆಯ ಪೂಜೆ ಸಲ್ಲಿಸುತ್ತಿದ್ದಾರೆ. ಚಿಕಿತ್ಸೆ ಮತ್ತು ಅಭಿಮಾನಿಗಳ ಹಾರೈಕೆಯ ಫಲವಾಗಿ ಸುದೀಪ್​ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಈಗ ಅವರು ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.

ಈ ವಾರವೂ ‘ಬಿಗ್ ಬಾಸ್’ ವೇದಿಕೆಗೆ ಕಿಚ್ಚ ಸುದೀಪ್ ಬರುತ್ತಿಲ್ಲ. ವಿಶ್ರಾಂತಿಯ ಅಗತ್ಯವಿರುವ ಕಾರಣ ಈ ವಾರಾಂತ್ಯವೂ ‘ಬಿಗ್ ಬಾಸ್’ ಸಂಚಿಕೆಗಳ ಚಿತ್ರೀಕರಣಕ್ಕೆ ಸುದೀಪ್ ಹಾಜರ್ ಆಗುತ್ತಿಲ್ಲ. ಹಾಗಂತ ಖುದ್ದು ಸುದೀಪ್ ಟ್ವಿಟ್ಟರ್ ಮೂಲಕ ಸ್ಪಷ್ಟ ಪಡಿಸಿದ್ದಾರೆ.

ಕಳೆದ ವಾರದ ಸಂಚಿಕೆಗಳೂ ಸುದೀಪ್‌ ಅನುಪಸ್ಥಿತಿಯಲ್ಲಿ ನಡೆದಿತ್ತು. ಇದಕ್ಕೆ ಪರ್ಯಾಯವಾಗಿ, ಮನೆಯಿಂದ ಹೊರಹೋಗಲು ನಾಮಿನೇಟ್‌ ಆಗಿದ್ದ ಸ್ಪರ್ಧಿಗಳನ್ನು ಹಲವು ಆಟದ ಮುಖಾಂತರ ಸೇಫ್‌ ಮಾಡಲಾಗಿತ್ತು. ‘ಈ ವಾರದ ಬಿಗ್‌ಬಾಸ್‌ ಎಪಿಸೋಡ್‌ಗಳಲ್ಲೂ ನಾನು ಭಾಗವಹಿಸುತ್ತಿಲ್ಲ. ವೇದಿಕೆಯಲ್ಲಿ ಹಲವು ಗಂಟೆಗಳ ಕಾಲ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲು, ನನಗೆ ಇನ್ನಷ್ಟು ವಿಶ್ರಾಂತಿಯ ಅಗತ್ಯತೆ ಇದೆ. ನಾನು ಸಂಪೂರ್ಣವಾಗಿ ಆರೋಗ್ಯದಲ್ಲಿದ್ದರಷ್ಟೇ ಸ್ಪರ್ಧಿಗಳಿಗೆ ನ್ಯಾಯ ಒದಗಿಸಲು ಸಾಧ್ಯ. ಇದು ಕಠಿಣ ನಿರ್ಧಾರ, ಚಿತ್ರೀಕರಣ ರದ್ದುಗೊಳಿಸಿದ ಕಲರ್ಸ್‌ ಕನ್ನಡಕ್ಕೆ ಧನ್ಯವಾದ. ನಿಮ್ಮ ಪ್ರಾರ್ಥನೆಗೆ ಧನ್ಯವಾದ’ ಎಂದು ಸುದೀಪ್‌ ಟ್ವೀಟ್‌ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top