fbpx
ಸಮಾಚಾರ

ರುಂಡ ಮುಂಡ ಕತ್ತರಿಸಿ ಕೊಲೆ ಪ್ರಕರಣ: ಕನ್ನಡ ಚಿತ್ರ ನಟಿ ಅರೆಸ್ಟ್

ತನ್ನ ಪ್ರೀತಿಗೆ ಅಡ್ಡ ಬಂದ ಸಹೋದರನ ಕೊಲೆಗೆ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಛೋಟಾ ಮುಂಬೈ ಚಿತ್ರದ ನಟಿಯನ್ನ ಪೊಲೀಸರು ಬಂಧಿಸಿದ್ದಾರೆ. ನಟಿ, ಮಾಜಿ ಗಗನಸಖಿ ಹಾಗೂ ಮಿಸ್ ಕರ್ನಾಟಕ ಕಿರೀಟ ಪಡೆದಿದ್ದ ನಟಿ ಶನಯಾ ಕಾಟವೇಯನ್ನ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಬಂಧಿಸಿದ್ದರು. ಸದ್ಯ ನಟಿಯನ್ನ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

ರಾಕೇಶ್ ಕಾಟ್ವೆ ಎಂಬಾತನ ರುಂಡ, ಮುಂಡ ಬೇರ್ಪಟ್ಟಿದ್ದು ಅರ್ಧಂಬರ್ಧ ಸುಟ್ಟು ಹಾಕಿದ್ದ ಆತನ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಇದೀಗ ಛೋಟಾ ಬಾಂಬೆ ಚಿತ್ರದ ನಟಿ ಶನಾಯ, ಪ್ರಿಯಕರ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿದ್ದಾರೆ. ಜೊತೆಗೆ ಇನ್ನೂ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಈ ಮೊದಲೆ ಬಂಧಿತನಾಗಿರುವ ನಿಯಾಜ್‌ ಹಾಗೂ ಶನಾಯಾ ಪ್ರೇಮ ಪ್ರಕರಣವೇ ಕೊಲೆಗೆ ಕಾರಣ ಎಂಬುದು ಇಲ್ಲಿವರೆಗಿನ ತನಿಖೆಯಿಂದ ತಿಳಿದುಬಂದಿದೆ. ಮಲ್ಲಿಕ್‌ ಹಾಗೂ ಫಿರೋಜ್‌ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಸೈಫುದ್ದಿನ್‌ ಮೇಲೆ ಕೊಲೆಗೆ ಸಲಹೆ ನೀಡಿರುವ ಆರೋಪವಿದೆ. ಇನ್ನು, ಶನಾಯಾಗೆ ಕೊಲೆ ಪ್ರಕರಣ ತಿಳಿದಿತ್ತು. ಮೃತದೇಹದ ಜತೆ ಆಕೆ ಮೂರು ದಿನ ಇದ್ದಳೆ? ಎಂಬುದು ಸೇರಿದಂತೆ ಹೆಚ್ಚಿನ ಪಾತ್ರದ ಬಗ್ಗೆ ತನಿಖೆಯಿಂದ ಗೊತ್ತಾಗಬೇಕಿದೆ ಎಂದರು.

ರುಂಡ ಮುಂಡ

ಕಳೆದ ಏ. 10ರಂದು ಮಧ್ಯಾಹ್ನ ದೇವರಗುಡಿಹಾಳದಲ್ಲಿ ಅಪರಿಚಿತ ರುಂಡ ಸುಟ್ಟ ಹಾಗೂ ಹುಳ ಹಿಡಿದ ರೀತಿಯಲ್ಲಿ ಸಿಕ್ಕಿತ್ತು. ಸಂಜೆ ಕೇಶ್ವಾಪುರ ಸರಹದ್ದಿನಲ್ಲಿ ಕೈಕಾಲು ಇಲ್ಲದ ಮುಂಡ ಪತ್ತೆಯಾಗಿತ್ತು. ಹೀಗೆ ಭೀಕರವಾಗಿ ಕೊಲೆಯಾಗಿದ್ದು ಯಾರು? ಎಲ್ಲಿಯವ ಎಂಬ ಸಣ್ಣ ಸುಳಿವೂ ಇರಲಿಲ್ಲ. ಈ ಪ್ರಕರಣ ಮಹಾನಗರದಲ್ಲಿ ಸಾಕಷ್ಟುಕುತೂಹಲಕ್ಕೆ ಕಾರಣವಾಗಿತ್ತು. ಗ್ರಾಮೀಣ ಹಾಗೂ ಕೇಶ್ವಾಪುರ ಠಾಣೆ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದರು. ಕ್ಷಿಪ್ರಗತಿಯ ತನಿಖೆ ನಡೆಸಿದ ಪೊಲೀಸರು ಏ. 19ರಂದು ಕೊಲೆಯಾಗಿದ್ದು ರಾಕೇಶ ಕಾಟವೆ ಎಂದು ಪತ್ತೆ ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top