fbpx
ಸಮಾಚಾರ

ಅಪರೂಪದ ದಾಖಲೆ ನಿರ್ಮಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು

ಐಪಿಎಲ್ 2021 ಟೂರ್ನಿಯ ಪಂದ್ಯಗಳು ಮುಂಬೈ ಹಾಗೂ ಚೆನ್ನೈನ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದೆ. ಮೊದಲ 16 ಪಂದ್ಯಗಳು ನಡೆದಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 4 ಪಂದ್ಯಗಳಲ್ಲಿ ನಾಲ್ಕನ್ನೂ ಗೆಲ್ಲುವ ಮೂಲಕ ಮತ್ತೆ ಮೊದಲ ಸ್ಥಾನಕ್ಕೆ ಏರಿದೆ. ಈ ಮದ್ಯೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯಾವುದೇ ತಂಡ ಮಾಡದೆ ಇರುವುವಂತಹ ದಾಖಲೆಯೊಂದನ್ನು ನಿರ್ಮಿಸಿ ಅಭಿಮಾನಿಗಳ ಮನಗೆದ್ದಿದೆ.

ಪಡಿಕ್ಕಲ್ ಶತಕದೊಂದಿಗೆ ಆರ್‌ಸಿಬಿ ಹೆಸರಿಗೆ ವಿಶೇಷ ದಾಖಲೆ ಸೇರ್ಪಡೆಯಾಗಿದೆ. ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಶತಕಗಳ ಬಾರಿಸಿದ ತಂಡಗಳಲ್ಲಿ ಕೊಹ್ಲಿ ಪಡೆ ಅಗ್ರಸ್ಥಾನಕ್ಕೇರಿದೆ. ಐಪಿಎಲ್‌ನಲ್ಲಿ ಆರ್‌ಸಿಬಿ ಈವರೆಗೆ ಒಟ್ಟಾರೆ 14 ಶತಕಗಳನ್ನು ಬಾರಿಸಿದಂತಾಗಿದೆ.

2008ರಿಂದ ಪ್ರಾರಂಭವಾದ ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಆರ್​ಸಿಬಿ ತಂಡ ಒಟ್ಟು 14 ಶತಕ ಸಿಡಿಸಿದೆ. ತಂಡದ ನಾಯಕ ವಿರಾಟ್ ಕೊಹ್ಲಿ ಆರ್​ಸಿಬಿ ಪರ 5 ಶತಕ ಸಿಡಿಸಿದರೆ. ಅದೇ ತಂಡದಲ್ಲಿದ್ದ ಕ್ರೀಸ್ ಗೇಲ್ 4 ಶತಕ, ಎಬಿಡಿ ವಿಲಿಯರ್ಸ್ 3 ಶತಕ, ಮನೀಶ್ ಪಾಂಡೆ 1 ಶತಕ ಮತ್ತು ದೇವದತ್ ಪಡಿಕ್ಕಲ್ 1 ಶತಕ ಬಾರಿಸಿ ಒಟ್ಟು 14 ಶತಕ ಬಾರಿಸುವ ಮೂಲಕ ನಂಬರ್ ಒನ್ ಸ್ಥಾನ ಪಡೆದುಕೊಂಡಿದೆ.

ಶತಕಗಳ ಸಾಧನೆಯಲ್ಲಿ 11 ಶತಕ ಸಿಡಿಸಿರುವ ಪಂಜಾಬ್ ತಂಡ 2ನೇ ಸ್ಥಾನ ಪಡೆದುಕೊಂಡಿದೆ. ಪಂಜಾಬ್ ಪರ ಕ್ರೀಸ್ ಗೇಲ್ ಮತ್ತು ಆಶೀಮ್ ಆಮ್ಲ ತಲಾ 2 ಶತಕ ಬಾರಿಸಿದರೆ, ಶಾನ್ ಮಾರ್ಷ್, ಮಹೇಲಾ ಜಯವರ್ಧನೆ, ಪೌಲ್ ವಾಲ್‍ತಾಟಿ, ಆ್ಯಡಮ್ ಗಿಲ್‍ಕ್ರಿಸ್ಟ್, ಡೇವಿಡ್ ಮಿಲ್ಲರ್, ವಿರೇಂದ್ರ ಸೆಹ್ವಾಗ್, ವೃದ್ದಿಮಾನ್ ಸಹಾ, ಮತ್ತು ಕೆ.ಎಲ್ ರಾಹುಲ್ ತಲಾ ಒಂದು ಶತಕ ಸಿಡಿಸುವ ಮೂಲಕ ಪಂಜಾಬ್ ತಂಡ ಒಟ್ಟು 11 ಶತಕಗಳ ಸಾಧನೆ ಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top