fbpx
ಸಮಾಚಾರ

ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಸೋತ ಬೆನ್ನಲ್ಲೆ RCB ನಾಯಕ ವಿರಾಟ್ ಕೊಹ್ಲಿಗೆ ಆಘಾತ!

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ಹೀನಾಯವಾಗಿ ಸೋಲು ಕಂಡಿದೆ. ಈ ಸೋಲಿನ ಬೆನ್ನಲ್ಲೇ ಈಗ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಗ ದಂಡದ ಬರೆ ಬಿದ್ದಿದೆ. ನಿಧಾನಗತಿಯ ಬೌಲಿಂಗ್‌ನಿಂದಾಗಿ ನಿಗದಿತ ಸಮಯದಲ್ಲಿ ಇನ್ನಿಂಗ್ಸ್ ಪೂರ್ತಿಗೊಳಿಸದ ಕಾರಣಕ್ಕೆ ವಿರಾಟ್ ಕೊಹ್ಲಿ 12 ಲಕ್ಷ ರೂಪಾಯಿ ದಂಡಕ್ಕೆ ಗುರಿಯಾಗಿದ್ದಾರೆ.

ಸಾಮಾನ್ಯವಾಗಿ ಇನ್ನಿಂಗ್ಸ್‌ನಲ್ಲಿ 20 ಓವರ್‌ಗಳನ್ನು ಪೂರ್ಣಗೊಳಿಸಲು 90 ನಿಮಿಷಗಳನ್ನು ನೀಡಲಾಗುತ್ತದೆ, ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 20 ಓವರ್‌ಗಳನ್ನು ಎಸೆಯಲು ಹೆಚ್ಚು ಸಮಯ ತೆಗೆದುಕೊಂಡಿತು. ಈ ಕಾರಣದಿಂದ ವಿರಾಟ್ ಕೊಹ್ಲಿಗೆ 12 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ.

ಈ ಆವೃತ್ತಿಯಲ್ಲಿ ಆರ್​ಸಿಬಿ ನಿರಂತರವಾಗಿ ಈ ತಪ್ಪನ್ನು ಮಾಡುತ್ತಿರುವುದು ಕಂಡುಬಂದರೆ, ಕೊಹ್ಲಿಯ ಮೇಲೆ ಪಂದ್ಯದ ಅಮಾನತು ಸಹ ವಿಧಿಸಬಹುದು. ಮುಂದಿನ ಪಂದ್ಯಗಳಲ್ಲಿ ಹೀಗಾಗದಂತೆ ನಿಯಂತ್ರಿಸಲು ಈ ಕಠಿಣ ಕ್ರಮ ಮುಖ್ಯವಾಗಿದೆ. ಒಂದು ವೇಳೆ ಈ ತಪ್ಪು ಮರುಕಳಿಸಿದರೆ ಅವರಿಗೆ ಪಂದ್ಯವೊಂದರಲ್ಲಿ ನಿಷೇಧ ಹೇರಬಹುದಾಗಿದೆ.

ಈ ಪಂದ್ಯದ ಗೆಲುವಿನೊಂದಿಗೆ ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನಕ್ಕೇರಿದ್ದು, ಬುಧವಾರ ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ಸೆಣಸಲಿದೆ, ಇನ್ನು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತನ್ನ ಆರನೇ ಪಂದ್ಯವಾಡಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top