fbpx
ಸಮಾಚಾರ

ಬಿಗ್ ಬಾಸ್ ಮನೆಯಿಂದ ಬಲಿಷ್ಠ ಸ್ಪರ್ದಿ ಎಲಿಮಿನೇಟ್: ಅಚ್ಚರಿಯಲ್ಲಿ ವೀಕ್ಷಕರು

ಬಿಗ್‍ಬಾಸ್ ಮನೆಯ ವಾರಾಂತ್ಯದ ಕಾರ್ಯಕ್ರಮದಲ್ಲಿ ಈ ವಾರ ಯಾರು ಮನೆಯಿಂದ ಆಚೆ ಹೋಗುತ್ತಾರೆ ಎನ್ನುವ ಕುತೂಹೂಲ ವೀಕ್ಷಕರಿಗೆ ಇತ್ತು. ಯಾರು ಮನೆಯಿಂದ ಆಚೆ ಹೋಗುತ್ತಾರೆ ಎಂದು ವೀಕ್ಷಕರು ಅಂದುಕೊಂಡಿದ್ದರೋ ಆ ಲೆಕ್ಕಾಚಾರ ಉಲ್ಟಾ ಆಗಿದೆ. ಏಕೆಂದರೆ ಬಿಗ್ ಬಾಸ್ ಮನೆಯ ಬಲಿಷ್ಠ ಸ್ಪರ್ದಿ ಎನಿಸಿಕೊಂಡಿದ್ದ ರಾಜೀವ್ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.

 

 

ಈ ವಾರ ದಿವ್ಯಾ ಸುರೇಶ್, ಪ್ರಶಾಂತ್ ಸಂಬರಗಿ, ಮಂಜು ಪಾವಗಡ, ರಾಜೀವ್, ವೈಷ್ಣವಿ ಗೌಡ, ರಘು ಗೌಡ ನಾಮಿನೇಟ್ ಆಗಿದ್ದರು. ಆರಂಭದಿಂದಲೂ ರಾಜೀವ್ ಮನೆಯ ಸ್ಟ್ರಾಂಗ್ ಕ್ಯಾಂಡಿಡೇಟ್ ಎಂದೇ ಬಿಂಬಿಸಲಾಗಿತ್ತು. ಅದಕ್ಕೆ ತಕ್ಕಂತೆ ಅವರು ಟಾಸ್ಕ್‌ಗಳನ್ನು ಅವರು ಉತ್ತಮವಾಗಿಯೇ ಆಡುತ್ತಿದ್ದರು. ಆದರೆ, ಈ ವಾರ ಮತ್ತೆ ಎಲಿಮಿನೇಷನ್ ಪ್ರಕ್ರಿಯೆ ನಡೆಯಲ್ಲಿ ರಾಜೀವ್ ಮನೆಗೆ ಹೋಗಿದ್ದಾರೆ.

ಕಳೆದ ವಾರ ಸುದೀಪ್ ವಿಕೇಂಡ್ ಎಪಿಸೋಡ್‍ನಿಂದ ದೂರ ಉಳಿದಿದ್ದರು. ಕಳೆದವಾರ ಬಿಗ್‍ಬಾಸ್ ಮನೆಯಲ್ಲಿ ಎಂದಿನಂತೆ ಎಲಿಮಿನೇಷನ್ ಪ್ರಕ್ರಿಯೆ ನಡೆದು ಒಬ್ಬ ಸ್ಪರ್ಧಿ ಹೊರಹೋಗಿದ್ದರು. ಈ ವಾರ ಮತ್ತೆ ಎಲಿಮಿನೇಷನ್ ಪ್ರಕ್ರಿಯೆ ನಡೆಯಲ್ಲಿ ರಾಜೀವ್ ಮನೆಗೆ ಹೋಗಿದ್ದಾರೆ. ರಾಜೀವ್ ಮನೆಯಿಂದ ಹೊರ ಹೋಗಿದ್ದಾರಾ? ಅಥವಾ ಸೀಕ್ರೀಟ್ ರೂಮಿನಲ್ಲಿದ್ದಾರಾ ಎಂಬುದು ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top