fbpx
ಸಮಾಚಾರ

“ರಕ್ಷಿತ್ ಶೆಟ್ಟಿನ ಮದುವೆಯಾಗಿ” ಎಂದ ಅಭಿಮಾನಿಗೆ ರಮ್ಯಾ ಕೊಟ್ಟ ಉತ್ತರ ಏನು ಗೊತ್ತಾ?

ಕನ್ನಡ ಚಿತ್ರರಂಗದಲ್ಲಿ ಮೋಹಕ ತಾರೆ, ಸ್ಯಾಂಡಲ್ ವುಡ್ ಕ್ವೀನ್ ಅಂತಲೇ ಕರೆಸಿಕೊಂಡು ಬೇಡಿಕೆ ಇರುವಾಗಲೇ ರಾಜಕಾರಣದಲ್ಲಿ ಕಳೆದು ಹೋದವರು ನಟಿ ರಮ್ಯಾ. ಆದರೆ ಖುದ್ದು ಕಾಂಗ್ರೆಸ್ ಕಾರ್ಯಕರ್ತರಿಗೇ ಆಕೆಯ ರಾಜಕೀಯ ನಡೆ ಏನು ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಚಿತ್ರಣಗಳಿಲ್ಲ.. ಆ ವಿಷ್ಯ ಹಾಗಿರಲಿ, ಭಾನುವಾರದ ಜಾಲಿ ಮೂಡ್​ನಲ್ಲಿರೋ ರಮ್ಯಾ ತಮ್ಮ ಇಸ್ಟಾಗ್ರಾಂನಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಮುಕ್ತವಾಗಿ ಉತ್ತರಿಸಿದ್ದಾರೆ.

 

 

ಯಾವಾಗಾ ಮದುವೆ ಆಗ್ತೀರಾ, ಎಂಥ ಹುಡುಗನ್ನು ಮದುವೆ ಆಗ್ತೀರಾ, ರಾಜಕೀಯಕ್ಕೆ ಮತ್ತೆ ಎಂಟ್ರಿ ಕೊಡ್ತೀರಾ, ಮತ್ತೆ ಸಿನಿಮಾಗಳಲ್ಲಿ ಯಾವಾಗ ಕಾಣಿಸಿಕೊಳ್ಳುತ್ತೀರಾ, ಐಪಿಎಲ್​ನಲ್ಲಿ ನಿಮ್ಮ ನೆಚ್ಚಿನ ತಂಡ ಯಾವುದು, ನೀವು ಈಗ ಕಾಂಗ್ರೆಸ್ಸಾ ಬಿಜೆಪಿನಾ, ವಾಟ್ಸಪ್​ ಬಳಸತ್ತೀರಾ ಎಂಬೆಲ್ಲಾ ಪ್ರಶ್ನೆಗಳಿಗೆ ಸ್ಯಾಂಡಲ್​ವುಡ್​ ಪದ್ಮಾವತಿ ಕೂಲ್​ ಆಗಿ ಉತ್ತರಿಸಿದ್ದಾರೆ.

ನೆಟ್ಟಿಗರಿಂದ ಅವರಿಗೆ ಹಲವು ಬಗೆಯ ಪ್ರಶ್ನೆಗಳು ಎದುರಾದವು. ಅದರಲ್ಲಿ ಹೆಚ್ಚು ಹೈಲೈಟ್​ ಆಗಿದ್ದು ಮದುವೆ ವಿಚಾರ. ಒಬ್ಬ ಅಭಿಮಾನಿಯಂತೂ ‘ನಿಮ್ಮ ಮದುವೆ ಯಾವಾಗ? ನೀವು ರಕ್ಷಿತ್​ ಶೆಟ್ಟಿ ಜೊತೆ ಮದುವೆ ಆಗಿ’ ಎಂದು ಬೇಡಿಕೆ ಇಟ್ಟಿದ್ದಾರೆ!

ಈ ಪ್ರಶ್ನೆ ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ. ರಮ್ಯಾ ಮತ್ತು ರಕ್ಷಿತ್​ ಶೆಟ್ಟಿಯನ್ನು ಜೋಡಿಯಾಗಿಸಬೇಕು ಎಂದು ಕನಸು ಕಂಡ ಆ ಅಭಿಮಾನಿ ಯಾರು ಎಂಬುದು ಸದ್ಯಕ್ಕೆ ಬಹಿರಂಗ ಆಗಿಲ್ಲ. ಆದರೆ ಆ ಪ್ರಶ್ನೆಗೆ ರಮ್ಯಾ ತುಂಬ ಕೂಲ್​ ಆಗಿ ಉತ್ತರ ನೀಡಿದ್ದಾರೆ. ಸಿಂಪಲ್​ ಆಗಿ ರಕ್ಷಿತ್​ ಶೆಟ್ಟಿ ಅವರ ಹೆಸರನ್ನು ಟ್ಯಾಗ್​ ಮಾಡುವ ಮೂಲಕ ಜೋರಾಗಿ ನಗುತ್ತಿರುವ ಎಮೋಜಿಗಳನ್ನು ರಮ್ಯಾ ಹಂಚಿಕೊಂಡಿದ್ದಾರೆ. ಮದುವೆ ಆಗುತ್ತೇನೆ ಅಥವಾ ಆಗಲ್ಲ ಎಂದು ನೇರವಾಗಿ ಅವರು ಏನನ್ನೂ ಹೇಳಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top