fbpx
ಸಮಾಚಾರ

ಸರ್ಜಾ ಪುತ್ರನಿಗೆ 6 ತಿಂಗಳ ಸಂಭ್ರಮ: ಇಲ್ಲಿವೆ ಸಂಭ್ರಮಾಚರಣೆ ಫೋಟೋಗಳು

ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಪುತ್ರ ಸಿಂಬಾ ಜನಿಸಿ ಆರು ತಿಂಗಳು ಕಳೆದಿದೆ. ಸಂಭ್ರಮವನ್ನು ಮೇಘನಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕ್ಯೂಟ್​ ಕ್ಯೂಟ್​ ಫೋಟೋಗಳನ್ನು ಅವರು ಅಭಿಮಾನಿಗಳ ಜತೆ ಹಂಚಿಕೊಂಡಿದ್ದಾರೆ. ಜೂ..ಚಿರುಗೆ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ.

 

 

View this post on Instagram

 

A post shared by Meghana Raj Sarja (@megsraj)

 

ಮೇಘನಾ ರಾಜ್ ಸರ್ಜಾ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಮಗನ ಫೋಟೋಗಳು ಶೇರ್ ಮಾಡಿಕೊಂಡಿದ್ದಾರೆ. ಮಗ ಆರು ತಿಂಗಳನವನಾದ. ನಾನು ಮತ್ತು ತಂದೆ ಇಬ್ಬರು ಆತನನ್ನು ತುಂಬಾ ಪ್ರೀತಿಸುತ್ತೇವೆ ಎಂದು ಬರೆದು ಆರರ ಸಂಭ್ರಮ ಆಯೋಜಿಸಿದ ಎಲ್ಲರಿಗೂ ಮೇಘನಾ ರಾಜ್ ಧನ್ಯವಾದ ಸಲ್ಲಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅಮ್ಮನ ಮಗ ಅಂತ ಬರೆದುಕೊಂಡು ಮುದ್ದಾದ ಫೋಟೋವನ್ನ ಮೇಘನಾ ಹಂಚಿಕೊಂಡಿದ್ದರು.

 

 

ಇತ್ತೀಚೆಗೆ ಮಗುವಿಗೆ ಕೊರೊನಾ ಅಂಟುವ ಭಯ ಕಾಡಿದ ಬಗ್ಗೆ ಮೇಘನಾ ಹೇಳಿಕೊಂಡಿದ್ದರು. ನನ್ನ ಗೆಳೆಯರ ಜತೆ ನಾನು ಸಂಪರ್ಕದಲ್ಲಿದ್ದೆ. ಆದರೆ, ಅವರಿಗೆ ಕೊರೊನಾ ಪಾಸಿಟಿವ್​ ಕಾಣಿಸಿಕೊಂಡಿತ್ತು. ಹೀಗಾಗಿ, ನಾನು ಸೆಲ್ಫ್​ ಕ್ವಾರಂಟೈನ್​ ಆದೆ. ನನ್ನ ಮಗು ಹಾಗೂ ಪಾಲಕರ ಆರೋಗ್ಯದ ಬಗ್ಗೆ ನೆನೆದು ತುಂಬಾನೇ ಭಯಗೊಂಡಿದ್ದೆ. ನನ್ನಲ್ಲಿ ಯಾವುದೇ ಕೊರೊನಾ ಲಕ್ಷಣ ಕಾಣಿಸಿಲ್ಲ. ಆದಾಗ್ಯೂ, ನಾನು ಕೊರೊನಾ ಪರೀಕ್ಷೆಗೆ ಒಳಪಟ್ಟೆ. ಈ ವೇಳೆ ನೆಗೆಟಿವ್​ ಬಂದಿದೆ ಎಂದು ಮೇಘನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top