fbpx
ಸಮಾಚಾರ

ಸಿಎಸ್‌ಕೆ ವಿರುದ್ಧ ಸೋತ ಬೆನ್ನಲ್ಲೆ RCB ತಂಡಕ್ಕೆ ಆಘಾತ: ಆಸ್ಟ್ರೇಲಿಯಾದ ಇಬ್ಬರು ಸ್ಟಾರ್ ಆಟಗಾರರು ಟೂರ್ನಿಯಿಂದಲೇ ಔಟ್

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ಹೀನಾಯವಾಗಿ ಸೋಲು ಕಂಡಿದೆ. ಈ ಸೋಲಿನ ಬೆನ್ನಲ್ಲೇ ಈಗ ಆರ್‌ಸಿಬಿ ಆಘಾತವಾಗಿದೆ. ಹೌದು ಆಸ್ಟ್ರೇಲಿಯಾದ ಇಬ್ಬರು ಸ್ಟಾರ್ ಆಟಗಾರರು ಇಡೀ ಐಪಿಎಲ್ ನಿಂದಲೇ ಹಿಂದಕ್ಕೆ ಸರಿದಿದ್ದಾರೆ. ಕೇನ್ ರಿಚರ್ಡ್ಸನ್ ಮತ್ತು ಆಡಮ್ ಜಂಪಾ ಟೂರ್ನಿಯಿಂದ ಹಿಂದೆ ಸರಿದ ಆಟಗಾರರು.

 

 

ವೈಯಕ್ತಿಕ ಕಾರಣಗಳನ್ನು ನೀಡಿ ಈ ಇಬ್ಬರು ಆಟಗಾರರು ತವರಿಗೆ ವಾಪಾಸಾಗಲು ನಿರ್ಧಾರಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಆರ್‌ಸಿಬಿ ಫ್ರಾಂಚೈಸಿ ಕೂಡ ಸ್ಪಷ್ಟಪಡಿಸಿದ್ದು ಇಬ್ಬರು ಆಟಗಾರರು ಟೂರ್ನಿಯಿಂದ ಹೊರನಡೆಯುತ್ತಿರುವುದನ್ನು ಖಚಿತಪಡಿಸಿದೆ. ಲೆಗ್ ಸ್ಪಿನ್ನರ್ ಝಾಂಪ ಅವರನ್ನು ಆರ್‍ಸಿಬಿ 1.5 ಕೋ.ರೂ. ಹಾಗೂ ರಿಚರ್ಡ್‍ಸನ್ ಅವರನ್ನು 4 ಕೋ.ರೂ.ಗೆ ಆಟಗಾರರ ಹರಾಜಿನ ವೇಳೆ ಖರೀದಿಸಿತ್ತು.

ರಾಜಸ್ತಾನ ತಂಡಕ್ಕೂ ಆಘಾತ:
ಆಸ್ಟ್ರೇಲಿಯದ ಇನ್ನೊರ್ವ ಆಟಗಾರ, ರಾಜಸ್ಥಾನ ರಾಯಲ್ಸ್ ವೇಗದ ಬೌಲರ್ ಆಂಡ್ರೂ ಟೈ ಅವರು ಭಾರತದಲ್ಲಿ ಕೋವಿಡ್-19 ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಮ್ಮದೇ ದೇಶದಿಂದ ಲಾಕ್ ಔಟ್ ಆಗಬಹುದೆಂಬ ಭಯದಿಂದ ಐಪಿಎಲ್ ಲೀಗ್ ನಿಂದ ಹೊರ ನಡೆದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top