fbpx
ಸಮಾಚಾರ

ಐಪಿಎಲ್ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ಬರೆದ ಎಬಿ ಡಿವಿಲಿಯರ್ಸ್

ಬ್ಯಾಟ್ ಹಿಡಿದು ಮೈದಾನಕ್ಕಿಳಿದರೆ ಹೀನಾಮಾನ ಬ್ಯಾಟಿಂಗ್ ನಡೆಸಿ ಎದುರಾಳಿಗಳ ಸೊಲ್ಲು ಅಡಗಿಸುವ ದಕ್ಷಿಣ ಆಫ್ರಿಕಾದ ಸ್ಪೋಟಕ ಬ್ಯಾಟ್ಸ್ ಮ್ಯಾನ್ ಎಬಿ ಡಿ ವಿಲಿಯರ್ಸ್ ಐಪಿಎಲ್ ನಲ್ಲಿ ಹೊಸ ಮೈಲಿಗಲ್ಲನ್ನ ಸ್ಥಾಪಿಸಿದ್ದಾರೆ. ಐಪಿಎಲ್‌ನಲ್ಲಿ 5000 ರನ್ ದಾಖಲೆ ಪಟ್ಟಿಗೆ ಮಿಸ್ಟರ್ 360 ಡಿಗ್ರೀ ಖ್ಯಾತಿಯ ಎಬಿಡಿ ಸೇರಿಕೊಂಡಿದ್ದಾರೆ.

 

 

ಅತೀ ಕಡಿಮೆ ಎಸೆತಗಳಲ್ಲಿ 5000 ರನ್:
ಐಪಿಎಲ್ ಇತಿಹಾಸದಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 5000 ರನ್ ಪೂರೈಸಿದ ಆಟಗಾರ ಎಂಬ ಸಾಧನೆಯನ್ನು ಎಬಿ ಡಿವಿಲಿಯರ್ಸ್ ಮಾಡಿದ್ದಾರೆ. ಕೇವಲ 3288 ಎಸೆತಗಳಲ್ಲಿ ಎಬಿ ಡಿವಿಲಿಯರ್ಸ್ 5000 ಐಪಿಎಲ್ ರನ್‌ಗಳನ್ನು ಪೂರೈಸಿ ಅತಿ ಕಡಿಮೆ ಎಸೆತಗಳಲ್ಲಿ 5000 ರನ್ ಪೂರೈಸಿದ ಆಟಗಾರ ಎಂಬ ಹೊಸ ಮೈಲಿಗಲ್ಲನ್ನು ನೆಟ್ಟಿದ್ದಾರೆ.

ಎಬಿಡಿ ವಿಲಿಯರ್ಸ್ ಹೊರತುಪಡಿಸಿ ಡೇವಿಡ್ ವಾರ್ನರ್ 3544 ಎಸೆತಗಳಲ್ಲಿ 5000 ರನ್ ಪೂರೈಸಿದ್ದರು ಹಾಗೂ ಸುರೇಶ್ ರೈನಾ 3620 ಎಸೆತಗಳಲ್ಲಿ 5000 ಐಪಿಎಲ್ ರನ್‌ಗಳನ್ನು ಪೂರೈಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top