fbpx
ಸಮಾಚಾರ

ಚಿಕ್ಕ ವಯಸ್ಸಿನಲ್ಲಿ ವೇಶ್ಯೆಯರ ಮನೆಯಲ್ಲಿ ಕೆಲಸ: ಭಯಾನಕ ಘಟನೆ ಬಗ್ಗೆ ಹೇಳಿಕೊಂಡ ಚಕ್ರವರ್ತಿ

ಬಿಗ್‍ಬಾಸ್ ಮನೆಯಲ್ಲಿ ಕೆಲವೊಂದು ಟಾಸ್ಕ್ ಗಳ ಮೂಲಕ ಸ್ಪರ್ಧಿಗಳು ತಾವು ಅನುಭವಿಸಿದ ನೈಜ ಘಟನೆಗಳನ್ನು ಬಿಚ್ಚಿಡುತ್ತಿದ್ದಾರೆ. ಅಂತೆಯೇ ಇದೀಗ ಚಕ್ರವರ್ತಿ ಚಂದ್ರಚೂಡ್ ಅವರು ಭಯಾನಕ ಘಟನೆಯೊಂದನ್ನು ಬಹಿರಂಗಪಡಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೆ ಒಳಪಡಿಸಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ನಲ್ಲಿ ಸ್ಪರ್ಧಿಗಳು ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆ ಬಗ್ಗೆ ಹೇಳಬೇಕು. ಆಗ ಚಕ್ರವರ್ತಿ ಎದ್ದು ನಿಂತರು. ನಾನು ಚೆನ್ನೈ ರೈಲ್ವೆ ನಿಲ್ದಾಣದಲ್ಲಿದ್ದೆ. ಮೂರು ದಿನಗಳ ಕಾಲ ಹಸಿದುಕೊಂಡಿದ್ದೆ. ಮನೆಯ ಸಂಪರ್ಕ ಕಡಿತವಾಗಿತ್ತು. ಆಗ ನನಗೆ ಓರ್ವನ ಪರಿಚಯ ಆಯ್ತು. ಅವನು ನನ್ನನ್ನು ಕರೆದುಕೊಂಡು ಹೋಗಿ ವೇಶ್ಯರ ಮನೆಗೆ ಕೆಲಸಕ್ಕೆ ಬಿಟ್ಟಿದ್ದ.

ಆ ಮನೆಯಲ್ಲಿ 127 ಜನ ದೇವತೆಯರು ಇದ್ದರು. ಹದಿನಾಲ್ಕೂವರೆ ವರ್ಷದ ಒಬ್ಬ ಹುಡುಗಿಯನ್ನು ಆಕೆಯ ಚಿಕ್ಕಪ್ಪನೇ ಮಾರಿ ಹೋಗುತ್ತಾನೆ. ಅವತ್ತಿಗೆ ಆಕೆಯ ಬೆಲೆ 37 ಸಾವಿರ ರೂ.! ಅವಳ ಮೇಲೆ ನನಗೆ ಮೊದಲ ಪ್ರೀತಿ. ಅವಳು ನನಗೆ ಹೇಳ್ತಾಳೆ, ‘ನಿಜಕ್ಕೂ ನಿನಗೆ ನನ್ನ ಮೇಲೆ ಪ್ರೀತಿ ಇದ್ರೆ, ನನ್ನ ಇಲ್ಲಿಂದ ಕರೆದುಕೊಂಡು ಹೋಗು…’- ಅಲ್ಲಿಂದ ಹೇಗೆ ಹೊರಗೆ ಬರೋದು ಎಂಬುದು ನನಗೆ ದೊಡ್ಡ ಪ್ರಶ್ನೆ ಆಯ್ತು. ಪ್ಲ್ಯಾನ್ ಮಾಡಿ ಮಾಡಿ, ಒಮ್ಮೆ ಒಂದು ದೊಡ್ಡ ಬಾಕ್ಸ್‌ನಲ್ಲಿ ಅವಳನ್ನು ಹಾಕಿಕೊಂಡು, ಅಲ್ಲಿಂದ ಹೊರಗೆ ಕರೆದುಕೊಂಡು ಬರಬೇಕು ಎಂದು ನಿರ್ಧರಿಸಿದೆ. ರಾತ್ರಿ ಚೆನ್ನೈನಿಂದ ಬೆಂಗಳೂರಿಗೆ ಒಂದು ರೈಲು ಇದೆ. ಅದರಲ್ಲಿ ಬರಬೇಕು ಎಂದು ನಿರ್ಧಾರ ಮಾಡಿದೆ’ ಎಂದು ಹೇಳಿದರು ಅವರು.

ಆಕೆಯೇ ನನ್ನ ಮೊದಲ ಲವ್.. ಪ್ರೀತಿ ಎಂದರೆ ಇಂದಿಗೂ ನನಗೆ ಆಕೆಯೇ ನೆನಪಾಗುತ್ತಾಳೆ. ಅಲ್ಲಿಂದ ತಪ್ಪಿಸಿಕೊಳ್ಳಬೇಕು ಎಂದು ಇಬ್ಬರೂ ನಿರ್ಧಾರ ಮಾಡುತ್ತೇವೆ. ಕಸ ತುಂಬುವ ನಾಟಕ ಮಾಡಿ ಸಿನಿಮೀಯ ರೀತಿಯಲ್ಲಿ ಎಸ್ಕೇಪ್ ಆಗಿ ಕರ್ನಾಟಕ್ಕೆ ಬರುವ ರೈಲು ಹತ್ತುತ್ತೇವೆ.

“ಆದರೆ ಬಂಗಾರಪೇಟೆಗೆ ಬರುವ ವೇಳೆಗೆ ಅವರು ನಮ್ಮನ್ನು ಹಿಡಿಯುತ್ತಾರೆ. ನಮ್ಮಿಬ್ಬರ ಮೇಲೆ ಹಲ್ಲೆಯಾಗುತ್ತದೆ. ಆ ಘಟನೆಯಲ್ಲಿ ಆಕೆ ಸಾವನ್ನಪ್ಪಿದರೆ ನಾನು ಬದುಕಿ ಉಳಿಯುತ್ತೇನೆ. ಒಬ್ಬ ಪೊಲೀಸ್ ಕಾನ್ಸ್ಟೇಬಲ್ ನನ್ನನ್ನು ಇಲ್ಲಿಂದ ತಪ್ಪಿಸಿಕೊ ಎಂದು ತಿಳಿಸುತ್ತಾರೆ. ಅದು ಹೇಗೋ ಬೆಂಗಳೂರಿಗೆ ಬಂದು ಪತ್ರಕರ್ತನಾಗುತ್ತೇನೆ.ದಿನಗಳು ಉರುಳಿದಾಗ ಒಂದು ದಿನ ಗೆಳೆಯರನ್ನು ರಿಸೀವ್ ಮಾಡಿಕೊಳ್ಳಲು ಮೆಜೆಸ್ಟಿಕ್ ಬಳಿ ತೆರಳುತ್ತೇನೆ. ಅಲ್ಲಿ ಒಂದು ಮೂವತ್ತು ಜನ ವೇಶ್ಯೆಯರು ನನ್ನ ಕಣ್ಣಿಗೆ ಬೀಳುತ್ತಾರೆ. ಅದೇ ದಿನ ಏನಾದರೊಂದು ಮಾಡಬೇಕು ಎಂದು ತೀರ್ಮಾನ ಮಾಡುತ್ತೇನೆ. ರವೀಂದ್ರ ಕಲಾಕ್ಷೇತ್ರದಲ್ಲಿ ವೇಶ್ಯೆಯರ ಮೂಲಕವೇ ಒಂದು ನಾಟಕ ಮಾಡಿಸುತ್ತೇನೆ.” ಎಂದು ತಮ್ಮ ಜೀವನದಲ್ಲಿ ನಡೆದ ಘಟನೆ ಬಗ್ಗೆ ಚಕ್ರವರ್ತಿ ಹೇಳಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top