fbpx
ಸಮಾಚಾರ

ಸ್ಯಾಂಡಲ್​ವುಡ್​ನಲ್ಲಿ ಕೊರೋನಾಗೆ ಮತ್ತೊಂದು ಬಲಿ: ‘ರನ್ನ’ ಚಿತ್ರದ ನಿರ್ಮಾಪಕ ವಿಧಿವಶ

ಕೊರೋನಾದಿಂದಾಗಿ ಸ್ಯಾಂಡಲ್​ವುಡ್​ನಲ್ಲೂ ಸಹ ಸಾಲು ಸಾಲು ಸಾವುಗಳು ಸಂಭವಿಸುತ್ತಿವೆ. ಮೊನ್ನೆಯಷ್ಟೇ ಮಾಲಾಶ್ರೀಯವರ ಪತಿ ನಿರ್ಮಾಪಕ ರಾಮು ಕೊರೋನಾಗೆ ಬಲಿಯಾಗಿದ್ದರು ಇದೀಗ ಕಿಚ್ಚ ಸುದೀಪ್​ ಅಭಿನಯದ ರನ್ನ ಸಿನಿಮಾದ ನಿರ್ಮಾಪಕ ಚಂದ್ರಶೇಖರ್​ ಕೊರೋನಾಗೆ ಬಲಿಯಾಗಿದ್ದಾರೆ.

ಕಳೆದ 23 ದಿನಗಳ ಹಿಂದೆ ಚಂದ್ರಶೇಖರ್‌ ಅರವರಿಗೆ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದಿತ್ತು. ತಕ್ಷಣವೇ ಮಣಿಪಾಲ್ ಸೆಂಟರ್‌ಗೆ ದಾಖಲಾಗಿದ್ದರು. ಕೊರೋನಾ ಸೋಂಕಿನಿಂದ ಗುಣಮುಖರಾದರೂ, ಶ್ವಾಸಕೋಶ ಸಮಸ್ಯೆ ಉಲ್ಬಣಗೊಂಡು ಕೊನೆಯುಸಿರೆಳೆದಿದ್ದಾರೆ.

ಇತ್ತೀಚಿಗೆ ನಿರ್ದೇಶಕ ಮಂಜು ಮಾಂಡವ್ಯ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರಕ್ಕೆ ಚಂದ್ರಶೇಖರ್ ಬಂಡವಾಳ ಹಾಕುವುದಾಗಿ ಮಾತುಕತೆ ನಡೆದಿತ್ತು. ಚಿತ್ರಕ್ಕೆ ನಾಯಕನಾಗಿ ಉಪೇಂದ್ರ ಅಯ್ಕೆ ಆಗಿದ್ದರು. ಆದರೆ ವಿಧಿ ಆಟವೇ ಬೇರೆ ಆಗಿತ್ತು.

ಅಂದಹಾಗೆ ಚಂದ್ರಶೇಖರ್ ಅವರು ನಿಮಿಷಾಂಬ ಪ್ರೊಡಕ್ಷನ್ ನ ಅಡಿಯಲ್ಲಿ ಅಣ್ಣಯ್ಯ, ಬಿಂದಾಸ್, ಏನೋ ಒಂಥರಾ, ರನ್ನ ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top