fbpx
ಸಮಾಚಾರ

ಅರೋಗ್ಯ ಸ್ಥಿತಿ ಬಗ್ಗೆ ಅಪ್‌ಡೇಟ್ ನೀಡಿದ ಕಿಚ್ಚ ಸುದೀಪ್: ಈ ವಾರವಾದರೂ ಬಿಗ್ ಬಾಸ್ ಗೆ ಬರುತ್ತಾರಾ? ಇಲ್ಲಿದೆ ಉತ್ತರ

‘ಬಿಗ್ ಬಾಸ್ ಕನ್ನಡ’ ಇತಿಹಾಸದಲ್ಲಿ ಯಾವತ್ತೂ ವಾರಾಂತ್ಯದ ಸಂಚಿಕೆಗಳ ಚಿತ್ರೀಕರಣವನ್ನು ಕಿಚ್ಚ ಸುದೀಪ್ ಮಿಸ್ ಮಾಡಿರಲಿಲ್ಲ. ಆದರೆ, ಈ ಬಾರಿ.. ಅಂದ್ರೆ ‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮದಲ್ಲಿ ಎರಡು ವಾರಗಳ ವೀಕೆಂಡ್ ಸಂಚಿಕೆಗಳ ಶೂಟಿಂಗ್‌ಗೆ ಕಿಚ್ಚ ಸುದೀಪ್ ಗೈರಾಗಿದ್ದರು. ಅನಾರೋಗ್ಯದ ಕಾರಣದಿಂದ ‘ಬಿಗ್ ಬಾಸ್’ ವೇದಿಕೆಗೆ ಕಿಚ್ಚ ಸುದೀಪ್ ಬರಲಿಲ್ಲ.

 

 

ಅನಾರೋಗ್ಯದಿಂದ ಬಳಲುತ್ತಿದ್ದ ಕಿಚ್ಚ ಸುದೀಪ್ ತಮ್ಮ ಆರೋಗ್ಯ ಚೇತರಿಸಿಕೊಂಡಿದೆ ಎಂದು ತಿಳಿಸಿದ್ದಾರೆ.ತಮಗಾಗಿ ಪ್ರಾರ್ಥಿಸಿ, ಹಾರೈಸಿದ ಎಲ್ಲರಿಗೂ ಧನ್ಯವಾದ ಹೇಳಿರುವ ಸುದೀಪ್, ಈಗ ತಮ್ಮ ಆರೋಗ್ಯ ಸುಧಾರಿಸಿದೆ. ಮುಂದಿನ ವಾರದ ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ.

ತಮ್ಮ ಆರೋಗ್ಯದ ಕಾಳಜಿ ವಹಿಸಿದ ಡಾ.ವೆಂಕಟೇಶ್, ಡಾ.ವಿನಯ್ ಅವರಿಗೂ ಸುದೀಪ್ ಧನ್ಯವಾದ ಹೇಳಿದ್ದು, ತಮ್ಮ ಆರೋಗ್ಯ ಸುಧಾರಣೆಗಾಗಿ ಪ್ರಾರ್ಥಿಸಿದ, ಹಾರೈಸಿದ ಹಲವಾರು ವಿಡಿಯೋ ತುಣುಕುಗಳು, ಸಂದೇಶಗಳನ್ನು ನಾನು ನೋಡಿದ್ದೇನೆ. ಎಲ್ಲರಿಗೂ ಧನ್ಯವಾದಗಳು, ಐ ಲವ್ ಯು ಆಲ್ ಎಂದಷ್ಟೇ ಹೇಳಬಲ್ಲೆ ಎಂದು ಸುದೀಪ್ ಟ್ವಿಟ್ ಮಾಡಿದ್ದಾರೆ.

‘ಬಿಗ್ ಬಾಸ್’ ವೇದಿಕೆಗೆ ಸುದೀಪ್ ಬರ್ತಾರೇ
ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿರುವ ಕಾರಣ ಈ ವಾರಾಂತ್ಯದ ‘ಬಿಗ್ ಬಾಸ್’ ಸಂಚಿಕೆಗಳ ಚಿತ್ರೀಕರಣಕ್ಕೆ ಹಾಜರಾಗಲು ಕಿಚ್ಚ ಸುದೀಪ್ ಮನಸ್ಸು ಮಾಡಿದ್ದಾರೆ. ಹಾಗಂತ ಖುದ್ದು ಕಿಚ್ಚ ಸುದೀಪ್ ಟ್ವೀಟ್ ಮಾಡಿ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top