fbpx
ಸಮಾಚಾರ

ಕೊರೋನಾ ರೋಗಿಗಳಿಗಾಗಿ ‘ಆಂಬ್ಯುಲೆನ್ಸ್’ ಡ್ರೈವರ್ ಆಗಿ ಸಹಾಯ ಮಾಡುತ್ತಿರುವ ‘ಯುವರತ್ನ’ ಚಿತ್ರದ ನಟ ಅರ್ಜುನ್ ಗೌಡ!

ಇಡೀ ದೇಶದಲ್ಲಿ ಆತಂಕ ಸೃಷ್ಟಿಸಿದೆ. ಹೆಚ್ಚುತ್ತಿರುವ ಸೋಂಕಿತರ ಹಾಗೂ ಸವಿನ ಸಂಖ್ಯೆಯಿಂದಾಗಿ ಜನ ಕಂಗಾಲಾಗಿದ್ದಾರೆ. ಸಾಕಷ್ಟು ಮಂದಿ ಸ್ವಯಂಪ್ರೇರಿತರಾಗಿ ಕೊರೋನಾ ವಾರಿಯರ್ಸ್​ ಆಗಿ ಸೇವೆ ಮಾಡುತ್ತಿದ್ದಾರೆ. ಅಂತೆಯೇ ಸ್ಯಾಂಡಲ್​ವುಡ್​ ನಟ ಅರ್ಜುನ್​ ಗೌಡ ಸಹ ಕೊರೋನಾ ಸೋಂಕಿತರಿಗೆ ನೆರವಾಗಲೆಂದು ಆಂಬ್ಯುಲೆನ್ಸ್​ ಡ್ರೈವರ್ ಆಗಿದ್ದಾರೆ.

ರುಸ್ತುಂ ಹಾಗೂ ಯುವರತ್ನ ಸಿನಿಮಾಗಳಲ್ಲಿ ನಟಿಸಿರುವ ಅರ್ಜುನ್​ ಗೌಡ ಸದ್ಯ ಆಂಬ್ಯುಲೆನ್ಸ್​ ಚಾಲಕರಾಗಿ ಸಂಕಷ್ಟದಲ್ಲಿರುವ ಕೊರೋನಾ ರೋಗಿಗಳನ್ನು ಆಸ್ಪತ್ರೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಸೋಂಕಿತರನ್ನು ಆಸ್ಪತ್ರೆಗೆ ತಲುಪಿಸುವುದರೊಂದಿಗೆ ಅರ್ಜುನ್​, ಮೃತರ ಅಂತ್ಯಕ್ರಿಯೆಗೂ ನೆರವಾಗುತ್ತಿದ್ದಾರೆ.

ರೋಗಿಗಳನ್ನು ಮನೆಯಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು, ಮೃತ ರೋಗಿಗಳ ದೇಹವನ್ನು ಸ್ಮಶಾನಕ್ಕೆ ತಲುಪಿಸುವ ಕೆಲಸದಲ್ಲಿ ಅರ್ಜುನ್​ ಗೌಡ ಮಗ್ನರಾಗಿದ್ದಾರೆ. ಅವರು ಮಾಡುತ್ತಿರುವ ಈ ಕೆಲಸದ ಬಗ್ಗೆ ಸ್ವತಃ ಅವರ ಕುಟುಂಬದವರಿಗೆ ಗೊತ್ತೇ ಇರಲಿಲ್ಲ. ಆದರೆ ಈಗ ಈ ವಿಚಾರ ಜಗಜ್ಜಾಹೀರಾಗುತ್ತಿರುವುದರಿಂದ ಮನೆಯವರಿಗೆ ವಿಷಯ ಮುಟ್ಟಿದೆ. ಮೊದಲಿಗೆ ತೀವ್ರವಾಗಿ ವಿರೋಧಿಸಿದ್ದ ಕುಟುಂಬದವರು ಈಗ ಮಗನ ಕೆಲಸಕ್ಕೆ ಬೆಂಬಲ ಸೂಚಿಸಿದ್ದಾರೆ. ಅರ್ಜುನ್​ ಗೌಡ ಮಾಡುತ್ತಿರುವ ಈ ಕೆಲಸಕ್ಕೆ ಸ್ಯಾಂಡಲ್​ವುಡ್​ನ ಅನೇಕರು ಭೇಷ್​ ಎನ್ನುತ್ತಿದ್ದಾರೆ.
“ನನ್ನ ಸಹೋದರಿ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ನಾನು ಅವರನ್ನು ತುಂಬ ಗಮನಿಸುತ್ತಿದ್ದೆ. ನಾನು ಕೂಡ ಏನಾದರೂ ಮಾಡಬಹುದಲ್ವಾ ಎಂದು, ಒಂದು ಟ್ರಸ್ಟ್‌ ಬಳಿ ಮಾತನಾಡಿದೆ. ಅವರ ಬಳಿ ಇದ್ದ ಆಂಬ್ಯುಲೆನ್ಸ್ ಪಡೆದುಕೊಂಡು, ಅದರ ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಕಡೆಯಿಂದ ಏನಾದರೂ ಮಾಡಬೇಕು ಎಂದು ಇದನ್ನು ಶುರು ಮಾಡಿದ್ದೇನೆ’ ಎಂದು ಅರ್ಜುನ್ ಮಾಹಿತಿ ನೀಡುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top