fbpx
ಸಮಾಚಾರ

ಮೇ 01: ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ

ಮೇ 1, 2021 ಶನಿವಾರ
ವರ್ಷ : 1943 ಪ್ಲಾವ
ತಿಂಗಳು : ಚೈತ್ರ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಪಂಚಮೀ 4:40 pm
ನಕ್ಷತ್ರ : ಮೂಲ 10:15 am
ಯೋಗ : ಸಿಧ್ಧ 1:48 am
ಕರಣ : ತೈತುಲ 4:40 pm ಗರಿಜ 3:40 am

Time to be Avoided
ರಾಹುಕಾಲ : 9:09 am – 10:43 am
ಯಮಗಂಡ : 1:50 pm – 3:23 pm
ದುರ್ಮುಹುರ್ತ : 6:02 am – 6:52 am, 6:52 am – 7:42 am
ವಿಷ : 8:47 am – 10:15 am, 7:21 pm – 8:51 pm
ಗುಳಿಕ : 6:02 am – 7:36 am

Good Time to be Used
ಅಮೃತಕಾಲ : 4:26 am – 5:57 am
ಅಭಿಜಿತ್ : 11:51 am – 12:41 pm

Other Data
ಸೂರ್ಯೋದಯ : 5:58 am
ಸುರ್ಯಾಸ್ತಮಯ : 6:34 pm
ರವಿರಾಶಿ : ಮೇಷ
ಚಂದ್ರರಾಶಿ : ಧನುಸ್

 

 

ಮೇಷ (Mesha)

 

ನಯವಾದ ಮಾತುಗಳಿಂದಲೇ ನಿಮ್ಮ ಗೆಳೆಯರು ನಿಮ್ಮನ್ನು ವಂಚಿಸುವ ಸಾಧ್ಯತೆ ಇರುತ್ತದೆ. ಆದರೆ ದೈವಕೃಪೆ ಇರುವುದರಿಂದ ಈ ಬಗ್ಗೆ ನಿಮಗೆ ಮೊದಲೇ ಸುಳಿವು ದೊರೆಯುವುದು. ಆಂಜನೇಯ ಸ್ತೋತ್ರವನ್ನು ಪಠಿಸಿ.

ವೃಷಭ (Vrushabh)


ನಿಮ್ಮ ಕೆಲಸಕಾರ್ಯದ ಬದಲಾವಣೆಯ ಬಗೆಗೆ ಅತಿಯಾದ ಆತ್ಮವಿಶ್ವಾಸ ಬೇಡ. ತಾಳ್ಮೆಯ ನಡೆಯು ನಿಮಗೆ ಯಶಸ್ಸನ್ನು ತಂದು ಕೊಡುತ್ತದೆ. ಹರ್ಷದಾಯಕ ವಾರ್ತೆಯನ್ನು ಕೇಳುವಿರಿ. ವಿದ್ಯಾಬುದ್ಧಿಯಲ್ಲಿ ಯಶಸ್ಸನ್ನು ಹೊಂದುವಿರಿ.

ಮಿಥುನ (Mithuna)


ಎದುರಾಳಿಯ ಬಲಾಬಲ ತಿಳಿದು ಹೋರಾಡಿದಲ್ಲಿ ನೀವು ಯಶಸ್ಸನ್ನು ಹೊಂದುವಿರಿ. ಈ ಬಗ್ಗೆ ಸ್ವಲ್ಪ ಉದಾಸೀನ ತೋರಿದರೂ ಸಹ ಶತ್ರುವಿನ ಪ್ರಾಬಲ್ಯ ಜಾಸ್ತಿ ಆಗುವುದು. ಕೌಟುಂಬಿಕ ಜೀವನದಲ್ಲಿನ ಸಮಸ್ಯೆ ನಿವಾರಣೆಗಾಗಿ ಈಶ್ವರ ದೇವರ ಧ್ಯಾನ ಮಾಡಿ.

ಕರ್ಕ (Karka)


ಚಂಚಲ ಸ್ವಭಾವವು ಕೆಲಸ ಕಾರ್ಯಗಳಲ್ಲಿ ಹಿನ್ನಡೆಯನ್ನುಂಟು ಮಾಡುವುದು. ಕೆಲ ಗ್ರಹಗಳು ನಿಮ್ಮಿಂದ ಅಪಶಬ್ದಗಳನ್ನು ನುಡಿಸಿ ಸಾರ್ವಜನಿಕವಾಗಿ ಅಪಮಾನಕ್ಕೆ ಒಳಗಾಗುವ ಸಂಭವವಿರುತ್ತದೆ. ಈಶ್ವರ ದೇವರನ್ನು ಪ್ರಾರ್ಥಿಸಿ.

ಸಿಂಹ (Simha)


ಕೌಟುಂಬಿಕ ಜೀವನದಲ್ಲಿ ಸುಖ, ಸಂತೋಷ, ನೆಮ್ಮದಿ ಕಂಡುಬರುವುದು. ಆದರೆ ನಿಮ್ಮವರೇ ಆದ ಹತ್ತಿರದ ಜನರು ನಿಮಗೆ ತಿಳಿಯದಂತೆ ಅಡ್ಡಗಾಲು ಹಾಕುವರು. ಅಂತಹವರ ಬಗ್ಗೆ ಜಾಗ್ರತೆಯಿಂದ ಇರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

ಕನ್ಯಾರಾಶಿ (Kanya)


ನಿಮ್ಮಲ್ಲಿ ಅನೇಕ ರೀತಿಯ ಯೋಜನೆಗಳಿವೆ. ಅದಕ್ಕೆ ತಕ್ಕ ಬುದ್ಧಿಶಕ್ತಿಯು ಇದೆ. ಆದರೆ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ವಿಫಲರಾಗುವಿರಿ. ಆಂಜನೇಯ ಸ್ತೋತ್ರವನ್ನು ಪಠಿಸಿ. ಹಣಕಾಸಿನ ತೊಂದರೆ ಸ್ವಲ್ಪಮಟ್ಟಿಗೆ ಕಾಡುವುದು.

ತುಲಾ (Tula)


ತೀರ ಅನಿರೀಕ್ಷಿತ ಬೆಳವಣಿಗೆಯೊಂದರಿಂದ ಅನೇಕ ರೀತಿಯ ಕ್ಲಿಷ್ಟ ಸಂಕಟಗಳಿಗೆ ವಿರಾಮ ಬೀಳುವ ಸಾಧ್ಯತೆ ಇದೆ. ಯಾವುದಕ್ಕೂ ನಿರಾಶರಾಗದಿರುವುದು ಸೂಕ್ತವಲ್ಲ. ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಿ. ಸೂಕ್ತ ಪರಿಹಾರ ದೊರೆಯುವುದು

ವೃಶ್ಚಿಕ (Vrushchika)


ಬಾಳಸಂಗಾತಿಯ ಆರೋಗ್ಯದ ಕುರಿತು ಮುಂಜಾಗ್ರತೆ ವಹಿಸಿ. ಮಗನ ಧಾರ್ಮಿಕ ಚಟುವಟಿಕೆಗಳಿಂದ ಮತ್ತು ಆತನ ಮೇಲೆ ಗುರುವಿನ ಆಶೀರ್ವಾದವಿರುವುದರಿಂದ ಆತನ ವಿವಾಹ ಭಾಗ್ಯಕ್ಕೆ ಸೂಕ್ತ ವೇದಿಕೆ ನಿರ್ಮಾಣವಾಗುವುದು.

ಧನು ರಾಶಿ (Dhanu)


ದೂರದ ಪ್ರಯಾಣವನ್ನು ಮಾಡಬೇಕಾಗುವುದು. ಇದರಿಂದ ನಿಮ್ಮ ವೃತ್ತಿ ಜೀವನಕ್ಕೂ ಸಹಕಾರಿಯಾಗುವುದು. ಗುರು, ಹಿರಿಯರ ಆಶೀರ್ವಾದವಿರುವುದರಿಂದ ವಿವಾಹಕ್ಕೆ ಯೋಗ್ಯ ವಧು, ವರರಿಗೆ ಸೂಕ್ತ ಸಂಗಾತಿಯು ದೊರೆಯುವರು.

ಮಕರ (Makara)


ತೆರೆಮರೆಯ ಕಾರ್ಯದಲ್ಲಿ ಸಂತೃಪ್ತಿಯನ್ನು ಕಾಣಬೇಕಾಗುವುದು. ರಾಹು ತಂದೆ, ಮಕ್ಕಳಲ್ಲಿ ಭಿನ್ನಾಭಿಪ್ರಾಯವನ್ನು ತಂದುಕೊಡುವ ಸಾಧ್ಯತೆ ಇರುವುದು. ದುರ್ಗಾಮಾತೆಯನ್ನು ಸ್ಮರಿಸಿ. ಸಾಧ್ಯವಾದಲ್ಲಿ ದುರ್ಗಾಮಂದಿರಕ್ಕೆ ಭೇಟಿ ನೀಡಿ.

ಕುಂಭರಾಶಿ (Kumbha)


ಎಲ್ಲರ ಅಭಿಪ್ರಾಯಗಳನ್ನು ಕಿವಿಗೊಟ್ಟು ಆಲಿಸಿ. ಆದರೆ ಅದನ್ನು ಕಾರ್ಯರೂಪಕ್ಕೆ ತರುವಾಗ ಚಿಂತಿಸಿ. ತೀರ್ಮಾನವು ನಿಮ್ಮ ಇಷ್ಟದಂತೆ ಇರಲಿ. ಇದರಿಂದ ನಿಮ್ಮ ಸಾಮಾಜಿಕ ಸ್ಥಾನಮಾನ ಹೆಚ್ಚಾಗುವುದು.

ಮೀನರಾಶಿ (Meena)


ನಿಮ್ಮ ನಿಜವಾದ ಪ್ರತಿಭೆಯು ಅನಾವರಣಗೊಳ್ಳುವುದು. ಇದರಿಂದ ನಿಮ್ಮ ಅಭಿಮಾನಿಗಳಿಗೆ ಹೆಚ್ಚು ಸಂತಸವಾಗುವುದು. ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top