fbpx
ಸಮಾಚಾರ

“ಪ್ರಿಯಾಂಕಳಿಂದಾಗಿ ನಂಗೆ ಕೆಲಸ ಸಿಗಲಿಲ್ಲ” ಪ್ರಿಯಾಂಕಾ ಚೋಪ್ರಾ ವಿರುದ್ಧ ಡಿಬಾಸ್ ನಾಯಕಿಯ ಆರೋಪ

೨೦೦೮ರಲ್ಲಿ ತೆರೆಗೆ ಬಂದ ಡಿಬಾಸ್ ದರ್ಶನ್ ಅವರ ಅರ್ಜುನ್ ಚಿತ್ರದಲ್ಲೂ ಚಾಲೆಂಜಿಂಗ್ ಸ್ಟಾರ್‌ಗೆ ನಾಯಕಿಯಾಗಿದ್ದ ಮೀರಾ ಚೋಪ್ರಾ ತನ್ನ ಕಸಿನ್ ಪ್ರಿಯಾಂಕಾ ಚೋಪ್ರಾ ವಿರುದ್ಧ ಕಿಡಿಕಾರಿದ್ದಾರೆ. ಪ್ರಿಯಾಂಕಾ ಜೊತೆಗಿನ ಸಂಬಂಧವು ಚಿತ್ರರಂಗದಲ್ಲಿ ತಮ್ಮ ಪ್ರಯಾಣಕ್ಕೆ ಸಹಾಯ ಮಾಡಿಲ್ಲ ಎಂದು ಹೇಳಿದ್ದಾರೆ.

ನಾನು ಬಾಲಿವುಡ್​ಗೆ ಕಾಲಿಟ್ಟಾಗ ಪ್ರಿಯಾಂಕಾ ಚೋಪ್ರಾ ಸಂಬಂಧಿ ಎಂದು ನನ್ನನ್ನು ಗುರುತಿಸುತ್ತಿದ್ದರು. ನನ್ನನ್ನು ಪ್ರಿಯಾಂಕಾಗೆ ಹೋಲಿಕೆ ಮಾಡುತ್ತಿದ್ದರು. ಆದರೆ, ನನಗೆ ಸಿನಿಮಾ ಆಫರ್​ ಸಿಗದಿರಲು ಅವರೇ ಕಾರಣ. ನನ್ನ ಸಿನಿಮಾಗೆ ಹಣ ಹಾಕಲು ಯಾರೂ ಮುಂದೆ ಬರುತ್ತಿರಲಿಲ್ಲ. ಪ್ರಿಯಾಂಕಾ ಎಂದಿಗೂ ನನ್ನ ಸಹಾಯಕ್ಕೆ ಬಂದಿಲ್ಲ ಎಂದು ಮೀರಾ ಹೇಳಿಕೊಂಡಿದ್ದಾರೆ.

“ನಾನು ಸಿನಿಮಾ ಹಿನ್ನೆಲೆಯ ಕುಟುಂಬದಿಂದ ಬಂದಿದ್ದೇನೆ ಎನ್ನುವುದು ಮಾತ್ರ ನನ್ನ ಪಾಲಿಗೆ ಇದ್ದಿದ್ದು. ಆದರೆ, ಅದರಿಂದ ಯಾವುದೇ ಪ್ರಯೋಜನ ಆಗಲಿಲ್ಲ. ಅದರಿಂದ ಉಂಟಾದ ತೊಂದರೆಯೇ ಹೆಚ್ಚು. ನಾನು ಚಿತ್ರರಂಗದಲ್ಲಿ ತುಂಬಾನೇ ಕಷ್ಟಪಟ್ಟಿದ್ದೇನೆ. ಚಿತ್ರರಂಗಕ್ಕೆ ಕನಸು ಹೊತ್ತು ಬರುವ ಪ್ರತಿಯೊಬ್ಬ ಹೊಸಬರಂತೆಯೇ ನಾನೂ ಆಡಿಷನ್‌ಗಳಿಗೆ ಹೋಗಿ, ಹೋರಾಟದ ಮೂಲಕವೇ ಅವಕಾಶ ಪಡೆದಿದ್ದು. ಈ ಬಗ್ಗೆ ನನಗೆ ಹೆಮ್ಮೆಯಿದೆ.” ಎಂದು ಮೀರಾ ಹೇಳಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top