fbpx
ಸಮಾಚಾರ

21 ದಿನಗಳ ನಂತರ ಕೊರೋನಾ ಸೋಂಕಿನಿಂದ ಪಾರಾದ ಶ್ವೇತಾ ಚೆಂಗಪ್ಪ: ಹೇಳಿದ್ದೇನು ಗೊತ್ತಾ?

ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಖ್ಯಾತ ಕಿರುತೆರೆ ನಟಿ ಶ್ವೇತಾ ಚೆಂಗಪ್ಪ ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. 21 ದಿನಗಳ ನರಳಾಟದ ನಂತರ ಶ್ವೇತಾ ಈಗ ಚೇತರಿಸಿಕೊಂಡಿದ್ದು, ಕೊರೋನಾ ಪರೀಕ್ಷೆಯಲ್ಲಿ ನಟಿಗೆ ನೆಗೆಟಿವ್​ ಬಂದಿದೆಯಂತೆ. ತಾವು ಕೋವಿಡ್‌ನಿಂದ ಚೇತರಿಸಿಕೊಂಡಿರುವ ಬಗ್ಗೆ ನಟಿ ಶ್ವೇತಾ ಚೆಂಗಪ್ಪ ಇನ್ಸ್ಟಾಗ್ರಾಮ್‌ನಲ್ಲಿ ಮಾಹಿತಿ ನೀಡಿದ್ದಾರೆ.

 

 

‘ಎಲ್ಲರಿಗೂ ಹಾಯ್. ನಮಸ್ತೆ. ನೀವೆಲ್ಲರೂ ತೋರಿಸುತ್ತಿರುವ ಪ್ರೀತಿಗೆ ಧನ್ಯವಾದಗಳು. 21 ದಿನಗಳ ಕಾಲ ಮನೆಯಲ್ಲಿಯೇ ಕ್ವಾರಂಟೈನ್ ಆಗಿ ಎಲ್ಲರಿಂದ ಐಸೋಲೇಟ್ ಆಗಿದ್ದೆ, ತುಂಬಾ ಕಷ್ಟದ ದಿನಗಳಿವು. ಮತ್ತೊಮ್ಮೆ ಟೆಸ್ಟ್ ಮಾಡಿಸಿ ವರದಿ ನೆಗಟಿವ್ ಬಂದಿದೆ. ನಿಮ್ಮ ಪ್ರಾರ್ಥನೆಗೆ ನಾನು ಚಿರಋಣಿ,’ ಎಂದು ಶ್ವೇತಾ ಬರೆದುಕೊಂಡಿದ್ದಾರೆ.

ಈ 21 ದಿನಗಳ ಕಾಲ ತಮ್ಮ ಪುತ್ರನಿಂದ ದೂರವಿರುವುದು ಎಷ್ಟು ಕಷ್ಟ ಎಂಬುದನ್ನು ಪುತ್ರನ ಜೊತೆಗಿರುವ ಹಳೆ ಪೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ವಿವರಿಸುತ್ತಿದ್ದರು. ‘ನಮ್ಮ ಪ್ರೀತಿ ಪಾತ್ರರಿಂದ ದೂರವಿರುವುದು ತುಂಬಾನೇ ಕಷ್ಟ. ಆದರೆ ಏನೂ ಮಾಡಲಾಗುವುದಿಲ್ಲ. ಈ ಕಷ್ಟದ ದಿನಗಳನ್ನು ಎದುರಿಸಲು ಶಕ್ತಿ ನೀಡು ಎಂದು ಮಾತ್ರ ಪ್ರಾರ್ಥಿಸ ಬಹುದು,’ ಎಂದು ಹೇಳಿದ್ದಾರೆ.

ಕೊರೊನಾ ವೈರಸ್ ಸೋಂಕಿಗೆ ಒಳಗಾದಾಗಿನಿಂದಲೂ ನಟಿ ಶ್ವೇತಾ ಚೆಂಗಪ್ಪ ಸೋಷಿಯಲ್ ಮೀಡಿಯಾ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಕೊರೊನಾ ರೋಗ ಲಕ್ಷಣಗಳನ್ನು ಹಗುರವಾಗಿ ಪರಿಗಣಿಸದಂತೆ ಜನರಲ್ಲಿ ಮನವಿ ಮಾಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top