fbpx
ಸಮಾಚಾರ

ಸ್ಯಾಂಡಲ್​ವುಡ್​ಗೆ ಮತ್ತೊಂದು ಕೊರೋನಾಘಾತ: ಯಶಸ್ವಿ ಚಿತ್ರಗಳ ಯುವ ನಿರ್ಮಾಪಕ ಸಾವು

ಸ್ಯಾಂಡಲ್‍ವುಡ್‍ನಲ್ಲಿ ಕೋವಿಡ್ ಸೋಂಕಿಗೆ ಬಲಿಯಾಗುವವರ ಸಂಖ್ಯೆ ಮುಂದುವರೆದಿದೆ. ಇತ್ತೀಚಿಗಷ್ಟೇ ನಿರ್ಮಾಪಕ ರಾಮು ಅವರು ಮಹಾಮಾರಿಗೆ ಕೊನೆಯುಸಿರೆಳೆದ್ದರು. ಇದೀಗ ಮತ್ತೊಬ್ಬ ನಿರ್ಮಾಪಕ ಸಾವನ್ನಪ್ಪಿದ್ದಾರೆ. ಕೋವಿಡ್ ಪಾಸಿಟಿವ್ ಸೋಂಕಿನಿಂದ ಬಳಲುತ್ತಿದ್ದ ರಾಜಶೇಖರ್ ಶುಕ್ರವಾರ ನಿಧನರಾಗಿದ್ದಾರೆ.

 

 

ಪಾಪ್ ಕಾರ್ನ್ ಮಂಕಿ‌ಟೈಗರ್, ಬ್ಯಾಡ್ ಮ್ಯಾನರ್ಸ್, ಪೆಟ್ರೋಮ್ಯಾಕ್ಸ್ಚಿ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಒಂದು ವಾರದಿಂದ ಕೊರೊನಾದಿಂದ ಬಳಲುತ್ತಿದ್ದ ನಿರ್ಮಾಪಕ ರಾಜಶೇಖರ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ರಾಜಶೇಖರ್ ನಿಧನಕ್ಕೆ ನಟ ನೀನಾಸಂ ಸತೀಶ್ ಸಂತಾಪ ಸೂಚಿಸಿದ್ದಾರೆ. ಪೆಟ್ರೋಮ್ಯಾಕ್ಸ್ ಆಗಲು ರಾಜಶೇಖರ್ ಪಾತ್ರ ತುಂಬಾ ದೊಡ್ಡದಿದೆ ಎಂದು ಹೇಳಿದ್ದಾರೆ. ರಾಜು, ಕನ್ನಡ ಚಿತ್ರರಂಗದಲ್ಲಿ ಬದುಕು ಕಟ್ಟುವ ಹಂತದಲ್ಲಿದ್ದ ಮಹಾತ್ವಾಕಾಂಕ್ಷಿ. ನಮ್ಮ ಪೆಟ್ರೋಮ್ಯಾಕ್ಸ್​ ಚಿತ್ರ ಆಗಲು ಮುಖ್ಯವಾದ ವ್ಯಕ್ತಿ ಜಗಳಪ್ರೀತಿ ಎಲ್ಲವೂ ಇತ್ತು. ನಮ್ಮ ಜೊತೆ ಕಾರ್ಯಕಾರಿ ನಿರ್ಮಾಪಕರಾಗಿ 2 ತಿಂಗಳು ಜೊತೆಗಿದ್ದರು. ಪೆಟ್ರೋಮ್ಯಾಕ್ಸ್​ ಗೆದ್ದು ಅದರ ಅದ್ಧೂರಿ ಸಮಾರಂಭ ಮಾಡುವ ಆಸೆ ಹೊತ್ತಿದ್ದರು. ಯಾವಾಗಲೂ ನಗುತ್ತಾ ಸೆಟ್​ನಲ್ಲಿ ಕೂರುತ್ತಿದ್ದ ನೆನಪುಗಳನ್ನು ನೆನೆಸಿಕೊಂಡರೆ ಎದೆಗೆ ಭರ್ಜಿ ಚುಚ್ಚಿದಂತಾಗುತ್ತದೆ. ಮೈಸೂರಿನಲ್ಲಿ ರಾತ್ರಿಯಲ್ಲ ಜೊತೆಗಿದ್ದು ಕಾರು ಕತ್ತಿಸಿ ನಾವು ಗೆಲ್ತೀವಿ ಸಾರ್​ ನೆಮ್ಮದಿಯಿಂದ ನಿದ್ದೆ ಮಾಡಿ ಎಂದು ಚಿರನಿದ್ರೆಗೆ ಜಾರಿದ ರಾಜು ಇದು ತಪ್ಪಲ್ಲವೇ ಎಂದು ಸತೀಶ್​ ನೀನಾಸಂ ನೊಂದು ಪೋಸ್ಟ್​ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top