fbpx
ಸಮಾಚಾರ

ಅಭಿಮಾನಿಗಳಿಗೆ ಶಾಕ್: ಈ ವಾರವೂ ವೀಕೆಂಡ್ ಎಪಿಸೋಡ್ ಗೆ ಬರೋದಿಲ್ಲ ಕಿಚ್ಚ ಸುದೀಪ್

ಅನಾರೋಗ್ಯದ ಕಾರಣ ವಿಶ್ರಾಂತಿಯಲ್ಲಿದ್ದ ಸುದೀಪ್‌ ಚೇತರಿಸಿಕೊಂಡಿದ್ದು, ಈ ವಾರದ ಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದರು. ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣದಿಂದಾಗಿ ವಾರಾಂತ್ಯದ ಸಂಚಿಕೆಗಳನ್ನು ಸುದೀಪ್‌ ಅವರ ಅನುಪಸ್ಥಿತಿಯಲ್ಲೇ ನಡೆಸಲು ಕಲರ್ಸ್‌ ಕನ್ನಡ ನಿರ್ಧರಿಸಿದೆ.

 

 

ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಕಲರ್ಸ್‌ ಕನ್ನಡ, ‘ಸಂಕಷ್ಟದ ಸನ್ನಿವೇಶದ ಹಿನ್ನೆಲೆಯಲ್ಲಿ ಶನಿವಾರ ಕಿಚ್ಚ ಸುದೀಪ್ ಅವರ ಜೊತೆಯಲ್ಲಿ ನಡೆಯಬೇಕಿದ್ದ ವಾರಾಂತ್ಯದ ಪಂಚಾಯ್ತಿ ಚಿತ್ರೀಕರಣ ನಡೆಯುತ್ತಿಲ್ಲ. ಹೀಗಾಗಿ ಈ ವಾರವೂ ಬಿಗ್ ಬಾಸ್ ವಾರಾಂತ್ಯದ ಸಂಚಿಕೆಗಳಲ್ಲಿ ಕಿಚ್ಚ ಸುದೀಪ್ ಅವರ ಉಪಸ್ಥಿತಿ ಇರುವುದಿಲ್ಲ’ ಎಂದು ತಿಳಿಸಿದೆ.

ಬಿಗ್‌ಬಾಸ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕಿಚ್ಚನಿಲ್ಲದೆ ಈ ವಾರವೂ ಸೇರಿ ಮೂರು ವಾರಾಂತ್ಯದ ಶೋ ನಡೆದಿದೆ. ಇದು ಬಿಗ್​ಬಾಸ್​ ಕಂಟೆಸ್ಟೆಂಟ್​ಗಳಿಗೆ ಮಾತ್ರವಲ್ಲದೇ ಅಭಿಮಾನಿಗಳಿಗೂ ಬೇಸರ ಮೂಡಿಸಿದೆ. ಮೊನ್ನೆಯಷ್ಟೆ ‘ನಾನು ನಿಮ್ಮೆಲ್ಲರ ಪ್ರೀತಿ ಹಾಗೂ ಹಾರೈಕೆಯಿಂದ ಚೇತರಿಸಿಕೊಂಡಿದ್ದೀನಿ. ಹಾಗಾಗಿ ಈ ವಾರಾಂತ್ಯದಲ್ಲಿ ಬಿಗ್​ಬಾಸ್​ ಶೋ ಹೋಸ್ಟ್ ಮಾಡಲು ಎದುರು ನೋಡುತ್ತಿದ್ದೇನೆ’ ಅಂತ ಖುದ್ದು ಸುದೀಪ್​ ಟ್ವೀಟ್​ ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top