fbpx
ಸಮಾಚಾರ

ಹುಟ್ಟಿದ 8 ದಿನಕ್ಕೆ ಕೊರೊನಾ- 15 ದಿನದ ನಂತರ ಕೋವಿಡ್ ಗೆದ್ದ ಹಸುಗೂಸು

ಜನಿಸಿದ 8 ದಿನಕ್ಕೆ ಸೋಂಕಿಗೆ ಒಳಗಾಗಿದ್ದ ನವಜಾತ ಶಿಶು 15 ದಿನಗಳ ಬಳಿಕ ಸೋಂಕು ವಿರುದ್ಧ ಗೆದ್ದು ಬಂದಿರುವ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದಿದೆ.

ಮಗುವಿಗೆ ಜನ್ಮ ನೀಡುವ ಮುನ್ನ ಮಗುವಿನ ತಾಯಿಗೆ ಕೊರೊನಾ ನೆಗೆಟಿವ್ ವರದಿ ಬಂದಿತ್ತು. ಆದರೆ ಮನೆಗೆ ಹಿಂದಿರುಗುವ ವೇಳೆಗೆ ಅವರಿಗೆ ಕೊರೊನಾ ಸೋಂಕು ದೃಢವಾಗಿತ್ತು. ಅಲ್ಲದೇ 8 ದಿನಗಳ ಮಗುವಿನ ವರದಿ ಕೂಡ ಪಾಸಿಟಿವ್ ಬಂದಿತ್ತು.

ಆದರೆ ಸದ್ಯ ಮಗುವಿಗೆ ಕೊರೊನಾ ವರದಿ ನೆಗೆಟಿವ್ ಬಂದಿದ್ದು, ಸತತ 15 ದಿನಗಳು ವೈದ್ಯರು ನಿಗಾದಲ್ಲಿದ್ದ ಮಗು ಡಿಸ್ಚಾರ್ಜ್ ಆಗಿದೆ ಎಂದು ಯಶೋಧ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top