fbpx
ಸಮಾಚಾರ

“ನನ್ನನ್ನು ರೂಮ್ ಗೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದರು” ಖ್ಯಾತ ಹಾಸ್ಯನಟನ ಮೇಲೆ ಹಿರಿಯ ನಟಿ ಆರೋಪ

ಟಾಲಿವುಡ್​ನ ಹಿರಿಯ ನಟಿ ಪದ್ಮಾ ಜಯಂತಿ ತೆಲುಗು ಚಿತ್ರರಂಗದ ಹಿರಿಯ ಹಾಸ್ಯ ಕಲಾವಿದನ ಬಗ್ಗೆ ಶಾಕಿಂಗ್​ ಆರೋಪ ಮಾಡಿದ್ದಾರೆ. ದಿವಂಗತ ಹಾಸ್ಯನಟ ಎಂ.ಎಸ್​. ನಾರಾಯಣ ಅವರು ಶೂಟಿಂಗ್​ ಸೆಟ್​ಗೆ ಕುಡಿದು ಬಂದು ಅಸಭ್ಯವಾಗಿ ವರ್ತಿಸಿದ್ದಾಗಿ ಪದ್ಮಾ ಅವರು ಆರೋಪಿಸಿದ್ದಾರೆ.

“ನಾವಿಬ್ಬರೂ ಒಟ್ಟಾಗಿ ಸಿನಿಮಾ ಮಾಡುತ್ತಿದ್ದೆವು. ಯಾರೋ ಒಬ್ಬರು ಬಂದು ನನ್ನ ಕೈ ಹಿಡಿದು ಎಳೆದರು, ತಿರುಗಿ ನೋಡಿದರೆ ಅದು ನಾರಾಯಣ್ ಆಗಿತ್ತು. ಅವರು ಕುಡಿದಿದ್ದರು, ರೂಮ್‌ನೊಳಗೆ ಕರೆದುಕೊಂಡು ಹೋಗಲು ಅವರು ನನ್ನ ಎಳೆದರು. ನಾನು ಅಳಲು ಶುರು ಮಾಡಿದೆ.” ಎಂದು ಪದ್ಮಾ ಜಯಂತಿ ಹೇಳಿದ್ದಾರೆ.

“ಅಷ್ಟಕ್ಕೆ ಸುಮ್ಮನಾಗದ ಅವರು ನನ್ನನ್ನು ಎಳೆದು ತಬ್ಬಿಕೊಂಡರು. ಏನಿದು ಸರ್​ ಎಂದು ಪ್ರಶ್ನಿಸಿದೆ. ಈಗ ಮಾತನಾಡುವ ಸಮಯವಲ್ಲ. ನನ್ನೊಂದಿಗೆ ಬಾ ಎಂದು ಕರೆದೊಯ್ದರು. ಅವರ ಬಾಯಿಯಿಂದ ಮಧ್ಯದ ವಾಸನೆ ಬರುತ್ತಿತ್ತು. ಪಾನಮತ್ತ ಸ್ಥಿತಿಯಲ್ಲಿ ನನ್ನನ್ನು ಹಿಡಿದುಕೊಂಡು ರೂಮ್​ ಒಳಗೆ ಎಳೆದುಕೊಂಡು ಹೋಗಿ ಲಾಕ್​ ಮಾಡಿಕೊಂಡರು.” ಎಂದು ಹೇಳಿದ್ದಾರೆ

” ನನ್ನ ಬಲವಂತಾಗಿ ತಬ್ಬಿಕೊಂಡರು. ಈ ವೇಳೆ ಇಬ್ಬರ ನಡುವೆ ತುಂಬಾ ಗಲಾಟೆ ನಡೆಯಿತು. ನಾನು ನಿರಾಕರಿಸಿದೆ. ಅಳಲು ಆರಂಭಿಸಿದೆ. ಆದರೆ, ತಕ್ಷಣ ನನ್ನನ್ನು ಎತ್ತಿಕೊಂಡು ಕೆಳಗೆ ಬೀಳಿಸಿ ಅತ್ಯಾಚಾರ ಮಾಡಲ ಯತ್ನಿಸಿದರು. ನಾನು ಜೋರಾಗಿ ಕಿರುಚಿಕೊಂಡೆ. ಈ ವೇಳೆ ಎಲ್ಲರೂ ಓಡಿ ಬಂದರು. ನಾರಾಯಣರನ್ನು ಹೊರಗಡೆ ಎಳೆದೊಯ್ದು ನನ್ನನ್ನು ಸಮಾಧಾನಪಡಿಸಿದರು.” ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top