fbpx
ಸಮಾಚಾರ

ಈ ಒಳ್ಳೆ ಉದ್ದೇಶಕ್ಕಾಗಿ ನೀಲಿ ಜರ್ಸಿ ತೊಟ್ಟು ಕಣಕ್ಕಿಳಿಯಲಿದೆ ಆರ್.ಸಿ.ಬಿ

ಈ ಬಾರಿಯ ಕೂಟದಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮುಂದಿನ ಒಂದು ಪಂದ್ಯದಲ್ಲಿ ನೀಲಿ ಅಂಗಿ ಧರಿಸಿ ಆಡಲಿದೆ. ಈ ಬಗ್ಗೆ ಸ್ವತಃ ನಾಯಕ ವಿರಾಟ್ ಕೊಹ್ಲಿ ಹೇಳಿಕೆ ನೀಡಿದ್ದಾರೆ.

 

 

ದೇಶದಾದ್ಯಂತ ಕೊರೊನಾವೈರಸ್ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ತೀರ್ಮಾನವನ್ನು ತೆಗೆದುಕೊಂಡಿದೆ. ಕೊರೊನಾವೈರಸ್ ವಿರುದ್ಧ ಹಗಲು ಇರುಳೆನ್ನದೆ ಹೋರಾಡಿ ಕೊರೊನಾ ವಾರಿಯರ್ಸ್ ಪಟ್ಟ ಶ್ರಮಕ್ಕೆ ಗೌರವ ಸೂಚಿಸುವ ಉದ್ದೇಶದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನೀಲಿ ಜೆರ್ಸಿಯನ್ನು ತೊಟ್ಟು ಪಂದ್ಯವನ್ನಾಡಲಿದೆ. ಹಾಗೂ ಈ ಪಂದ್ಯದಲ್ಲಿ ಬಳಸುವ ಮ್ಯಾಚ್ ಕಿಟ್ ಮೇಲೆ ಕೊರೊನಾ ವಾರಿಯರ್ಸ್ ಕುರಿತು ವಿಶೇಷ ಸಂದೇಶವನ್ನು ಬರೆಯಲಾಗಿರುತ್ತದೆ.

ಅಷ್ಟೇ ಅಲ್ಲದೆ ಆರ್‌ಸಿಬಿ ಬ್ಲೂ ಜೆರ್ಸಿಯನ್ನು ಆಟಗಾರರ ಆಟೋಗ್ರಾಫ್‌ನೊಂದಿಗೆ ಹರಾಜಿಗಿಡಲಿದ್ದು, ಆ ಹರಾಜಿನಲ್ಲಿ ಸಂಗ್ರಹವಾದ ಆರೋಗ್ಯ ಕ್ಷೇತ್ರದ ಅಭಿವೃದ್ದಿಗೆ ನೀಡಲು ಬೆಂಗಳೂರು ಮೂಲದ ಫ್ರಾಂಚೈಸಿ ನಿರ್ಧರಿಸಿದೆ. ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ, ದೇಶದ ಜನರಿಗೆ ಎಷ್ಟು ಸಾಧ್ಯವೋ ಅಷ್ಟು ಬೇಗ ಕೋವಿಡ್ ಲಸಿಕೆ ಪಡೆಯಿರಿ ಎಂದು ಆಗ್ರಹಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top