fbpx
ಸಮಾಚಾರ

ಭಾರತ ತೊರೆದು ಲಂಡನ್ ಸೇರಿದ ಕೋವಿಶೀಲ್ಡ್ ಲಸಿಕೆ ತಯಾರಿಕಾ ಸಂಸ್ಥೆ ಸೆರಮ್ ಮುಖ್ಯಸ್ಥ: ಕಾರಣವೇನು ಗೊತ್ತಾ?

ಕೋವಿಶೀಲ್ಡ್ ಲಸಿಕೆ ತಯಾರಿಕಾ ಸೀರಂ ಸಂಸ್ಥೆಯ ಸಿಇಓ ಆದಾರ್ ಪೂನಾವಾಲಾ ಭಾರತ ತೊರೆದು ಲಂಡನ್ ಸೇರಿದ್ದಾರೆ. ಇದು ದೀರ್ಘ ಸಮಯದ ಪ್ರವಾಸ ಆಗಿದ್ದು, ಇಂತಹ ಸ್ಥಿತಿಯಲ್ಲಿ ಭಾರತದಲ್ಲಿ ಇರಲಾರೆ ಎಂದು ಪೂನಾವಾಲಾ ಹೇಳಿಕೊಂಡಿದ್ದಾರೆ.

ನಾನು ಲಂಡನ್ ನಲ್ಲಿ ಹೆಚ್ಚು ದಿನಗಳನ್ನ ಕಳೆಯಲಿದ್ದೇನೆ. ಇಂತಹ ಪರಿಸ್ಥಿತಿಯಲ್ಲಿ ನಾನು ಭಾರತದಲ್ಲಿ ಇರಲು ಸಾಧ್ಯವಿಲ್ಲ. ಎಲ್ಲ ಜವಾಬ್ದಾರಿಗಳನ್ನು ನನ್ನ ಹೆಗಲ ಮೇಲೆ ಹಾಕಲಾಗುತ್ತಿದೆ. ಇದೆಲ್ಲವನ್ನು ನನ್ನ ಒಬ್ಬನಿಂದ ನಿಭಾಯಿಸಲು ಆಗಲಾರದು. ನನ್ನ ಕೆಲಸಗಳನ್ನು ಮಾಡಿಕೊಂಡು ಬಂದಿದ್ದೇನೆ ಎಂದು ಹೇಳಿದ್ದಾರೆ.

ವೈ ಕೆಟಗೆರಿಯ ಭದ್ರತೆ ಒದಗಿಸಲಾಗಿತ್ತು
ಇತ್ತೀಚಿಗಷ್ಟೇ ಸೆರಮ್ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅದಾರ್ ಪೂನಾವಾಲಾ ಭಾರತದಾದ್ಯಂತ ವೈ ಕೆಟೆಗಿರಿ ಭದ್ರತೆ ಪಡೆಯಲಿದ್ದಾರೆಂದು ಕೇಂದ್ರ ಗೃಹ ಇಲಾಖೆ ಹೇಳಿತ್ತು. ಸದರಿ ಭದ್ರತಾ ಕೆಟೆಗಿರಿಯು ಒಂದಿಬ್ಬರು ಕಮಾಂಡೊಗಳು ಸೇರಿದಂತೆ ಪೊಲೀಸರನ್ನು ಒಳಗೊಂಡಿದ್ದು, ಮೇ ಒಂದರಿಂದ ಲಸಿಕಾ ಅಭಿಯಾನದ ಮೂರನೆಯ ಹಂತ ಶುರುವಾಗುವ ಮೊದಲು ಪೂನಾವಾಲಾಗೆ ಭದ್ರತೆ ಒದಗಿಸುವ ನಿರ್ಣಯ ತೆಗೆದುಕೊಳ್ಳಲಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top