fbpx
ಸಮಾಚಾರ

ಮೇ 04: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ

ಮೇ 4, 2021 ಮಂಗಳವಾರ
ವರ್ಷ : 1943 ಪ್ಲಾವ
ತಿಂಗಳು : ಚೈತ್ರ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಅಷ್ಟಮೀ 1:09 pm
ನಕ್ಷತ್ರ : ಶ್ರವಣ 8:26 am
ಯೋಗ : ಶುಕ್ಲ 8:21 pm
ಕರಣ : ಕುಲವ 1:09 pm ತೈತುಲ 1:10 am

Time to be Avoided
ರಾಹುಕಾಲ : 3:24 pm – 4:57 pm
ಯಮಗಂಡ : 9:08 am – 10:42 am
ದುರ್ಮುಹುರ್ತ : 8:31 am – 9:21 am, 11:07 pm – 11:53 pm
ವಿಷ : 12:33 pm – 2:12 pm
ಗುಳಿಕ : 12:16 pm – 1:50 pm

Good Time to be Used
ಅಮೃತಕಾಲ : 10:27 pm – 12:06 am
ಅಭಿಜಿತ್ : 11:51 am – 12:41 pm

Other Data
ಸೂರ್ಯೋದಯ : 5:57 am
ಸುರ್ಯಾಸ್ತಮಯ : 6:35 pm
ರವಿರಾಶಿ : ಮೇಷ
ಚಂದ್ರರಾಶಿ : ಮಕರ upto 20:43

 

 

ಮೇಷ (Mesha)

 

ಒಳ್ಳೆಯ ದಿನಗಳು ನಿಮ್ಮ ಪಾಲಿಗೆ ಶುರುವಾಗಿವೆ. ಯಾವ ಕೆಲಸವನ್ನಾದರೂ ನಿಭಾಯಿಸುವ ಮಾನಸಿಕ ಶಕ್ತಿ ಗಳಿಸಿಕೊಂಡಿದ್ದೀರಿ. ಅವಕಾಶಗಳ ಹೆಬ್ಬಾಗಿಲು ತೆರೆದುಕೊಂಡಿರುವುದನ್ನು ಗಮನಿಸಿ ಅಚ್ಚರಿ ಪಡುವಿರಿ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ.

ವೃಷಭ (Vrushabh)


ಹೊಸ ಜವಾಬ್ದಾರಿ ನಿಮ್ಮ ಬೆಳವಣಿಗೆಗೆ ಅಡ್ಡಿಯಾಗಿದೆ ಎನ್ನುವ ಭಾವನೆ ಮೂಡಿ ಕೊಂಚ ಅಸಹನೆ ಕಾಡುವುದು. ಮೊದಲು ಸಂಸ್ಥೆಯ ಮಾನ ರಕ್ಷ ಣೆ ಆಗಬೇಕು. ಈ ನಿಟ್ಟಿನಲ್ಲಿ ನೀವೊಂದು ತ್ಯಾಗಕ್ಕೂ ಸಿದ್ಧವಾಗಬೇಕಿದೆ. ಎಲ್ಲವನ್ನೂ ನಿಭಾಯಿಸಬಲ್ಲೆ ಎನ್ನುವ ಮನಃಸ್ಥಿತಿಯಲ್ಲಿರುವಿರಿ.

ಮಿಥುನ (Mithuna)


ಅಧ್ಯಾತ್ಮದಲ್ಲಿ ಆಸಕ್ತಿ ಮೂಡುವುದು. ಬದುಕಿನ ಅನೇಕ ಪ್ರಶ್ನೆಗಳಿಗೆ ಅಧ್ಯಾತ್ಮದಲ್ಲಿ ಉತ್ತರ ದೊರೆಯುವುದು. ಮಡದಿ ಮಕ್ಕಳೊಡನೆ ಸಂತಸದ ಕ್ಷ ಣಗಳನ್ನು ಕಳೆಯುವಿರಿ. ಮನೋಕಾಮನೆಗಳು ಪೂರ್ಣವಾಗುವುದು. ಆರೋಗ್ಯದಲ್ಲಿ ಉತ್ತಮ ಪ್ರಗತಿ ಕಂಡುಬರುವುದು.

ಕರ್ಕ (Karka)


ಕಠಿಣ ಪರಿಸ್ಥಿತಿಗಳನ್ನು ನಿಭಾಯಿಸಲು ಈದಿನ ಕಟಿಬದ್ಧರಾಗಿರುವಿರಿ. ಇದಕ್ಕೆ ಪೂರಕವಾಗಿ ಭಗವಂತನ ಆಶೀರ್ವಾದವು ನಿಮ್ಮ ಮೇಲಿರುವುದರಿಂದ ಒಳಿತಾಗುವುದು. ಆರೋಗ್ಯ ಸ್ಥಿತಿ ಉತ್ತಮವಾಗಿರುವುದು.

ಸಿಂಹ (Simha)


ನಿಮ್ಮ ಆತ್ಮವಿಶ್ವಾಸ ದಿಢೀರ್‌ ಹೆಚ್ಚಾಗುವುದು. ಬಹುದಿನಗಳಿಂದ ಇತ್ಯರ್ಥವಾಗದೇ ಉಳಿದಿದ್ದ ಸಂಗತಿಗಳು ಬಗೆಹರಿಯುವುದು. ಮನೆಯಲ್ಲಿ ಮತ್ತು ಕಚೇರಿಯಲ್ಲೂ ಉತ್ತಮ ಸಮಯವನ್ನು ಕಳೆಯುವಿರಿ. ಸಮಯಕ್ಕೆ ತಕ್ಕ ಸಲಹೆಗಳು ದೊರೆಯುವವು.

ಕನ್ಯಾರಾಶಿ (Kanya)


ಭಾವನಾತ್ಮಕ ವಿಚಾರಗಳು ನಿಮ್ಮನ್ನು ಚಿಂತನೆಗೆ ಹಚ್ಚುವವು. ಸಣ್ಣಪುಟ್ಟ ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸ್ನೇಹಿತರ ಮೊರೆ ಹೋಗುವಿರಿ. ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು.

ತುಲಾ (Tula)


ನಿಮ್ಮ ಏಕಾಗ್ರತೆ ಹಾಳು ಮಾಡಲೆಂದೇ ಸಹೋದ್ಯೋಗಿಗಳು ಪದೇ ಪದೆ ವಾದಕ್ಕೆ ಎಳೆದಾಡುವರು. ಅದಕ್ಕೆಲ್ಲ ಚಿಂತಿಸದೆ ಕೆಲಸದಲ್ಲಿ ತೊಡಗಿಕೊಂಡರೆ ಒಳಿತಾಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.

ವೃಶ್ಚಿಕ (Vrushchika)


ಹತ್ತಾರು ಹೊಣೆಗಾರಿಕೆಗಳು ನಿಮ್ಮನ್ನು ಹುಡುಕಿಕೊಂಡು ಬರುವವು. ಒಂದು ಹಂತದಲ್ಲಿ ಯಾವುದನ್ನು ಸ್ವೀಕರಿಸಬೇಕೆಂದು ಗೊಂದಲ ಉಂಟಾಗುವುದು. ತಂಡದ ಎಲ್ಲರ ವಿಶ್ವಾಸ ಪಡೆದು ಕಾರ್ಯಭಾರ ಒಪ್ಪಿಕೊಳ್ಳಿ. ಯಶಸ್ಸು ನಿಮ್ಮದಾಗುವುದು.

ಧನು ರಾಶಿ (Dhanu)


ಈ ಹಿಂದೆ ಕೆಲವು ವಿಚಾರಗಳಲ್ಲಿ ತಪ್ಪಾಗಿರುವುದು. ಆದರೆ ಅದನ್ನೇ ಯೋಚಿಸುತ್ತ ಕುಳಿತರೆ ಮುಂದಿನ ಕೆಲಸಗಳನ್ನು ಮಾಡಲು ಉತ್ಸಾಹವಿರುವುದಿಲ್ಲ. ಕುಲದೇವತಾ ಪ್ರಾರ್ಥನೆ ಮಾಡಿ.

ಮಕರ (Makara)


ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಹಿಂದೇಟು ಹಾಕಬೇಡಿ. ಇತರರ ಸಲಹೆ ನಿಮಗೆ ಬೇರೆ ರೀತಿಯಲ್ಲಿ ನೆರವಿಗೆ ಬರುವುದು. ಜೊತೆಯಲ್ಲಿ ಇರುವವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಒಳ್ಳೆಯದು.

ಕುಂಭರಾಶಿ (Kumbha)


ನಿಮ್ಮಲ್ಲಿ ಅದ್ಭುತವಾದ ಶಕ್ತಿ ಇದೆ. ಅದನ್ನು ವೃತ್ತಿಯಲ್ಲಿ ಸರಿಯಾಗಿ ಬಳಸಿಕೊಳ್ಳಿ. ಇಂದು ನಿಮಗೆ ಒಳ್ಳೆಯ ಅವಕಾಶವಿದ್ದು, ಇದನ್ನು ಸದುಪಯೋಗಪಡಿಸಿಕೊಂಡರೆ ಜನರಿಂದ ಮನ್ನಣೆಗೆ ಪಾತ್ರರಾಗುವಿರಿ.

ಮೀನರಾಶಿ (Meena)


ಸಹೋದ್ಯೋಗಿಗಳ ಜೊತೆ ಆದಷ್ಟು ಸ್ನೇಹದಿಂದ ವರ್ತಿಸಿ. ಕೆಲವರು ನಿಮ್ಮ ವಿರುದ್ಧ ಪಿತೂರಿ ನಡೆಸುವರು. ಹೊರಗಿನ ಕಳ್ಳರನ್ನು ಹಿಡಿದಷ್ಟು ಸುಲಭವಾಗಿ ಮನೆಯ ಕಳ್ಳರನ್ನು ಹಿಡಿಯುವುದು ಕಷ್ಟವಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top