fbpx
ಸಮಾಚಾರ

ಬಿಗ್ ಬ್ರೇಕಿಂಗ್: ಮತ್ತೆ ಆಟಗಾರರಿಗೆ ಕೋವಿಡ್ ಸೋಂಕು: ಇಂದಿನ ಐಪಿಎಲ್ ಪಂದ್ಯ ಕೂಡ ರದ್ದು?

14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಮತ್ತೊಮ್ಮೆ ಕೊರೋನಾ ಮಹಾ ಕಂಟಕ ಎದುರಾಗಿದ್ದು ಇಂದು (ಮೇ 4 ನಡೆಯಬೇಕಿದ್ದ ಮುಂಬೈ ಇಂಡಿಯನ್ಸ್ (MI) ಮತ್ತು ಸನ್ ರೈಸರ್ಸ್ ಹೈದರಾಬಾದ್ (SRH) ನಡುವಿನ ಇಂದಿನ ಐಪಿಎಲ್ ಪಂದ್ಯವನ್ನು ರದ್ದುಗೊಳಿಸುವ ಸಾಧ್ಯತೆಯಿದೆ.

ಸನ್ ರೈಸರ್ಸ್ ಹೈದರಾಬಾದ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸಮನ್ ವೃದ್ಧಿಮಾನ್ ಸಹಾ ಅವರು ಕೋವಿಡ್ ಸೋಂಕಿಗೆ ಪಾಸಿಟಿವ್ ದೃಢವಾಗಿದ್ದಾರೆ. ದ್ಧಿಮಾನ್​ಗೆ ಸೋಂಕು ಇರುವುದು ಖಾತರಿಯಾಗುತ್ತಿದ್ದಂತೆಯೇ ತಂಡದ ಎಲ್ಲಾ ಆಟಗಾರರನ್ನು ಐಸೋಲೇಷನ್​ನಲ್ಲಿ ಇರಿಸಲಾಗಿದೆ. ಈ ಹಿನ್ನಲೆಯಲ್ಲಿ ಇಂದು ನಡೆಯಬೇಕಿದ್ದ ಮುಂಬೈ ಇಂಡಿಯನ್ಸ್ (MI) ಮತ್ತು ಸನ್ ರೈಸರ್ಸ್ ಹೈದರಾಬಾದ್ (SRH) ನಡುವಿನ ಇಂದಿನ ಐಪಿಎಲ್ ಪಂದ್ಯವನ್ನು ರದ್ದುಗೊಳಿಸುವ ಸಾಧ್ಯತೆಯಿದೆ.

ಹೀಗಿದ್ದರೂ ಪಂದ್ಯವನ್ನು ರದ್ದುಗೊಳಸದೆ ಮುಂದೂಡಿ ಬೇರೆ ದಿನದಂದು ನಡೆಸಲು ಯೋಚಿಸಲಾಗುತ್ತಿದೆ ಎಂದು ಕೂಡ ಹೇಳಲಾಗಿದ್ದು ಪಂದ್ಯದ ಹೊಸ ದಿನಾಂಕವನ್ನು ಶೀಘ್ರದಲ್ಲೇ ಮಧ್ಯಾಹ್ನ ಪ್ರಕಟಿಸಲಾಗುತ್ತದೆ ಎಂದು ವರದಿಯಾಗಿದೆ.

ಅಂದಹಾಗೆ ನೆನ್ನೆ ಆರ್.ಸಿ.ಬಿ ಮತ್ತು ಕೆ.ಕೆ.ಆರ್ ಪಂದ್ಯವನ್ನು ಕೂಡ ಕೋವಿಡ್ ಕಾರಣದಿಂದಾಗಿ ಮುಂದೂಡಲಾಗಿತ್ತು. ಕೆಕೆಆರ್ ತಂಡದ ಸಂದೀಪ್ ವಾರಿಯರ್ ಮತ್ತು ವರುಣ್ ಚಕ್ರವರ್ತಿ ಅವರಿಗೆ ಕೊರೋನಾ ಪಾಸಿಟಿವ್ ದೃಢವಾಗಿತ್ತು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top