fbpx
ಸಮಾಚಾರ

ಮೇ 05: ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ

ಮೇ 5, 2021 ಬುಧವಾರ
ವರ್ಷ : 1943 ಪ್ಲಾವ
ತಿಂಗಳು : ಚೈತ್ರ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ನವಮೀ 1:21 pm
ನಕ್ಷತ್ರ : ಧನಿಷ್ಠ 9:10 am
ಯೋಗ : ಬ್ರಹ್ಮ 7:37 pm
ಕರಣ : ಗರಿಜ 1:21 pm ವಾಣಿಜ 1:41 am

Time to be Avoided
ರಾಹುಕಾಲ : 12:16 pm – 1:50 pm
ಯಮಗಂಡ : 7:34 am – 9:08 am
ದುರ್ಮುಹುರ್ತ : 11:51 am – 12:41 pm
ವಿಷ : 4:47 pm – 6:28 pm
ಗುಳಿಕ : 10:42 am – 12:16 pm

Good Time to be Used
ಅಮೃತಕಾಲ : 2:55 am – 4:37 am

Other Data
ಸೂರ್ಯೋದಯ : 5:57 am
ಸುರ್ಯಾಸ್ತಮಯ : 6:35 pm
ರವಿರಾಶಿ : ಮೇಷ
ಚಂದ್ರರಾಶಿ : ಕುಂಭ

 

 

ಮೇಷ (Mesha)

 

ಕೆಲವು ಸಮಸ್ಯೆಗಳು ಎದುರಾಗಲಿವೆಯಾದರೂ ಎದುರಿಸುವ ಶಕ್ತಿಯನ್ನು ತೋರುವಿರಿ. ಜನರೊಡನೆ ಬೆರೆಯುವಾಗ ತಾಳ್ಮೆಯನ್ನು ರೂಢಿಸಿಕೊಳ್ಳಿ. ಅನವಶ್ಯಕ ಪ್ರಶ್ನೆಗಳನ್ನು ಕೇಳಿ ನಿಮಗೆ ಕೋಪ ಬರುವ ಸಾಧ್ಯತೆ ಇರುತ್ತದೆ.

ವೃಷಭ (Vrushabh)


ಕೆಲವು ಪ್ರಮುಖ ಜವಾಬ್ದಾರಿಗಳಿಂದ ನುಣುಚಿಕೊಳ್ಳಲು ಆಗುವುದಿಲ್ಲ. ಅಂತೆಯೇ ಬಹು ಮುಖ್ಯವಾದ ಕಡತವೊಂದನ್ನು ಹುಡುಕಿಕೊಡಲೇ ಬೇಕೆಂದು ನಿಮ್ಮ ಮೇಲಧಿಕಾರಿಗಳು ಆದೇಶ ಹೊರಡಿಸುವರು. ದೇವರನ್ನು ಸ್ಮರಿಸಿ ಕಾರ್ಯ ಪ್ರವೃತ್ತರಾಗಿ.

ಮಿಥುನ (Mithuna)


ಹಿಂದಿನ ದಿನಗಳ ಅನುಭವಗಳ ನೆಲೆಯಲ್ಲಿ ಜಾಗ್ರತೆಯ ಹೆಜ್ಜೆ ಇರಿಸಿ. ಕಿರಿಕಿರಿ ಮಾಡುವವರನ್ನು ನಿಯಂತ್ರಣಕ್ಕೆ ಒಳಪಡಿಸುವುದು ಒಳ್ಳೆಯದು. ದುಂದುವೆಚ್ಚಗಳಿಗೆ ಕಡಿವಾಣ ಹಾಕದೆ ಇದ್ದಲ್ಲಿ ಆರ್ಥಿಕ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಳ್ಳುವಿರಿ.

ಕರ್ಕ (Karka)


ದೂರದ ಊರಿನಿಂದ ಅಥವಾ ವಿದೇಶದಿಂದ ಬಂದಂತಹ ಸ್ನೇಹಿತರು, ಬಂಧುಗಳು ನಿಮ್ಮ ಜತೆಯಲ್ಲಿ ವ್ಯಾಜ್ಯ ಮಾಡುವ ಸಾಧ್ಯತೆ ಇರುವುದು. ಆದರೆ ಗುರುವಿನ ಅನುಗ್ರಹ ಇರುವುದರಿಂದ ನಿಮ್ಮ ನಡೆ, ನುಡಿಯು ಸತ್ಯವಾಗಿದೆ ಎಂದು ಅರಿತುಕೊಳ್ಳುವರು.

ಸಿಂಹ (Simha)


ಮಕ್ಕಳ ಬಗೆಗೆ ಎಷ್ಟೇ ಚಿಂತಿಸಿದರೂ ಪರಿಹಾರ ಮಾರ್ಗ ಸಿಗುತ್ತಿಲ್ಲ ಎಂಬ ಚಿಂತೆ ನಿಮ್ಮನ್ನು ಕಾಡುವುದು. ಆದರೆ ಉನ್ನತ ಸ್ಥಾನದಲ್ಲಿರುವ ನೀವು ಕೆಳನಿಂತು ಸಾಮಾನ್ಯ ಜನರಂತೆ ಚಿಂತಿಸಿ ಆಗ ನಿಮ್ಮ ಕಾರ್ಯಗಳು ಸುಲಲಿತವಾಗುವವು.

ಕನ್ಯಾರಾಶಿ (Kanya)


ನಿಮ್ಮ ಕುರಿತಾಗಿ ಇಲ್ಲಸಲ್ಲದ ಹಲವಾರು ಅಪಸ್ವರಗಳು ಬಂದರೂ ಆ ಬಗ್ಗೆ ಕಿವಿಗೊಡದೆ ಮಾನಸಿಕವಾಗಿ ಧೈರ್ಯದಿಂದ ಇರಿ. ಇದರಿಂದ ನಿಮಗೆ ಅನುಕೂಲವಾಗುವುದು. ಮನೆಯ ಸದಸ್ಯರು ನಿಮಗೆ ಸಹಕಾರಿಯಾಗಿ ನಿಲ್ಲುವರು.

ತುಲಾ (Tula)


ನಿಮ್ಮಲ್ಲಿನ ಆತ್ಮವಿಶ್ವಾಸ ಮತ್ತು ನಿಮ್ಮ ಬಗೆಗಿನ ನಂಬಿಕೆ ಸ್ಥೈರ್ಯ ಧೈರ್ಯಗಳು ನಿಮಗೆ ಅನುಕೂಲವಾಗುವುದು. ನೀವು ನಡೆಯುವ ದಾರಿಯಲ್ಲಿ ಯಾವುದೇ ಅಡೆತಡೆಗಳು ಕಂಡುಬರುವುದಿಲ್ಲ. ನಿಮ್ಮೊಂದಿಗೆ ನಿಮ್ಮ ಸಹಾಯಕ್ಕೆ ಸ್ನೇಹಿತರು ಹೆಜ್ಜೆ ಹಾಕುವರು.

ವೃಶ್ಚಿಕ (Vrushchika)


ಬಹು ನಿರೀಕ್ಷಿತವಾದ ದೂರ ಪ್ರವಾಸ ಕುರಿತು ಮಾಹಿತಿ ಲಭ್ಯವಾಗುವುದು. ಆ ಮೂಲಕ ನಿಮ್ಮ ಬಹುದಿನದ ಕನಸು ನನಸಾಗುವುದು. ಹಣಕಾಸಿನ ಪರಿಸ್ಥಿತಿಯು ಅದಕ್ಕೆ ಪೂರಕವಾಗಿ ಲಭ್ಯವಾಗುವುದರಿಂದ ಹೆಚ್ಚಿನ ಚಿಂತನೆಗೆ ಕಾರಣವಿಲ್ಲ.

ಧನು ರಾಶಿ (Dhanu)


ಎಷ್ಟೇ ಬುದ್ಧಿಶಾಲಿಯಾದರೂ ಎಲ್ಲಾ ವಿಷಯಗಳಲ್ಲೂ ಅಥವಾ ಎಲ್ಲಾ ರಂಗದಲ್ಲೂ ನೀವೇನು ಸರ್ವಜ್ಞರಲ್ಲ. ಹಾಗಾಗಿ ಅನ್ಯರ ಅನುಭವ ಮತ್ತು ಹಿತವಚನಗಳನ್ನು ಆಲಿಸಿದಲ್ಲಿ ನಿಮಗೆ ಒಳಿತಾಗುವುದು. ಆದಾಗ್ಯೂ ಜನರಲ್ಲಿ ನಿಮ್ಮ ಬಗ್ಗೆ ಗೌರವವಿರುತ್ತದೆ.

ಮಕರ (Makara)


ಅವಸರದ ನಿರ್ಧಾರಗಳಿಂದ ನಷ್ಟ ಅನುಭವಿಸಬೇಕಾಗುವುದು. ಮನೆ ಮಂದಿಯ ಸಹಕಾರ ಪಡೆಯಿರಿ. ಅವರು ನಿಮ್ಮ ಆಶೋತ್ತರಗಳನ್ನು ಈಡೇರಿಸಲು ಸಹಕಾರ ನೀಡುವರು. ಬಂಧುಗಳ ಅನಿರೀಕ್ಷಿತ ಆಗಮನದಿಂದ ಮನೆಯಲ್ಲಿ ಸಂತಸ ನೆಲೆಸುವುದು.

ಕುಂಭರಾಶಿ (Kumbha)


ಮನಸ್ಸಿನ ಚಂಚಲತೆಯಿಂದ ಹೊರ ಬನ್ನಿ. ಮನೋನಿಯಾಮಕ ರುದ್ರದೇವರನ್ನು ಭಜಿಸಿ. ಮನಸ್ಸು ಸರಿಯಿರದ ದಿನದಲ್ಲಿ ಯಾವುದೇ ಮಹತ್ತರ ನಿರ್ಣಯ ತೆಗೆದುಕೊಳ್ಳದಿರಿ.

ಮೀನರಾಶಿ (Meena)


ಬಹುದಿನದ ಆಸೆ ಈಡೇರಿದ ಸಂತೃಪ್ತಿ ನಿಮ್ಮದಾಗುವುದು. ಖಾಸಗಿ ನೌಕರರಿಗೆ ಉದ್ಯೋಗದಲ್ಲಿನ ಏಕತಾನತೆಯಿಂದ ಬೇಸರ ಮೂಡುವುದು. ಮುಂದಿನ ದಿನಗಳಲ್ಲಿ ಈ ಕೆಲಸ ಬಿಟ್ಟು ಬಿಡಲೇ ಎಂದು ಚಿಂತಿಸುವರು. ಯಾವುದಕ್ಕೂ ಹಿರಿಯರ ಸಲಹೆ ಅನುಸರಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top