fbpx
ಸಮಾಚಾರ

ಪುಟ್ಟಗೌರಿ ಖ್ಯಾತಿಯ ನಟಿ ರಂಜಿನಿಗೆ ಕಿಡಿಗೇಡಿಗಳ ಕಾಟ: ಸಹಾಯಕ್ಕಾಗಿ ರಂಜಿನಿ ಮನವಿ

ಈಚೆಗೆ ಸೆಲೆಬ್ರಿಟಿಗಳ ಸೋಶಿಯಲ್ ಮೀಡಿಯಾ ಖಾತೆಗಳು ಹ್ಯಾಕ್ ಆಗುವುದು ಸಾಮಾನ್ಯವಾಗಿ ಬಿಟ್ಟಿದೆ. ನಟಿಯರಾದ ಮಾನ್ವಿತಾ ಕಾಮತ್, ಆಶಿಕಾ ರಂಗನಾಥ್, ನಟ ದೀಕ್ಷಿತ್ ಶೆಟ್ಟಿ ಮುಂತಾದ ಸೆಲೆಬ್ರಿಟಿಗಳ ಸಾಮಾಜಿಕ ಜಾಲತಾಣದ ಖಾತೆಗಳನ್ನು ಹ್ಯಾಕರ್‌ಗಳು ಹ್ಯಾಕ್ ಮಾಡಿದ್ದರು. ಇದೀಗ ಸೈಬರ್‌ ಕಳ್ಳರು ನಟಿ ರಂಜಿನಿ ರಾಘವನ್ ಅವರ ಫೇಸ್ಬುಕ್ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ.ಈ ಬಗ್ಗೆ ಇನ್​ಸ್ಟಾಗ್ರಾಂ ಮೂಲಕ ಸ್ವತಃ ರಂಜನಿ ಮಾಹಿತಿ ನೀಡಿದ್ದಾರೆ.

 

 

‘ನನ್ನ ಫೇಸ್​ಬುಕ್​ ಖಾತೆಯನ್ನು ಈ ವ್ಯಕ್ತಿ ಹ್ಯಾಕ್​ ಮಾಡಿದ್ದಾರೆ. ದಯವಿಟ್ಟು ಇದನ್ನು ರಿಪೋರ್ಟ್​ ಮಾಡಿ ಮತ್ತು ನನ್ನ ಖಾತೆಯನ್ನು ಮರಳಿ ಪಡೆಯಲು ಸಹಾಯ ಮಾಡಿ’ ಎಂದು ಇನ್​ಸ್ಟಾಗ್ರಾಮ್​ನಲ್ಲಿ ರಂಜನಿ ಪೋಸ್ಟ್​ ಮಾಡಿದ್ದು, ಅನುಮಾನ ವ್ಯಕ್ತವಾಗಿರುವ ಹ್ಯಾಕರ್​ ಫೋಟೋವನ್ನೂ ಕೂಡ ಅವರು ಶೇರ್​ ಮಾಡಿಕೊಂಡಿದ್ದಾರೆ.

ನಕಲಿ ಖಾತೆಯನ್ನು ಬಳಸಿಕೊಂಡು ಹ್ಯಾಕ್ ಮಾಡಲಾಗಿರುತ್ತದೆ ಎಂದು ಅದಕ್ಕೆ ಹಲವು ಕಮೆಂಟ್​ ಮಾಡಿದ್ದಾರೆ. ಸೈಬರ್‌ಕ್ರೈಂಗೆ ರಿಪೋರ್ಟ್ ಮಾಡಿ, ನಿಮ್ಮ ಪೇಜ್ ಸಿಗುತ್ತಿಲ್ಲ ಎಂದು ಬಹಳಷ್ಟು ಜನರು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. ಹಾಗೆಯೇ ಕೆಲವರು ತಾವು ರಿಪೋರ್ಟ್ ಮಾಡಿದ್ದೇವೆ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top