fbpx
ಸಮಾಚಾರ

ಐಪಿಎಲ್ ರದ್ದು: ಬಿಸಿಸಿಐಗೆ ಆದ ನಷ್ಟ ಎಷ್ಟು ಕೋಟಿ ಗೊತ್ತಾ?

14ನೇ ಆವೃತ್ತಿಯ ಐಪಿಎಲ್ ಕೊರೊನಾ ಕಾಟದಿಂದಾಗಿ ಅರ್ಧಕ್ಕೆ ಸ್ಥಗಿತಗೊಂಡಿದೆ. ಇದರಿಂದಾಗಿ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿಕೊಂಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ 2000 ಕೋಟಿ ರೂ. ನಷ್ಟ ಸಂಭವಿಸಿದೆ.

ಬಿಸಿಸಿಐ ಮೂಲಗಳ ಪ್ರಕಾರ, ಐಪಿಎಲ್ ರದ್ದತಿಯಿಂದ ಉಂಟಾಗಲಿರುವ ನಷ್ಟ ಸುಮಾರು 2 ಸಾವಿರ ಕೋಟಿಯಿಂದ 2500 ಕೋಟಿ ಎಂದು ಅಂದಾಜಿಸಲಾಗಿದೆ. ಇಲ್ಲಿ ಮುಖ್ಯವಾಗಿ ಪ್ರಸಾರ ಆದಾಯದಲ್ಲಿ ಅತಿದೊಡ್ಡ ನಷ್ಟವಾಗಲಿದೆ. ಕಳೆದ ಸೀಸನ್​ನಿಂದ ಖಾಲಿ ಸ್ಟೇಡಿಯಂಗಳಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಬೋರ್ಡ್ ಮತ್ತು ಫ್ರಾಂಚೈಸಿಗಳಿಗೆ ಟಿಕೆಟ್ ಆದಾಯವೂ ನಷ್ಟವಾಗುತ್ತಿದೆ.

ಸದ್ಯ 29 ಪಂದ್ಯಗಳು ಮುಗಿದಿವೆ. ಇನ್ನು 31 ಪಂದ್ಯಗಳು ಬಾಕಿಯಿವೆ. ಒಂದುವರ್ಷದ ಐಪಿಎಲ್‌ ನೇರಪ್ರಸಾರಕ್ಕೆ ಸ್ಟಾರ್‌ನ್ಪೋರ್ಟ್ಸ್ ಬಿಸಿಸಿಐಗೆ 3269 ಕೋಟಿ ರೂ. ನೀಡುತ್ತದೆ. ಸದ್ಯ ನಡೆದಿರುವ 29 ಪಂದ್ಯಗಳಿಗೆ 1,580 ಕೋ.ರೂ. ಮಾತ್ರ ನೀಡಲಿದೆ. ಉಳಿದ 1690 ಕೋ.ರೂ. ನಷ್ಟ. ಇನ್ನು ವಿವೋ, ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ನೀಡುವ 440 ಕೋಟಿ ರೂ.ನಲ್ಲಿ ಅರ್ಧಹಣ ಕಡಿತಗೊಳ್ಳಲಿದೆ. ಇತರೆ ಪ್ರಾಯೋಕರುಗಳಿಂದ ಬರಬೇಕಾಗಿರುವ 600 ಕೋಟಿ ರೂ.ಗಳಲ್ಲಿ ಅರ್ಧಹಣ ಮಾತ್ರ ಬರಲಿದೆ.

ಈ ಅಪಾಯ ಎದುರಾಗ ಬಾರದು ಎಂದು ಬಿಸಿಸಿಐ ಸಾಕಷ್ಟು ಕಷ್ಟ ಪಟ್ಟು ಕೋವಿಡ್‌-19 ಸಂಕಷ್ಟದ ನಡುವೆಯೂ ಟೂರ್ನಿ ಆಯೋಜನೆ ಮುಂದುವರಿಸಿತ್ತು. ಆದರೆ, ಪರಿಸ್ಥಿತಿ ತೀರಾ ಹದಗೆಟ್ಟ ಪರಿಣಾಮ ಆಟಗಾರರ ಮತ್ತು ಸಿಬ್ಬಂದಿಯ ರಕ್ಷಣೆ ಉದ್ದೇಶವಾಗಿ ಭಾರಿ ನಷ್ಟವನ್ನೂ ಲೆಕ್ಕಿಸದೆ ದಿಟ್ಟ ನಿರ್ಧಾರ ತೆಗೆದುಕೊಂಡಿದೆ.

“ಟೂರ್ನಿಯನ್ನು ಮಧ್ಯಕ್ಕೆ ಮುಂದೂಡಿರುವ ಪರಿಣಾಮ ನಮಗೆ ಏನಿಲ್ಲ ಅಂದರೂ 2000-2500 ಕೋಟಿ ರೂಗಳ ನಷ್ಟವಾಗಲಿದೆ. ಪಕ್ಕಾ ಲೆಕ್ಕಾಚಾರ ಮಾಡಿ ಹೇಳುವುದಾದರೆ ಕನಿಷ್ಠ 2200 ಕೋಟಿ ರೂ.ಗಳ ನಷ್ಟವಂತೂ ಖಚಿತ,” ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top