fbpx
ಸಮಾಚಾರ

“ನಾನು ತಪ್ಪು ಮಾಡಿಲ್ಲ” ಭಾವುಕರಾದ ಡಿಸಿ ರೋಹಿಣಿ ಸಿಂಧೂರಿ

ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವಾಗಿ 24 ತಾಸಿನಲ್ಲಿ 22 ಜನ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾಧಿಕಾರಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ 10 ವರ್ಷದ ಸೇವೆಯಲ್ಲಿ ನಾನು ಎಂದು ಈ ರೀತಿ ಕೆಲಸ ಮಾಡಿಲ್ಲ ಎಂದು ತಮ್ಮ ವಿರುದ್ಧ ಕೇಳಿ ಬಂದ ಎಲ್ಲ ಆರೋಪಗಳನ್ನ ತಳ್ಳಿ ಹಾಕಿದ್ದಾರೆ.

ಮೈಸೂರು ಜಿಲ್ಲಾಧಿಕಾರಿಯಾಗಿ ನಾನು ಚಾಮರಾಜನಗರ ಅಥವಾ ಇನ್ನಾವುದೇ ಜಿಲ್ಲೆಗೆ ಆಮ್ಲಜನಕದ ಸರಬರಾಜನ್ನು ತಡೆಹಿಡಿಯಲಿಲ್ಲ ಅಥವಾ ನಿಯಂತ್ರಿಸಲಿಲ್ಲ. ಆಮ್ಲಜನಕದ ಪೂರೈಕೆ ಸಂಪೂರ್ಣವಾಗಿ ಸರಬರಾಜುದಾರ ಅಥವಾ ಮರುಪೂರಣೆ ಮಾಡುವವರು ಮತ್ತು ಜಿಲ್ಲೆಯ ನಡುವೆ ಇರುತ್ತದೆ. ಇನ್ನೊಬ್ಬ ಜಿಲ್ಲಾಧಿಕಾರಿಗೆ ಇದರಲ್ಲಿ ಯಾವುದೇ ಪಾತ್ರ ಅಥವಾ ಅಧಿಕಾರವಿಲ್ಲ. ಉದಾಹರಣೆಗೆ ಮೈಸೂರು ಆಮ್ಲಜನಕ ಸರಬರಾಜು ಬಳ್ಳಾರಿಯಿಂದ ಬಂದಿದೆ. ಬಳ್ಳಾರಿಯಿಂದ ಸರಬರಾಜುದಾರರು ಕಡಿಮೆ ಸರಬರಾಜು ಮಾಡಿದರೆ ನಾನು ಬಳ್ಳಾರಿ ಜಿಲ್ಲಾಧಿಕಾರಿಯನ್ನು ದೂಷಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

 

ಚಾಮರಾಜನಗರ ಆಕ್ಸಿಜನ್​ ದುರಂತ ಪ್ರಕರಣ ಕುರಿತು ಅಲ್ಲಿನ ಡಿಸಿ ಡಾ.ಎಂ.ಆರ್.ರವಿ ಮಾಡಿರುವ ಆರೋಪಕ್ಕೆ ಗದ್ಗದಿತರಾಗಿ ಪ್ರತಿಕ್ರಿಯಿಸಿದ ರೋಹಿಣಿ ಸಿಂಧೂರಿ, ಸಾವು ಎಲ್ಲಿ ಆದರೂ ಅದು ಸಾವಿ ಸಾವೇ. ಚಾಮರಾಜನಗರ ಜಿಲ್ಲೆಯಲ್ಲಿ ಆಮ್ಲಜನಕ ಕೊರತೆಯಿಂದ ರೋಗಿಗಳು ಮೃತಪಟ್ಟಿರುವುದು ನೋವುಂಟು ಮಾಡಿದೆ. ಆದರೆ ಅಲ್ಲಿನ ಜಿಲ್ಲಾಧಿಕಾರಿ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು. ಆಕ್ಸಿಜನ್ ಖಾಲಿ ಆಗುತ್ತಿದೆ ಅನ್ನುವಾಗ ಅಲರ್ಟ್ ಆಗಿ ತರಿಸಿಕೊಳ್ಳಬೇಕಿತ್ತು. ಅದು ಒಬ್ಬ ಜಿಲ್ಲಾಧಿಕಾರಿಯ ಜವಾಬ್ದಾರಿಯೂ ಆಗಿತ್ತು. ಮೈಸೂರಿನ ಕೋವಿಡ್ ಆಸ್ಪತ್ರೆಯಿಂದ ಕೊನೇ ಕ್ಷಣದಲ್ಲಿ 40 ಸಿಲಿಂಡರ್ ಕಳುಹಿಸಿಕೊಟ್ಟಿದ್ದೇವೆ. ಇನ್ನೂ ಹೇಗೆ ಸ್ಪಂದಿಸಬೇಕಿತ್ತು? ಎಂದು ಪ್ರಶ್ನಿಸಿದರು. ನಾನು ಚಾಮರಾಜನಗರಕ್ಕೆ ಆಕ್ಸಿಜನ್​ ತಡೆದಿಲ್ಲ. ತನಿಖೆ ಬಳಿಕ ಸತ್ಯಾಸತ್ಯತೆ ಗೊತ್ತಾಗುತ್ತೆ. ಇಲ್ಲಸಲ್ಲದ ಆರೋಪದಿಂದ ನನಗೆ ನೋವಾಗಿದೆ ಎಂದು ಭಾವುಕರಾದರು

 

ನಮಗೂ ಲಿಕ್ವಿಡ್ ಆಕ್ಸಿಜನ್ ಬಳ್ಳಾರಿಯಿಂದ ಬರುತ್ತೆ. ಝೀರೋ ಟ್ರಾಫಿಕ್ ಮಾಡಿಸಿ ಬಳ್ಳಾರಿಯಿಂದ ಇಲ್ಲಿಗೆ ಆಕ್ಸಿಜನ್ ತೆಗೆದುಕೊಂಡು ಬರುತ್ತಿದ್ದೇವೆ. ಇಲ್ಲಿ ಏನಾದ್ರೂ ಆದ್ರೆ ಬಳ್ಳಾರಿಯವರ ಮೇಲೆ ಆರೋಪ ಮಾಡೋಕೆ ಆಗುತ್ತಾ? ನಾವು ಜನರ ಪ್ರಾಣ ಉಳಿಸಲು 24/7 ಕೆಲಸ ಮಾಡುತ್ತಿದ್ದೇವೆ. ನಮ್ಮ ಜಿಲ್ಲೆಯಲ್ಲಿ ಈ ರೀತಿ ಆಗಿದ್ದರೆ ಯಾರನ್ನಾದರೂ ಹೇಗಾದರೂ ಸಂಪರ್ಕಿಸಿ ಆಕ್ಸಿಜನ್ ಪಡೆಯುತ್ತಿದ್ದೇವು. ಅವರು ಆ ಕೆಲಸ ಮಾಡದೇ ನಮ್ಮ ಮೇಲೆ ಆರೋಪ ಮಾಡಿದ್ರೆ ನೋವಾಗುತ್ತೆ ಎಂದು ರೋಹಿಣಿ ಸಿಂಧೂರಿ ಭಾವುಕರಾದ್ರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top