fbpx
ಸಮಾಚಾರ

ಕ್ರಿಕೆಟಿಗನನ್ನು ಅಪಹರಿಸಿದ ದುಷ್ಕರ್ಮಿಗಳು: ಮನಬಂದಂತೆ ಥಳಿಸಿ ತಲೆಗೆ ಗನ್​ ಹಿಡಿದು ಬೆದರಿಸಿದ್ದಾರೆ

ಆಸ್ಟ್ರೇಲಿಯಾ ಟೆಸ್ಟ್ ತಂಡದ ಮಾಜಿ ಆಟಗಾರ ಸ್ಟುವರ್ಟ್ ಮ್ಯಾಕ್‍ಗಿಲ್ ಅವರ ಅಪಹರಣ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸ್ಟುವರ್ಟ್ ಮ್ಯಾಕ್‍ಗಿಲ್ ಅವರನ್ನು ಏಪ್ರಿಲ್ 14 ರಂದು ಸಿಡ್ನಿಯ ನಿವಾಸದಿಂದ ಅಪಹರಣ ಮಾಡಲಾಗಿತ್ತು. ಬಳಿಕ ಬಿಡುಗಡೆ ಮಾಡಲಾಗಿದೆ.

ಕಿಡ್ನಾಪ್ ಆರೋಪದ ಮೇಲೆ ಸಿಡ್ನಿ ಪೊಲೀಸರು ನಾಲ್ಕು ಜನರನ್ನು ಬಂಧಿಸಿದ್ದಾರೆ. ಸಿಡ್ನಿ ನಗರದಲ್ಲಿ ಶ್ರೀಮಂತರೇ ಹೆಚ್ಚಿರುವ ಪ್ರದೇಶವಾದ ಲೋಯರ್ ನಾರ್ತ್​ ಶೋರ್​ನಲ್ಲಿ ವಾಸಿಸುವ 50 ವರ್ಷದ ಮ್ಯಾಕ್​​​ಗಿಲ್​​​ರನ್ನು ಕಳೆದ ತಿಂಗಳು ಅಪಹರಿಸಿ ನಂತರ ಬಿಡುಗಡೆ ಮಾಡಲಾಗಿತ್ತು ಎನ್ನಲಾಗಿದೆ.

ಏಪ್ರಿಲ್ 14 ರಂದು ಮೂರು ಜನರು ಮ್ಯಾಕ್​​​ಗಿಲ್​​ರನ್ನು ದಾರಿಯಲ್ಲಿ ನಿಲ್ಲಿಸಿ ಕಾರಿನೊಳಗೆ ಕೂರಿಸಿಕೊಂಡು ಅಪಹರಿಸಿದ್ದರು. ಒಂದು ಗಂಟೆ ಕಾಲ ನಗರದ ಹೊರಗಣ ಪ್ರದೇಶವೊಂದಕ್ಕೆ ಗಾಡಿ ಓಡಿಸಿಕೊಂಡು ಹೋಗಿ ಅಲ್ಲಿ ಅವರನ್ನು ಥಳಿಸಿ, ಗನ್​ನಿಂದ ಬೆದರಿಸಿ, ಬಳಿಕ ಬಿಡುಗಡೆ ಮಾಡಿದ್ದರು ಎನ್ನಲಾಗಿದೆ. “ಒಂದೇ ಗಂಟೆ ಅವರನ್ನು ಬಂಧಿಸಿಟ್ಟಿದ್ದರು. ಆದರೆ ಅದರಿಂದ ಮ್ಯಾಕ್​​​ಗಿಲ್​ ಭಾರೀ ಗಾಬರಿಗೆ ಒಳಗಾಗಿದ್ದರು” ಎಂದು ಪೊಲೀಸ್ ಸೂಪರಿಂಟೆಂಡೆಂಟ್ ಆ್ಯಂಥೋನಿ ಹೋಲ್ಟನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಕುರಿತು ಏಪ್ರಿಲ್ 20ರಂದು ಪ್ರಕರಣ ದಾಖಲಾಗಿದ್ದು, ದರೋಡೆ ಮತ್ತು ಅಪರಾಧ ಪತ್ತೆ ದಳ ಈ ಪ್ರಕರಣವನ್ನು ತನಿಖೆ ನಡೆಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಸ್ಟುವರ್ಟ್ ಮ್ಯಾಕ್‍ಗಿಲ್, ಆಸ್ಟ್ರೇಲಿಯಾ ಪರ 44 ಟೆಸ್ಟ್ ಪಂದ್ಯಗಳಿಂದ 208 ವಿಕೆಟ್ ಪಡೆದಿದ್ದಾರೆ. 1998 ರಿಂದ 2008ರ ವರೆಗೆ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top