fbpx
ಸಮಾಚಾರ

ಕೊರೋನಾ ರೋಗಿಗಳ ನೆರವಿಗೆ ಧಾವಿಸಿದ ಸುದೀಪ್: ಪ್ರತಿದಿನ 300 ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡಿದ ಕಿಚ್ಚ

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ವಿಪರೀತ ಜಾಸ್ತಿಯಾಗಿದೆ. ಅನೇಕ ಮಂದಿ ಆಕ್ಸಿಜನ್ ಸಿಗದೆ ಪರದಾಡುತ್ತಿದ್ದಾರೆ. ಕೊರೋನಾ ಹೆಮ್ಮಾರಿಯನ್ನ ಕಟ್ಟಿ ಹಾಕಲು ಆಯಾ ರಾಜ್ಯ ಸರ್ಕಾರಗಳು ಲಾಕ್​ಡೌನ್​ ಮಾದರಿಯ ಕ್ರಮಗಳ ಮೊರೆ ಹೋಗಿವೆ. ಆದರೂ ಕೊರೊನಾ ಹತೋಟಿಗೆ ಬರುತ್ತಿಲ್ಲ.ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್‌ಗಾಗಿ ಜನರು ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಕೊರೋನಾ ಪೀಡಿತರ ನೆರವಿಗೆ ನಟ ಸುದೀಪ್ ಧಾವಿಸಿದ್ದಾರೆ.

 

 

ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ಮೂಲಕ ಸರಿಸುಮಾರು 300 ಆಕ್ಸಿಜನ್ ಸಿಲಿಂಡರ್​ಗಳನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ನೀಡುವ ಮೂಲಕ, ಕೊರೊನಾ ಸೋಂಕಿತರ ಸಹಾಯಕ್ಕೆ ಬಂದಿದ್ದಾರೆ. ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರೇರಣೆಯ ಕೆಲಸ ನಡೆದಿದೆ.

ಅಗತ್ಯವಿರುವ ಆಸ್ಪತ್ರೆ ಹಾಗೂ ರೋಗಿಗಳಿಗೆ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ. ಬೆಂಗಳೂರಿನ ಸರ್ಕಾರಿ ವೈದ್ಯರ ಸಂಪರ್ಕದ ಮೂಲಕ ಈಗಾಗಲೇ 300 ಆಕ್ಸಿಜನ್ ಸಿಲಿಂಡರ್ ನೀಡಲಾಗಿದೆ. ಬುಧವಾರ ಮತ್ತೊಂದು ಹಂತದಲ್ಲಿ ಸಿಲಿಂಡರ್ ಗಳ ವ್ಯವಸ್ಥೆಯನ್ನು ಟ್ರಸ್ಟ್ ಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top