fbpx
ಸಮಾಚಾರ

ಶಾಕಿಂಗ್: ಕೊರೋನಾದಿಂದಾಗಿ ಅಪ್ಪ ಸಾವು: ಉರಿಯುತ್ತಿದ್ದ ಚಿತೆಗೆ ಹಾರಿದ ಮಗಳು

ದೇಶಕ್ಕೆ ಹೆಮ್ಮಾರಿಯಂತೆ ಅಪ್ಪಳಿಸಿರುವ ಕೊರೋನಾ ವೈರಸ್ ನಿಂದಾಗಿ ದೇಶದ ಲಕ್ಷಾಂತರ ಮಂದಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದಾರೆ.. ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಔಷಧಿಗಳ ಸರಿಯಾದ ವ್ಯವಸ್ಥೆ ಇಲ್ಲದೆ ಜನರು ಪ್ರಾಣ ಬಿಡುತ್ತಿದ್ದಾರೆ.

ಈ ಮದ್ಯೆ ಕೊರೋನಾದಿಂದಾಗಿ ತಂದೆಯನ್ನು ಕಳೆದುಕೊಂಡ ಮಗಳೊಬ್ಬಳು ತಂದೆಯ ಚಿತೆಗೆ ಹಾರಿರುವ ಆಘಾತಕಾರಿ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಘಟನೆಯಲ್ಲಿ ಮಹಿಳೆಯ ದೇಹ ಶೇ.70ರಷ್ಟು ಸುಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ, ಜೋಧ್‌ ಪುರದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ.

74 ವರ್ಷದ ದಾಮೋದರ್ ದಾಸ್ ಶಾರದಾ ಎಂಬ ವ್ಯಕ್ತಿ ರಾಜಸ್ಥಾನದ ಬರ್ಮರ್‌ನ ಆಸ್ಪತ್ರೆಯಲ್ಲಿ ಕೋವಿಡ್‌ನಿಂದ ಮೃತಪಟ್ಟಿದ್ದರು. ಅವರ ಮೃತದೇಹದ ಅಂತ್ಯಕ್ರಿಯೆ ನಡೆಸುವ ವೇಳೆ ಮೂವರು ಹೆಣ್ಣು ಮಕ್ಕಳ ಪೈಕಿ ಕಿರಿಯವಳಾದ ಚಂದ್ರ ಶಾರದಾ ಅವರು ಅಪ್ಪನ ಅಗಲಿಕೆಯ ನೋವಲ್ಲಿ ಉರಿಯುತ್ತಿದ್ದ ಚಿತೆ ಮೇಲೆ ಹಾರಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top