fbpx
ಸಮಾಚಾರ

“ತೇಜಸ್ವಿ ಸೂರ್ಯ ಕಸಬ್ ಗಿಂತ ಡೇಂಜರಸ್!” ತೇಜಸ್ವಿ ಬಗ್ಗೆ ನಟ ಸಿದ್ಧಾರ್ಥ್ ವಿವಾದಾತ್ಮಕ ಟ್ವೀಟ್

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರನ್ನು ಭಯೋತ್ಪಾದಕ ಅಜ್ಮಲ್ ಕಸಬ್ ನಿಗೆ ಹೋಲಿಸಿ ನಟ ಸಿದ್ಧಾರ್ಥ್ ಟ್ವೀಟ್ ಮಾಡಿದ್ದಾರೆ. ಬೆಂಗಳೂರು ಬೆಡ್ ದಂಧೆ ವಿಚಾರಕ್ಕೆ ಕೋಮುಬಣ್ಣ ಬಳಿಯಲು ಯತ್ನಿಸಿದ್ದಕ್ಕಾಗಿ ಸಿದ್ದಾರ್ಥ್ ತೇಜಸ್ವಿಯನ್ನು ಕಸಬ್ ಗೆ ಹೋಲಿಕೆ ಮಾಡಿದ್ದಾರೆ.

 

 

ಸಂಸದ ತೇಜಸ್ವಿ ಸೂರ್ಯ ಅವರು ಬಿಬಿಎಂಪಿಯ ‘ಬೆಡ್ ಬ್ಲಾಕಿಂಗ್’ ಹಗರಣ ಬಯಲಿಗೆಳೆಯುವ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದ 206 ಸಿಬ್ಬಂದಿಗಳ ಪೈಕಿ ಕೇವಲ 17 ಮಂದಿ ಮುಸ್ಲಿಮರ ಹೆಸರುಗಳನ್ನಷ್ಟೆ ಹೇಳಿ ‘ಮದರಸಾ ನಡೆಸುತ್ತಿದ್ದೀರಾ?’ ಎಂದು ಪ್ರಶ್ನೆ ಮಾಡಿದ್ದರು. ಭ್ರಷ್ಟಾಚಾರಕ್ಕೆ ಧರ್ಮದ ಬಣ್ಣ ಬಳಿದುದ್ದಕ್ಕೆ ತೇಜಸ್ವಿ ಸೂರ್ಯ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿತ್ತು.

ಇದನ್ನು ಖಂಡಿಸುವ ಭರದಲ್ಲಿ ನಟ ಸಿದ್ದಾರ್ಥ್ ಅವರು ”ಅಜ್ಮಲ್ ಕಸಬ್​ಗಿಂತ ಹತ್ತು ವರ್ಷ ಚಿಕ್ಕವನಾದ ತೇಜಸ್ವಿ ಸೂರ್ಯ ಕಸಬ್​ಗಿಂತೂ ಹೆಚ್ಚು ಅಪಾಯಕಾರಿ” ಎಂದು ಟ್ವೀಟ್ ಮಾಡಿದ್ದಾರೆ. ಸಿದ್ದಾರ್ಥ್ ಅವರ ಈ ಟ್ವೀಟ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಒಳಗಾಗುತ್ತಿದ್ದು ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top