fbpx
ಸಮಾಚಾರ

ಮೇ 07: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ

ಮೇ 7, 2021 ಶುಕ್ರವಾರ
ವರ್ಷ : 1943 ಪ್ಲಾವ
ತಿಂಗಳು : ಚೈತ್ರ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಏಕಾದಶೀ 3:31 pm
ನಕ್ಷತ್ರ : ಪೂರ್ವಾ ಭಾದ್ರ 12:26 pm
ಯೋಗ : ವೈಧೃತಿ 7:30 pm
ಕರಣ : ಬಾಲವ 3:31 pm ಕುಲವ 4:22 am

Time to be Avoided
ರಾಹುಕಾಲ : 10:42 am – 12:16 pm
ಯಮಗಂಡ : 3:24 pm – 4:58 pm
ದುರ್ಮುಹುರ್ತ : 8:30 am – 9:20 am, 12:41 pm – 1:31 pm
ವಿಷ : 10:58 pm – 12:44 am
ಗುಳಿಕ : 7:34 am – 9:08 am

Good Time to be Used
ಅಮೃತಕಾಲ : Nil
ಅಭಿಜಿತ್ : 11:51 am – 12:41 pm

Other Data
ಸೂರ್ಯೋದಯ : 5:56 am
ಸುರ್ಯಾಸ್ತಮಯ : 6:35 pm
ರವಿರಾಶಿ : ಮೇಷ
ಚಂದ್ರರಾಶಿ : ಮೀನ

 

 

ಮೇಷ (Mesha)

 

ಸಣ್ಣವಿಷಯಗಳನ್ನು ದೊಡ್ಡದು ಮಾಡುವುದು ತರವಲ್ಲ. ಕೆಲವೊಮ್ಮೆ ಅಗತ್ಯಕ್ಕಿಂತ ಹೆಚ್ಚು ಕುತೂಹಲವು ನಿಮಗೆ ಭ್ರಮ ನಿರಶನ ಮಾಡುವುದು. ಋಣಾತ್ಮಕ ಚಿಂತನೆಗಳು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದು.

ವೃಷಭ (Vrushabh)


ಪರಾಕ್ರಮ ಹಾಗೂ ಧೈರ್ಯದ ಕೆಲಸದಲ್ಲಿ ಪ್ರಚಂಡ ದೊರೆಯುವುದು. ಬಂಧುಪ್ರೇಮ ಸ್ವಜನಪ್ರೇಮದಿಂದ ಉದ್ಯೋಗದಲ್ಲಿ ಪ್ರಗತಿ ಕಂಡುಬರುವುದು. ಮನೆಯ ಶುಭಕಾರ್ಯಗಳಿಗೆ ಇಂದು ಮುಹೂರ್ತ ಉತ್ತಮವಿದೆ. ಶುಭ ಸುದ್ದಿಯೊಂದನ್ನು ಕೇಳುವಿರಿ.

ಮಿಥುನ (Mithuna)


ಮಹತ್ವಾಕಾಂಕ್ಷೆಯು ಬಹು ಪ್ರಯಾಸದಿಂದ ಈಡೇರುವುದು. ಸಮಾಜದಲ್ಲಿ ಕೆಲಸ ಕಾರ್ಯದಲ್ಲಿ ಮುಂದಾಳುತನ ವಹಿಸಿಕೊಳ್ಳುವಿರಿ. ಜನಾನುಕೂಲತೆಯಿಂದ ಉದ್ಯೋಗದಲ್ಲಿ ಪ್ರಗತಿ ಕಂಡು ಬರುವುದು. ಆರ್ಥಿಕ ಸಂಕಷ್ಠ ಪರಿಹಾರವಾಗುವುದು.

ಕರ್ಕ (Karka)


ಭಾಗ್ಯಬರುವ ಸಮಯದಲ್ಲಿ ಕೈಕೊಡುವುದರಿಂದ ಮಾನಸಿಕ ಜಿಗುಪ್ಸೆ ಉಂಟಾಗುವದು. ಧಾರ್ಮಿಕ ಮನೋಭಾವನೆಗಳನ್ನು ಬೆಳೆಸಿಕೊಳ್ಳುವುದು ಒಳ್ಳೆಯದು. ಕತ್ತಲಾದ ಮೇಲೆ ಬೆಳಕು ಆಗುವುದು ನಿರಾಶರಾಗಬೇಡಿರಿ.

ಸಿಂಹ (Simha)


ಮನಸ್ಸಿನ ಭಾವನೆಗಳಿಗೆ ಪೆಟ್ಟು ಬೀಳುವುದರಿಂದ ಭಾವಾವೇಶಕ್ಕೆ ಒಳಗಾಗುವಿರಿ. ಆಮೂಲಕ ನೀವು ಪ್ರತಿಕ್ರಿಯಿಸುವ ರೀತಿಯು ಬಂಧುಬಾಂಧವರ ನಡುವಿನ ಸಂಬಂಧಕ್ಕೆ ತೊಂದರೆ ಆಗುವುದು. ಆದಷ್ಟು ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು ಕೌಟುಂಬಿಕ ನೆಮ್ಮದಿ ತನ್ನಿರಿ.

ಕನ್ಯಾರಾಶಿ (Kanya)


ವ್ಯಾಪಾರ-ವ್ಯವಹಾರದಲ್ಲಿ ನಿರೀಕ್ಷೆಗೆ ತಕ್ಕಂತೆ ಹಣಕಾಸು ಒದಗಿ ಬರುವುದು. ಅದಾಗ್ಯೂ ಗುರುವಿನ ಅವಕೃಪೆಯಿಂದ ಸಣ್ಣಪುಟ್ಟ ಅಡೆತಡೆಗಳು ಎದುರಾಗುವ ಸಂಭವವಿರುತ್ತದೆ. ಕುಲದೇವರ ಪ್ರಾರ್ಥನೆ ಮಾಡಿ. ಮನೆಯ ಹಿರಿಯರ ಸಲಹೆಯನ್ನು ಅಂಗೀಕರಿಸಿರಿ.

ತುಲಾ (Tula)


ಇಂದು ಉತ್ತಮ ದಿನವನ್ನಾಗಿ ಕಳೆಯುವಿರಿ. ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸು ನಿಮ್ಮದಾಗುವುದು. ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿದ್ದು ಪ್ರಖ್ಯಾತ ಜನರ ಭೇಟಿ ಆಗಲಿದೆ. ಮನೋಕಾಮನೆಗಳು ಪೂರ್ಣಗೊಳ್ಳುವವು.

ವೃಶ್ಚಿಕ (Vrushchika)


ಶಾರೀರಿಕ ಅಸ್ವಸ್ಥತೆಯು ಮನಸ್ಸಿನ ದುಗುಡವನ್ನು ಹೆಚ್ಚಿಸುವುದು. ಸಂಪಾದನೆಗಿಂತ ವೆಚ್ಚ ಹೆಚ್ಚಾಗುವುದು. ಮಾನಹಾನಿಯಾಗುವ ಸಾಧ್ಯತೆಗಳು ಅಧಿಕ. ತಾಳ್ಮೆಯಿಂದ ಇರುವುದು ಒಳ್ಳೆಯದು. ಹನುಮಾನ್ ಚಾಲೀಸ್ ಪಠಣ ಮಾಡಿ.

ಧನು ರಾಶಿ (Dhanu)


ಬಂಧುಬಳಗದವರ ಭೇಟಿಯು. ಮಹಿಳೆಯರ ವಾಕ್ಚಾತುರ್ಯಕ್ಕೆ ಪ್ರೋತ್ಸಾಹ ದೊರೆಯಲಿದೆ. ಸರಕು ಸಾಗಣೆ ವ್ಯಾಪಾರಸ್ಥರಿಗೆ ಉತ್ತಮ ದಿನ. ಅವರು ಮಾಡುವ ವ್ಯವಹಾರಗಳಲ್ಲಿ ಅಧಿಕ ಲಾಭಾಂಶವನ್ನು ಹೊಂದುವರು.

ಮಕರ (Makara)


ಆರೋಗ್ಯದ ವಿಷಯದಲ್ಲಿ ಸ್ವಯಂ ಚಿಕಿತ್ಸೆ ಒಳ್ಳೆಯದಲ್ಲ. ಸೂಕ್ತ ವೈದ್ಯರ ಮಾಹಿತಿಯ ಅನುಸಾರ ಔಷಧ ಸೇವನೆ ಮಾಡುವುದು ಒಳಿತು. ಆಹಾರ ಪಥ್ಯೆ ಮತ್ತು ಸೂಕ್ತ ವ್ಯಾಯಾಮದ ಕೊರತೆಯಿಂದ ರೋಗ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಕುಂಭರಾಶಿ (Kumbha)


ಆತ್ಮೀಯ ಸ್ನೇಹಿತ ಅಥವಾ ಬಂಧುವಿನ ಭೇಟಿಯಿಂದಾಗಿ ನಿಮ್ಮ ಮನಸ್ಸು ನಿರಾಳವಾಗುವುದು. ನಿಮ್ಮ ಸುಖದುಃಖಗಳನ್ನು ಅವರ ಮುಂದೆ ಹಂಚಿಕೊಳ್ಳುವಿರಿ. ನೊಂದ ಮನಸ್ಸಿಗೆ ಸಾಂತ್ವನ ದೊರೆಯುವುದು. ಸಂಗಾತಿ ಆರೋಗ್ಯದಲ್ಲಿ ಕಾಳಜಿ ಅಗತ್ಯ.

ಮೀನರಾಶಿ (Meena)


ಉದ್ಯೋಗದಲ್ಲಿ ಹೆಚ್ಚಿನ ಕಾರ್ಯತತ್ಪರತೆಯಿಂದ ಮೇಲಾಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ. ನಿಮಗೆ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವಿರಿ. ಗೆಳೆಯರ ಬೆಂಬಲ ದೊರೆಯುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top